spot_img
spot_img

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

Must Read

- Advertisement -

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ ಭಾರತಿ ಸಹದೇವ ಕಮತಿ ತಿಳಿಸಿದ್ದರು.

ಅವರು ಶನಿವಾರದಂದು ತಾಲೂಕಿನ ಸುಣಧೋಳಿ ಗ್ರಾಮದ ಸಹಕಾರಿ ಸಂಘದಲ್ಲಿ ಸಹಕಾರಿಯ ೨೦೨೨-೨೩ ನೇ ಸಾಲಿನ ಸಂಘದ ಪ್ರಗತಿಯ ಕುರಿತು ಮಾತನಾಡಿ,  ಸದ್ಯ ಸಹಕಾರಿಯು ರೂ ೪೦.೬೦ ಲಕ್ಷ ಶೇರು ಬಂಡವಾಳ ರೂ ೫.೩೪ ಕೋಟಿ ನಿಧಿಗಳು ರೂ ೩೬.೨೪ ಕೋಟಿ ಠೇವುಗಳು ರೂ ೧೦.೧೨ ಕೋಟಿ ಗುಂತಾವಣೆಗಳು ರೂ ೩೧.೧೨ ಕೋಟಿ ಸಾಲಗಳು ಹಾಗೂ ರೂ ೪೪.೧೯ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ಸಹಕಾರಿ ಸದ್ಯ ಏಳು ಶಾಖೆಗಳು ಹೊಂದಿದ್ದು, ಅತಿ ಶೀಘ್ರದಲ್ಲಿ ಎರಡು ಶಾಖೆಗಳನ್ನು ಆರಂಭಿಸುವ ಗುರಿಯನ್ನು ಹೊಂದಿದೆ ಎಂದರು.

ಉಪಾಧ್ಯಕ್ಷೆ ಶಾಂತಾ ಪ್ರಕಾಶ ಪತ್ತಾರ ಮತ್ತು  ಮುಖ್ಯ ಕಾರ್ಯನಿರ್ವಾಹಕರಾದ  ಚಿದಾನಂದ ಶಿರಗೂರ ಇವರು ಮಾತನಾಡಿ, ಪ್ರಸಕ್ತ ವರ್ಷದಿಂದ ಸಹಕಾರಿಯ ಐ.ಎಫ್.ಎಸ್.ಸಿ ಕೋಡ್ ಸೇವೆ ಪ್ರಾರಂಭಿಸಲಾಗುವದು ಎಲ್ಲಾ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ ಸದಸ್ಯರಾದ ವಿಮಲಾ ಚಂ ಹೊಟ್ಟಿಹೊಳಿ, ಶಿವಲೀಲಾ ಶಿ ಮದಭಾವಿ, ಈರವ್ವಾ ಸಿ ಪಾಟೀಲ, ಮೀನಾಕ್ಷಿ ಶಿ ಹೊಟ್ಟಿಹೊಳಿ, ಸವಿತಾ ರ. ಸಂಕಣ್ಣವರ, ಪ್ರಭಾವತಿ ರ ಹೊಟ್ಟಿಹೊಳಿ, ಸ್ವಪ್ನಾ ರಾ ವಾಲಿ, ಬಸವ್ವಾ ಹ ಪಾಶಿ, ಮತ್ತು ಶ್ಯಾಲವ್ವಾ ದು ಮಾದರ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group