ಬೀದರ - ಒಂದೇ ರಾತ್ರಿ ಒಂಬತ್ತು ಮನೆಗೆ ಕನ್ನ, ಗ್ರಾಮಗಳಿಗೆ ನುಗ್ಗಿರೋ ದರೋಡೆ ಗ್ಯಾಂಗ್ ಕಂಡು ಇಡೀ ಗ್ರಾಮಸ್ಥರೇ ಶಾಕ್ ಆಗಿದ್ದಾರೆ. ಎರಡು ಬೈಕ್ ಮೇಲೆ ಬಂದಿದ್ದ ಆರು ಜನರ ಗ್ಯಾಂಗ್ ಬೀದರ್ ಪೊಲೀಸರ ನಿದ್ದೆಗೆಡಿಸಿದೆ. ಕೀಲಿ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡಿರುವ ಖದೀಮರು ಮನೆಗಳನ್ನ ದೋಚಿ ಪರಾರಿಯಾಗಿದ್ದಾರೆ. ಖದೀಮರ ಓಡಾಟವೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,...
ಕಣ್ಣಿಲ್ಲ ಕಿವಿಯಿಲ್ಲ ಮೂಗಿಲ್ಲ ಬಾಯಿಲ್ಲ
ತಲೆಯಿಲ್ಲ ಕಾಲಿಲ್ಲ ಕೈಗಳಿಲ್ಲ
ಮತ್ತೆ ಯಾವುದೆ ದೇಹ ದೇವರಿಗೆ ಮೊದಲಿಲ್ಲ
ಬೆಳಕು ದೇವರ ರೂಪ -ಎಮ್ಮೆತಮ್ಮ
ಶಬ್ಧಾರ್ಥ
ದೇಹ = ಶರೀರ, ಕಾಯ, ಅಂಗ, ಮೈ
ತಾತ್ಪರ್ಯ
ದೇವರು ಎಂಬುವುದು ಈ ಬ್ರಹ್ಮಾಂಡದಲ್ಲಿ ತುಂಬಿರುವ ಒಂದು ಅದ್ಭುತವಾದ ಶಕ್ತಿ. ಅದಕ್ಕೆ ಮನುಷ್ಯರಿಗಿರುವಂತೆ ಯಾವುದೆ ಕಣ್ಣುಕಿವಿಗಳಿಲ್ಲ ,ಮೂಗುಬಾಯಿಗಳಿಲ್ಲ, ಕಾಲುಕೈಗಳಿಲ್ಲ ಮತ್ತು ಶಿರಶರೀರಗಳಿಲ್ಲ. ಅದು ನಿರಾಕಾರವಾಗಿದೆ. ಅದಕ್ಕೆ ವಿಶ್ವಶಕ್ತಿ
Cosmic energy ಎಂದು...
ಬೀದರ - ಬೈಕ್ ನಲ್ಲಿ ಬಂದ ಕಳ್ಳರು ಒಂದೇ ರಾತ್ರಿಯಲ್ಲಿ ೮ ಕ್ಕೂ ಹೆಚ್ಚು ಮನೆಗಳ ಬೀಗ ಮುರಿದು ಮನೆಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಾಣ್ಯ ಲೂಟಿ ಮಾಡಿರುವ ಪ್ರಕರಣ ಬಸವಕಲ್ಯಾಣ ತಾಲೂಕಿನ ಉಮ್ಮಾಪುರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಾಲಾಕಿ ಕಳ್ಳರು ಮನೆ ಲೂಟಿ ಮಾಡಿದ ನಂತರ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾರೆ....
ನಾವು ಖಂಡಿತಕ್ಕೂ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಆತಂಕದ ದಿನಗಳನ್ನು ನೋಡುತ್ತಿದ್ದೇವೆ. ಕರ್ನಾಟಕದಲ್ಲೇ ಕನ್ನಡ ದ್ವಿತೀಯ ದರ್ಜೆಯ ಪ್ರಜೆಯಂತಾಗಿದೆ. ಆದರೆ ನಾವು ಕನ್ನಡ ಪ್ರೀತಿಯಿಂದ ಮುಕ್ತರಾಗುವ ಬದಲು ಶಕ್ತರಾದಾಗ ಮಾತ್ರ, ಕನ್ನಡ ಪ್ರೀತಿಯಿಂದ ಪರಿತ್ಯಕ್ತರಾಗುವ ಬದಲು ಅನುರಕ್ತವಾದಾಗ ಮಾತ್ರ ಕನ್ನಡವನ್ನು ಮುಂದಿನ ತಲೆಮಾರಿಗೆ ಮುಟ್ಟಿಸುವ ರಹದಾರಿಯಾಗುತ್ತದೆ..
ಹೀಗೆ 'ನಾವು ಕನ್ನಡಿಗರು' ಬರಹದಲ್ಲಿ ಕನ್ನಡ ಕಾಳಜಿ ತೋರಿದ್ದಾರೆ ಡಾ.ಪ್ರದೀಪ್...
