- Advertisement -
ನಿನ್ನದೆಂತಹ ಪ್ರೀತಿ ಅಪ್ಪ
ಅಂತಹ ಮಮತೆ ಬೇರೊಬ್ಬರಲಿಲ್ಲ
ಬೇರೆಯವರಲ್ಲಿ ಆ ಪ್ರೀತಿ ಕಾಣಲಿಲ್ಲ
ಜಗದಲಿ ಹುಡುಕಿದರೂ ಸಿಗಲಿಲ್ಲ
ನಿನ್ನದೆಂತಹ ಪ್ರೀತಿ ಅಪ್ಪ
ದು:ಖ ನುಂಗಿ ಸಂತಸ ತಂದೆ
ನಗು ನಗುತ ಸಾಗಿ ಬಂದೆ
ಬಾಳ ಬಂಡೆ ನಡೆಸುತ್ತ ಬಂದೆ
ನಿನ್ನದೆಂತಹ ಪ್ರೀತಿ ಅಪ್ಪ
ಹಿರಿಮಗನಿಗೆ ಅಭಿಮಾನದ ಪ್ರೀತಿ
ಕಿರಿಮಗನಿಗೆ ಕಾಳಜಿಯ ಪ್ರೀತಿ
ಮಗಳಮೇಲೋ ಪ್ರೀತಿಯೋ ಪ್ರೀತಿ
ನಿನ್ನದೆಂತಹ ಪ್ರೀತಿ ಅಪ್ಪ
ಕಂಡಕನಸೆಲ್ಲವ ಸಾಕಾರಗೊಳಿಸಿದೆ
ಬದುಕಿನ ಸಾರವನು ತಿಳಿಸಿದೆ
ಲೋಕದ ಜ್ಞಾನವ ನೀಡಿದೆ
ನಿನ್ನದೆಂತಹ ಪ್ರೀತಿ ಅಪ್ಪ
ಆಕಾಶದೆತ್ತರದಲಿ ಹುಡುಕಿದೆ
ಪಾತಾಳದಡಿಯಲಿ ಇಣುಕಿದೆ
ಆ ಪ್ರೀತಿಯು ಸಿಗುವುದೆ
ನಿನ್ನದೆಂತಹ ಪ್ರೀತಿ ಅಪ್ಪ
ಇಷ್ಟೆಲ್ಲವ ಮಾಡಿದೆ ನೀನು
ಬಿಟ್ಟು ಹೋಗಲು ಕಾರಣವೇನು
ಮರಳಿ ಬಾ ಸಾಕಿನ್ನು
ನಿನ್ನದೆಂತಹ ಪ್ರೀತಿ ಅಪ್ಪ
ಶ್ರೀಮತಿ ಜ್ಯೋತಿ ಸಿ ಕೋಟಗಿ
ಸಹ ಶಿಕ್ಷಕಿ
ಸರಕಾರಿ ಪ್ರಾಥಮಿಕ ಶಾಲೆ ತಲ್ಲೂರ
ತಾ: ಸವದತ್ತಿ ಜಿ: ಬೆಳಗಾವಿ