ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದಲ್ಲಿ ಯಾದವಾಡ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ಆಶ್ರಯದಲ್ಲಿ ಏ.2 ರಿಂದ ಏ.12 ರವರಿಗೆ ವಿವಿಧ ಧಾರ್ಮಿಕ ಮತ್ತು ಗ್ರಾಮೀಣ ಭಾಗದ ಸ್ಪರ್ಧೆಗಳು ಹಾಗೂ ಜಾನುವಾರುಗಳ ಜಾತ್ರೆಯೊಂದಿಗೆ ಹನ್ನೊಂದು ದಿನಗಳ ಕಾಲ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಜಾತ್ರಾಮಹೋತ್ಸವ ಶ್ರೀ ಶಿವಯೋಗಿ ದೇವರ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ಶಿವಪ್ಪಗೌಡ ಬ.ನ್ಯಾಮಗೌಡರ ಹೇಳಿದರು.
ಅವರು ಶನಿವಾರಂದು ಯಾದವಾಡದಲ್ಲಿ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಎ.2ರಂದು ಮುಂ 7ಗಂಟೆಗೆ ವರಗುರುವರೇಣ್ಯ ಚೌಕೇಶ್ವರ ಶಿವಯೋಗಿಗಳವರ ಕರ್ತ್ರು ಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ರಾತ್ರಿ 8ಕ್ಕೆ ನಾಲ್ಕು ದಿನಗಳವರೆಗೆ ಸಕಲ ವಾದ್ಯ ವೈಭವಗಳೊಂದಿಗೆ ವಾಹನೋತ್ಸವ ಜರುಗುವುದು.
ಎ.3 ರಂದು ಮುಂಜಾನೆ ಶ್ರೀ ಈಶ್ವರ ದೇವರ ಹಾಗೂ ಘಟ್ಟಗಿ ಬಸವೇಶ್ವರ ಮಹಾಮಸ್ತಕಾಭಿಷೇಕ, ಜಲ ಸಂಶೋಧಕ ಶ್ರೀ ಈರಯ್ಯಾ ಸ್ವಾಮಿಗಳ ವೇದಘೋಷದೊಂದಿಗೆ 108 ಬಿಲ್ವಾರ್ಚನೆ ಹಾಗೂ ಪುಷ್ಪಾರ್ಚನೆ ಸದ್ಭಕ್ತರಿಂದ ಜರುಗುವುದು. ಏ.4 ಮುಂಜಾನೆ ಗ್ರಾಮದ ಅಧಿದೇವತೆಯಾದ ಶ್ರೀ ಹೊನ್ನಮ್ಮ ದೇವಿಯ ಉಡಿ ತುಂಬುವುದು.
ಏ.5ರಂದು ಮುಂ. 10ಕ್ಕೆ ಶ್ರೀ ಚೌಕೇಶ್ವರ ಮಠದಲ್ಲಿ ಕಳಸ ಪೂಜೆ ರಾತ್ರಿ 9 ಕ್ಕೆ ಶ್ರೀ ಚೌಕೇಶ್ವರ ಶೀವಯೋಗಿಗಳ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ರಥದ ಕಳಸಾರೋಹಣ ಸಕಲ ವಾದ್ಯ ವೈಭವಗಳೊಂದಿಗೆ ಜರುಗುವುದು.
ಎ.6 ರಂದು ಸಂಜೆ 5 ಗಂಟೆಗೆ ಶ್ರೀ ಚೌಕೇಶ್ವರ ಹಾಗೂ ಶ್ರೀ ಘಟ್ಟಗಿ ಬಸವೇಶ್ವರ ಮಹಾರಥೋತ್ಸವ ಜರುಗುವುದು.
ಎ.7ರಂದು ಸಂಜೆ ಟಗರಿನ ಕಾಳಗ ಸ್ಪರ್ಧೆ, ಎ.8 ರಂದು ತೆರೆ ಬಂಡಿ ಸ್ಪರ್ಧೆ, ಎ.9 ರಂದು ಒಂದು ನಿಮಿಷದ ಬಂಡಿ ಸ್ಫರ್ಧೆ, ಎ.11 ರಂದು ಮುಂಜಾನೆ 9 ಕ್ಕೆ ದನಗಳ ಪಾಸ ಬರೆದುಕೊಳ್ಳುವುದು ಮತ್ತು ಸಂಜೆ ಪಾಸಾದ ದನಗಳ ಭಕ್ಷೀಸ ಕೊಡಲಾಗುವುದು ಅಂದು ನಿಕಾಲಿ ಜಂಗಿ ಕುಸ್ತಿ ಜರುಗುವುದು.
ಏ.11 ರಂದು ಮುಂಜಾಣೆ ಕೂಡು ಗಾಡಿ ಬಂಡಿ ಸ್ಪರ್ಧೆ ಮತ್ತು ಜೋಡು ಕುದುರೆ ಬಂಡಿ ಸ್ಪರ್ಧೆ ಹಾಗೂ ಒಂದು ಎತ್ತಿನ ಕಲ್ಲು ಜಗ್ಗಿಸುವ ಸ್ಪರ್ಧೆಗಳು ಜರುಗುವವು. ಎ.12 ರಂದು ಸಂಜೆ ಶ್ರೀ ಶಿವಯೋಗಿ ದೇವರ ಸಾನ್ನಿಧ್ಯದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಲಿದೆ ಎಂದು ಶಿವಪ್ಪಗೌಡ ನ್ಯಾಮಗೌಡರ ತಿಳಿಸಿದರು.
ಈ ಸಮಯದಲ್ಲಿ ಜಾತ್ರಾ ಕಮಿಟಿ ಯ ಸದಸ್ಯರಾದ ರಮೇಶ ಸಾವಳಗಿ, ಹನುಮಂತ ಚಿಕ್ಕೇಗೌಡರ, ಚನ್ನಪ್ಪ ಕೆಂಜೋಳ, ಗೋಲಪ್ಪ ಕಾಗವಾಡ, ಮಹಾದೇವ ಶೆಟ್ಟರ, ಹನಮಂತ ಹ್ಯಾಗಾಡಿ, ಯಲ್ಲಪ್ಪ ಕನಾಳೆ, ಸುನೀಲ ನ್ಯಾಮಗೌಡರ, ಕಲ್ಮೇಶ ಗಾಣಗಿ, ಬಸಯ್ಯ ವಿಭೂತಿ, ಈರಣ್ಣ ಅರಕೇರಿ, ರಾಘು ಕೊಲ್ಲಾಪೂರ,ಮಲ್ಲಪ್ಪ ತಟ್ಟಿನ, ದುಂಡಪ್ಪ ಮೂಲಿಮನಿ, ಬಸವರಾಜ ಕೆಂಜೋಳ,ನವೀನ ಹುಂಡೇಕಾರ, ವಿನಾಯಕ ಕುಂಬಾರ, ಹರೀಶ ದೇಶಪಾಂಡೆ, ಸಂಜು ಮೂಲಿಮನಿ ಮತ್ತಿತರರು ಇದ್ದರು.