ಅಲ್ಲಮನ ಸುಜ್ಞಾನ ಬಸವೇಶ್ವರನ ಭಕ್ತಿ
ಸಿದ್ಧರಾಮೇಶ್ಚರನ ಕರ್ಮಯೋಗ
ಚೆನ್ನವಸವೇಶ್ವರನ ವೈರಾಗ್ಯ ಭಾಗ್ಯಗಳ
ತಂದುಕೋ ನಿನ್ನಲ್ಲಿ - ಎಮ್ಮೆತಮ್ಮ
ತಾತ್ಪರ್ಯ
ಅಲ್ಲಮ ಪ್ರಭುದೇವರು ಜಗತ್ತು ಕಂಡು ಅದ್ವಿತೀಯ
ಅಪ್ರತಿಮ ಜ್ಞಾನಯೋಗಿ. ಆತನ ವಚನಗಳನ್ನು ಓದಿದರೆ
ಆತ ಎಂಥ ಅತ್ಯುನ್ನತ ಆಧ್ಯಾತ್ಮಿಕ ಎತ್ತರವನ್ನು ತಲುಪಿದ್ದ
ಎಂದು ತಿಳಿದುಬರುತ್ತದೆ. ಜ್ಞಾನರತ್ನವ ಅಲಂಕರಿಸಿದೆಯಾದರೆ
ನಿನಗಿಂತ ಸಿರಿವಂತರಿಲ್ಲ ಎಂದು ಹೇಳಿದ್ದಾನೆ. ಅಂತಹ
ಜ್ಞಾನಯೋಗವನ್ನು ಸಾಧಿಸಿ ಜ್ಞಾನಯೋಗಿಯಾಗಬೇಕು.
ಇನ್ನು ಬಸವೇಶ್ವರನಂಥ ಭಕ್ತ ಇನ್ನೊಬ್ಬರಿಲ್ಲ. ಆತ ಭಕ್ತಿ
ಭಂಡಾರಿ ಎಂಬ ಹೆಸರಿಗೆ...
ಬೀದರ- ಜಮೀನು ಸರ್ವೇಗಾಗಿ ರೂ. ೭೫ ಸಾವಿರ ಲಂಚ ಪಡೆಯುವಾಗ ಔರಾದ ಭೂಮಾಪನ ಇಲಾಖೆ ಅಧಿಕಾರಿ ಸಂತೋಷ ಪ್ರಹ್ಲಾದ ಬೋಗಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ತಾಲೂಕಿನ ಔರಾದ್ ಪಟ್ಟಣದ ಭೂದಾಖಲೆಗಳ ಕಚೇರಿಯಲ್ಲಿ ದೂರುದಾರ ಮಹ್ಮದ್ ಶೌಕತ ಅಲಿ ವಡಗಾಂ(ಡಿ)ಗ್ರಾಮದವರಿಂದ 1.5ಲಕ್ಷದ ಹಣದ ಪೈಕಿ 75 ಸಾವಿರ ಹಣ ಪಡೆಯುವಾಗ ಬೀದರ್ ಲೋಕಾಯುಕ್ತ ಡಿಎಸ್ಪಿ ಹಣಮಂತರಾಯ್ ಮತ್ತವರ...
ಬೈಲಹೊಂಗಲ: ಮಣೂರ ಪ್ರಕಾಶನ ಕಲಬುರಗಿ ಇವರ ವತಿಯಿಂದ ಮಕರ ಸಂಕ್ರಾಂತಿ ನಿಮಿತ್ತ ಚೆನ್ನಮ್ಮಾಜಿಯವರ ಐಕ್ಯ ಸ್ಥಳವಾದ ಬೈಲಹೊಂಗಲದಲ್ಲಿ ಜನವರಿ ತಿಂಗಳಿನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ.
ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ವೀರರಾಣಿ ಕಿತ್ತೂರು ಚನ್ನಮ್ಮ, ಸ್ವಾತಂತ್ರ್ಯ ಹೋರಾಟಗಾರರು, ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ...
ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದಿಂದ ನಡೆಯುತ್ತಿರುವ *ಬೃಹತ್ ಗೀತೋತ್ಸವ* ಸಂದರ್ಭದಲ್ಲಿ ಪರ್ಯಾಯ ಮಠಾಧೀಶ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಶ್ರೀ ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರು ಬರೆದ ಆಚಾರ್ಯ ಮಧ್ವರ *ಗೀತಾ ಭಾಷ್ಯವನ್ನಾಧರಿಸಿ* 1961ರಲ್ಲಿ ಪ್ರಕಟವಾಗಿದ್ದ ಅಪೂರ್ವ ಕೃತಿ *'ಗೀತಾಮೃತಸಾರ'ದ* ಮರುಮುದ್ರಿತ ಕೃತಿಯನ್ನು ಮಂಗಳವಾರ ಅನಾವರಣಗೊಳಿಸಿದರು.
ಬಳಿಕ...
ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ೧೦೧ನೇ ಅನ್ನದಾಸೋಹ
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ ೧೦೧ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.
ಮುಖ್ಯ ಅತಿಥಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಅವರು ಮಾತನಾಡಿ, ‘ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ. ಲಯನ್ಸ್...
ಸದೃಢ ಕರ್ನಾಟಕವ ಕಟ್ಟೋಣ
ಭವ್ಯ ಕನ್ನಡ ನಾಡನು ಕಟ್ಟೋಣ
ಹುಯಿಲಗೋಳರ ಕನಸು ನನಸಾಗಿಸೋಣ,
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಗೀತೆಯ ಭಕ್ತಿಯಲಿ ಹಾಡೋಣ
ಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದ
ಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣ
ಜೈ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆ ಹಾಡಿ
ಸುವರ್ಣ ಕರ್ನಾಟಕ ಹಬ್ಬ ಮಾಡೋಣ
ಅಮೃತ ಭಾರತಿಗೆ ಕನ್ನಡದಾರತಿ ...