ಮೂಡಲಗಿ: ಸಾವನ್ನು ಬೆನ್ನಿಗೆ ಕಟ್ಟಿ ಕೊಂಡು ದೇಶ ರಕ್ಷಣೆ ಮಾಡುವ ಯೋಧರು ಇರುವುದರಿಂದಾಗಿ ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಭಾರತೀಯ ಸೇನೆಯಲ್ಲಿ ಸುಧೀರ್ಘ ೨೨ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತಿಯಾಗಿ ಮರಳಿ ತವರೂರಿಗೆ ಆಗಮಿಸಿದ ಗಣಪತಿ ಮಲ್ಲಪ್ಪ ರಡರಟ್ಟಿ ಅವರಿಗೆ ಮೂಡಲಗಿ-ಶಿವಾಪುರ ಗ್ರಾಮಸ್ಥರು...
ದಿನವೂ ದೇವರ ಮೂರ್ತಿಗಳನ್ನು ನೀರಿನಿಂದ ತೊಳೆದು, ಹಾಲಿನ ಅಭಿಷೇಕ ಮಾಡಿ, ಮೆತ್ತನೆಯ ಬಟ್ಟೆಯಲ್ಲಿ ಒರೆಸಿ, ವಿಭೂತಿ, ಅರಿಷಿಣ, ಕುಂಕುಮ, ಗಂಧ, ಅಕ್ಷತೆ, ಬಿಲ್ವಪತ್ರೆಯನ್ನು ಏರಿಸಿ ಕೈ ಮುಗಿದರೆ ಸಾಕು ಮನದಲ್ಲಿ ಅಂದುಕೊಂಡದ್ದು ನಡೆಯುತ್ತದೆ ಎನ್ನುವುದು ನಮ್ಮಲ್ಲಿ ಬಹುತೇಕರ ನಂಬಿಕೆ.
ದೇವರ ಪೂಜೆ ಭದ್ರತಾ ಭಾವವನ್ನು ಒದಗಿಸುವುದು ಎನ್ನುವ ಭಾವ ಸುಳ್ಳೇನಲ್ಲ. ಇಷ್ಟೇ...
ಮೂಡಲಗಿ:-ತಾಲೂಕಿನ ಗುರ್ಲಾಪೂರದಲ್ಲಿ ಇತ್ತೀಚೆಗೆ ಗ್ರಾಮದ ಸರ್ಕಾರಿ ಶಾಸಕರ ಮಾದರಿ ಶಾಲೆಯಲ್ಲಿ ರಾಷ್ಟ್ರೀಯ
ವಿಜ್ಞಾನ ಶಾಲೆಯ ದಿನಾಚರಣೆಯನ್ನು ಆಚರಿಸಲಾಯಿತು.
ಸರ್ಕಾರಿ ಸುತ್ತೋಲೆ ಪ್ರಕಾರ ಪ್ರತಿಜ್ಞಾ
ವಿಧಿ ಸ್ವೀಕಾರವನ್ನು ಶಾಲೆಯ ಪದವೀಧರ ಮುಖ್ಯೋಪಾಧ್ಯಾಯರಾದ ಜಿ. ಆರ್.
ಪತ್ತಾರವರು ಮಕ್ಕಳಿಗೆ ಭೋದನೆ ಮಾಡಿದರು.
ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಲ್. ಪಿ.
ನೇಮಗೌಡರ ವಿಜ್ಞಾನಿ ಸಿ. ವಿ. ರಾಮನ್ ಅವರ
ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಶಾಲೆಯ...
ರಾಜ್ಯಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ತನ್ನ 40 ನೇ ವಾರ್ಷಿಕೋತ್ಸವದ ಹಾಗೂ ಸುವರ್ಣ ಕರ್ನಾಟಕ ಮಹೋತ್ಸವದ ಅಂಗವಾಗಿ ಐವತ್ತು ಕವಿಗಳ ಐನೂರು ಕವನಗಳ ಕಾವ್ಯ ಸಂಗಮ ಎಂಬ ಬೃಹತ್ ಕೃತಿಯನ್ನು ಹೊರತರಲು ಯೋಜಿಸಿದೆ.
ಈ ಕೃತಿಯಲ್ಲಿ ಪ್ರತಿಯೊಬ್ಬ ಕವಿಯ ಪರಿಚಯ ಲೇಖನ, ಭಾವಚಿತ್ರ ಹಾಗೂ ಪ್ರತಿಯೊಬ್ಬರ ಹತ್ತು ಸ್ವರಚಿತ ಕವನಗಳನ್ನು...
ನಾವಿಂದು ಸರಕಾರಿ ಶಾಲೆಗಳಲ್ಲಿ ಕಲಿತವರು ಬಹುತೇಕ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿರುವ ಜೀವನ ಕಾಣುತ್ತೇವೆ. ಸರಕಾರ ಬಹುತೇಕ ಅನುಕೂಲಕರ ವಾತಾವರಣ ಸರಕಾರೀ ಶಾಲೆಗಳಲ್ಲಿ ಇರಬೇಕೆಂದು ಬಯಸುತ್ತದೆ. ಇರುವ ವಾತಾವರಣದಲ್ಲಿ ಬಹಳಷ್ಟು ಪರಿಶ್ರಮದಿಂದ ಶಾಲೆಗಳ ಒಳಗೂ ಹೊರಗೂ ವಿಭಿನ್ನವಾದ ಕ್ರಿಯಾತ್ಮಕ ಪರಿಸರ ನಿರ್ಮಾಣ ಆಗಿರುವಂತೆ ಹಲವು ಜನ ಮಾಡಿರುತ್ತಾರೆ. ಅಂತಹ ಹಲವರಲ್ಲಿ ಮುಗಳಿಹಾಳ ಸಮೀಪದ ತೋಟದ...
