ನವದೆಹಲಿ – ಅಮೇರಿಕಾದಿಂದ ಭಾರತಕ್ಕೆ ಮೂರು ರೋಮಿಯೋ ಹೆಲಿಕಾಪ್ಟರ್ ಗಳು ಆಗಮಿಸಿ ಭಾರತದ ಸೈನ್ಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಿವೆ.
ಸಬ್ ಮೇರಿನ್ ಗಳನ್ನು ಸಲೀಸಾಗಿ ಉಡಾಯಿಸಬಲ್ಲ ಬ್ರಹ್ಮಾಸ್ತ್ರ ಈ ರೋಮಿಯೋ ಆಗಿದ್ದು, ಈಗಾಗಲೇ ೧೪ ಹೆಲಿಕಾಪ್ಟರ್ ಕೊಳ್ಳುವ ಒಪ್ಪಂದ ಆಗಿತ್ತು ಅದರಲ್ಲಿ ಮೂರು ಹೆಲಿಕಾಪ್ಟರ್ ಗಳು ಭಾರತಕ್ಕೆ ಬರಲಿವೆ.
ರಾಡಾರ್ ವ್ಯವಸ್ಥೆ ಹೊಂದಿರುವ ರೋಮಿಯೊ ರಾತ್ರಿಯಲ್ಲಿ ಕೂಡ ವೈರಿಗಳನ್ನು ನಾಶ ಮಾಡಬಲ್ಲ ಕ್ಷಮತೆ ಹೊಂದಿದೆ. ಸಮುದ್ರ ಯುದ್ಧ ಶೈಲಿಯಲ್ಲಿ ರಾಜನಂತೆ ಇರುವ ಈ ಹೆಲಿಕಾಪ್ಟರಗಳು ಭಾರತೀಯ ನೌಕಾಸೇನೆಗೆ ವರದಾನದಂತೆ ಕೆಲಸ ಮಾಡಲಿವೆ.
ಅಮೇರಿಕದಿಂದ ೨.೬ ಬಿಲಿಯನ್ ಡಾಲರ್ ಮೊತ್ತದ ಒಪ್ಪಂದದಲ್ಲಿ ೨೪ MH ೬೦ ರೋಮಿಯೋ ಹೆಲಿಕಾಪ್ಟರ್ ಕೊಳ್ಳುವುದಾಗಿ ಡೀಲ್ ಆಗಿದೆ.