spot_img
spot_img

ಐವತ್ತು ಕವಿಗಳ ಐನೂರು ಕವಿತೆಗಳ ಕವನಸಂಕಲನಕ್ಕೆ ಕವನಗಳ ಆಹ್ವಾನ

Must Read

spot_img
- Advertisement -

ರಾಜ್ಯಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಯಾದ ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ತನ್ನ 40 ನೇ ವಾರ್ಷಿಕೋತ್ಸವದ ಹಾಗೂ ಸುವರ್ಣ ಕರ್ನಾಟಕ ಮಹೋತ್ಸವದ ಅಂಗವಾಗಿ ಐವತ್ತು ಕವಿಗಳ ಐನೂರು ಕವನಗಳ ಕಾವ್ಯ ಸಂಗಮ ಎಂಬ ಬೃಹತ್ ಕೃತಿಯನ್ನು ಹೊರತರಲು ಯೋಜಿಸಿದೆ.

ಈ ಕೃತಿಯಲ್ಲಿ ಪ್ರತಿಯೊಬ್ಬ ಕವಿಯ ಪರಿಚಯ ಲೇಖನ, ಭಾವಚಿತ್ರ ಹಾಗೂ ಪ್ರತಿಯೊಬ್ಬರ ಹತ್ತು ಸ್ವರಚಿತ ಕವನಗಳನ್ನು ಪ್ರಕಟಿಸಲಾಗುವುದು. ಪ್ರತಿಯೊಬ್ಬ ಕವಿಗೂ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ಕಾವ್ಯಚೇತನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕಾವ್ಯ ಸಂಗಮ ಕೃತಿಯು ಪರಸ್ಪರ ಸಹಕಾರ ತತ್ವದಲ್ಲಿಪ್ರಕಟಗೊಳ್ಳಲಿದೆ.ಆಸಕ್ತಿಯುಳ್ಳ ಕವಿಗಳು ತಮ್ಮ ಹತ್ತು ಸ್ವರಚಿತ ಕವನಗಳನ್ನು ಮಾರ್ಚ್ 30 ರ ಒಳಗಾಗಿ ಡಾ.ಭೇರ್ಯ ರಾಮಕುಮಾರ್ ,ಅದ್ಯಕ್ಷರು ,
ಗ್ರಾಮಾಂತರ ಬುದ್ಧಿಜೀವಿಗಳ ಬಳಗ,ಅರ್ಕೇಶ್ವರಬಡಾವಣೆ , ಕೆ.ಆರ್.ನಗರ ಟೌನ್
ಮೈಸೂರು ಜಿಲ್ಲೆ ಈ ವಿಳಾಸಕ್ಕೆ ಕಲಿಸುವುದು. ಇಮೇಲ್ ವಿಳಾಸ bheryaramakumar@gmail.com ಈ ವಿಳಾಸಕ್ಕೂ ತಮ್ಮ ಹತ್ತು ಕವನಗಳು ,ತಮ್ಮ ಪರಿಚಯ ವಿವರ ಹಾಗೂ ಭಾವಚಿತ್ರವನ್ನು ಕಳಿಸುವುದು.ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 6363172368 ಸಂಪರ್ಕಿಸುವುದು ಎಂದು ಸಂಸ್ತೆಯ ಅಧ್ಯಕ್ಷರಾದ ಡಾ.ಭೇರ್ಯ ರಾಮಕುಮಾರ್ ಕೋರಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group