ಸಿಂದಗಿ: ಮಹಿಳಾ ಆಯೋಗಕ್ಕೆ ಒಂದು ದೊಡ್ಡ ಶಕ್ತಿ ಪೊಲೀಸ ಇಲಾಖೆ. ಪೊಲೀಸರು ಯಾರು ಕೆಟ್ಟರಿರುವುದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಮಹಿಳಾ ಕಾವಲು ಸಮಿತಿಗಳಾಗಿ ಕಾರ್ಯನಿರ್ವಹಿಸುತ್ತವೆ. ಡಾ. ಅಂಬೇಡ್ಕರರು ಹೇಳಿದಂತೆ ಮೌಢ್ಯಕ್ಕೆ ಗುಲಾಮರಾಗದಿರಿ ಇದನ್ನು ಯಾವ ದೇವರು ಹೇಳದ್ದನ್ನು ನಾವೇ ಮಾಡಿಕೊಂಡಿದ್ದು ಶಿಕ್ಷಣದಿಂದ ಮಾತ್ರ ಇಂತಹ ಮೌಢ್ಯತೆಯಿಂದ ಹೊರಬರಲು...
ಯರಗಟ್ಟಿ: ತಾಲೂಕಿನ ತಹಶೀಲ್ದಾರ್ ಎಂ. ವ್ಹಿ. ಗುಂಡಪ್ಪಗೋಳ ಅವರಿಗೆ ಶಿಕ್ಷಣ ಇಲಾಖೆಯ ಪರವಾಗಿ ಗೌರವ ಸನ್ಮಾನ ಜರುಗಿಸಲಾಯಿತು.
ಈ ಸಂದರ್ಭದಲ್ಲಿ ನಲಿ ಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಮನೋಹರ ಚೀಲದ, ಸಮನ್ವಯ ಶಿಕ್ಷಣ ಶಿಕ್ಷಕರಾದ ವೈ ಬಿ ಕಡಕೋಳ, ಮುರಗೋಡ ವಲಯದ ಸಮನ್ವಯ ಶಿಕ್ಷಣ ಶಿಕ್ಷಕರಾದ ದುರಗಪ್ಪ ಭಜಂತ್ರಿ, ಬಸವರಾಜ ಹೂಗಾರ ಉಪಸ್ಥಿತರಿದ್ದರು
ಮೂಡಲಗಿ:-ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ನಗುವ ನಕ್ಷತ್ರಗಳು ಕವನ ಸಂಕಲನ ಬಿಡುಗಡೆ ಸಮಾರಂಭ ಕಾರ್ಯಕ್ರಮ ಜರುಗಿತು.
ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಘಟಕ ಹಾಗೂ ಸಾಗರ ಪ್ರಕಾಶನ ಆಶ್ರಯದಲ್ಲಿ ಸಾಹಿತಿ ವೈ. ಬಿ. ಕಳ್ಳಿಗುದ್ದಿಯವರ "ನಗುವ ನಕ್ಷತ್ರಗಳು" ಚುಟುಕು ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಸ್ಥಳೀಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ...
ಮೂಡಲಗಿ:ಮೊಘಲ್ ಸಾಮ್ರಾಜ್ಯದ ದೊರೆ ಅಕ್ಬರ್ ನ ವಿರುದ್ದ ಸತತ ಹೋರಾಟ ಮಾಡುವ ಮೂಲಕ ತನ್ನ ಪರಾಕ್ರಮಕ್ಕೆ ಹೆಸರುವಾಸಿಯಾದ ಮೇವಾರದ ರಾಜ ಮಹಾರಾಣಾ ಪ್ರತಾಪ್ ಸಿಂಹ ಅವರ ವಂಶಜರಾದ ಯುವರಾಜ ಲಕ್ಷರಾಜ್ ಸಿಂಗ್ ಅವರನ್ನು ಇಂದು ಮಂಗಳವಾರ ರಾಜಸ್ತಾನ ರಾಜ್ಯದ ಉದಯಪುರದ ಅರಮನೆಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸೌಜನ್ಯಯುತ ಭೇಟಿ ಮಾಡಿದರು.
ಮೇವಾರದ ರಾಜ ಪರಂಪರೆ,...
ಬಾಗಲಕೋಟೆ : ಸಮುದಾಯದ ಸಹಭಾಗಿತ್ವದಿಂದ ಮಾತ್ರ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಶಿಕ್ಷಕ ಗೂಳನಗೌಡ ಪಾಟೀಲ ಅಭಿಪ್ರಾಯ ಪಟ್ಟರು.
ಅವರು ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024-25 ನೇ ಸಾಲಿನ 7ನೇ ತರಗತಿ ಮಕ್ಕಳ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸರಕಾರದ ಅನುದಾನವನ್ನು ನೆಚ್ಚಿಕೊಂಡು ಶಾಲೆಯ ಭೌತಿಕ ಮತ್ತು...
ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು...