ಕವನ: ಓಗೊಟ್ಟು ಬರುವಳು ಶಾಂಭವಿ

Must Read

ಓಗೊಟ್ಟು ಬರುವಳು ಶಾಂಭವಿ

ಮೈಸೂರ ಸಿಲ್ಕ್ ಸೀರೆ ಉಟ್ಟು/
ಮೈಸೂರ ಪಾಕ್ ಬಾಯಲ್ಲಿಟ್ಟು/
ಹೋಗೋಣ ಗೆಳತಿ ಸರ-ಸರನೆ/
ಜಂಬೂಸವಾರಿ ಸಡಗರವ ನೋಡುದಕ/

ನಾಡ ಹಬ್ಬ ದಸರಾ ಚಂದ/
ಮೈಸೂರ ಅರಮನೆ ಏನ ಚಂದ/
ಆನೆಯ ಅಂಬಾರಿ ಮ್ಯಾಲೆ ದೇವಿಯು/
ಚಾಮುಂಡಿ ತಾಯಿಯು ಕುಳಿತಿಹಳು/

ಒಂಬತ್ತು ದಿವಸ ನಾವು ಮುತೈದೆಯರು ಎಲ್ಲರೂ/
ಬನ್ನಿಗಿಡವ ಪೂಜೆ ಮಾಡಿ ಉಡಿಯ ತುಂಬೋಣ/
ಆದಿಶಕ್ತಿಯಲ್ಲಿ ನಾವು ವರವನು ಕೇಳೋಣ/
ಘಟ್ಟ ಹಾಕಿ,ದೀಪಾ ಹಚ್ಚಿ ಉಪವಾಸ ಮಾಡೋಣ/

ಆಯುಧ ಪೂಜೆ ಮಾಡೋಣ ಗೆಳತಿ/
ಮಾವಿನ ತೋರಣ ಕಟ್ಟೋಣ ಗೆಳತಿ/
ಚಂಡು ಹೂ,ತರ-ತರದ ಹೂವಿಂದ ಶೃಂಗಾರ ಮಾಡೋಣ/
ಸಿಹಿ ಅಡುಗೆ ಮಾಡಿ ನಾವು ಎಡೆಯ ಹಿಡಿಯೋಣ/

ಬನ್ನಿ ಮುಡದ ಬಂದರು ಗೆಳತಿ/
ಮೈಸೂರ ಪೇಟ ಧರಿಸ್ಯಾರ ಗೆಳತಿ/
ದೇವಿ ಪುರಾಣ ಕೇಳಿ ನಾವು ಪಾವನರಾಗೋಣ/
ಬನ್ನಿ ಕೊಟ್ಟು ಬಂಗಾರದಂಗ ಬಾಳೋಣರಿ./

ಅಂಬೆ ಎಂಬ ಕೂಗಿಗೆ ಓಗೊಟ್ಟು ಬರುವಳು ಶಾಂಭವಿದೇವಿ/
ಬಂದ ಕಷ್ಟಗಳನ್ನೆಲ್ಲಾ ಸರಿಸಿ ಹರಸುವಳು ಕಾಳಿಕಾದೇವಿ/
ದುಷ್ಟರನು ಸಂಹರಿಸಿ,ಶಿಷ್ಟರನು ರಕ್ಷಿಸುವಳು ರುಂಡಮಾಲಿನಿದೇವಿ/
ನವರಾತ್ರಿ ವೈಭವದ ಸಿರಿದೇವಿ,ಎಲ್ಲರನು ರಕ್ಷಿಸುವಳು ಉಧೋ..ಉಧೋ..ಎಲ್ಲಮ್ಮದೇವಿ./


ಶ್ರೀಮತಿ-ಕಸ್ತೂರಿ ಎಸ್ ಬಿ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group