ರಾಜ್ಯದ ನೂತನ ರಾಜ್ಯಪಾಲರಾಗಿ ತಾವರಚಂದ ಗೆಹ್ಲೋಟ್

Must Read

ಬೆಂಗಳೂರು – ರಾಜ್ಯದ ನೂತನ ರಾಜ್ಯಪಾಲರನ್ನಾಗಿ ತಾವರಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಿ ರಾಷ್ಟ್ರಪತಿಗಳ ಕಚೇರಿ ಆದೇಶ ಹೊರಡಿಸಿದೆ.

ಏಳು ವರ್ಷಗಳಿಂದ ಕರ್ನಾಟಕದ ರಾಜ್ಯಪಾಲರಾಗಿದ್ದ ವಜೂಭಾಯಿ ವಾಲಾ ಅವರ ಸ್ಥಾನಕ್ಕೆ ರಾಜ್ಯದ 19ನೇ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ.

ಅಲ್ಲದೆ ದೇಶದ ಎಂಟು ರಾಜ್ಯಗಳ ರಾಜ್ಯಪಾಲರನ್ನು ಬದಲು ಮಾಡಲಾಗಿದ್ದು ಅವರ ಹೆಸರುಗಳು ಇಂತಿವೆ:

  • ಕರ್ನಾಟಕ – ತಾವರಚಂದ್ ಗೆಹ್ಲೋಟ್
  • ಮಧ್ಯಪ್ರದೇಶ – ಮಂಗುಭಾಯ್ ಛಗನ್ ಭಾಯ್ ಪಟೇಲ್
  • ಮಿಝೋರಾಮ್ – ಹರಿಬಾಬು ಕಂಬಂಪಾಟಿ
  • ಹಿಮಾಚಲ ಪ್ರದೇಶ – ರಾಜೇಂದ್ರ ವಿಶ್ವನಾಥ ಅರ್ಲೇಕರ್
  • ಗೋವಾ – ಪಿ ಎಸ್ ಶ್ರೀಧರನ್ ಪಿಳ್ಳೈ
  • ತ್ರಿಪುರಾ – ಸತ್ಯದೇವ ನಾರಾಯಣ ಆರ್ಯ
  • ಹರ್ಯಾಣ – ಬಂಡಾರು ದತ್ತಾತ್ರೇಯ
  • ಝಾರ್ಖಂಡ್ – ರಮೇಶ್ ಬೈಸ್

ಈ ಮೊದಲಿನ ರಾಜ್ಯಪಾಲರು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಿದ್ದಾರೆ.

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group