ಸವದತ್ತಿ: ಕೊರೋನಾದಂತಹ ಸಾಂಕ್ರಾಮಿಕ ರೋಗದಿಂದಾಗಿ ಸುಮಾರು ಒಂದೂವರೆ ವರ್ಷದಿಂದ ಎಲ್ಲಾ ಶಾಲೆಗಳಲ್ಲಿಯೂ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದ್ದು, ರೋಗದ ಲಕ್ಷಣಗಳು ಕಡಿಮೆಯಾದ ಪ್ರಯುಕ್ತ ಸರಕಾರದ ನಿರ್ದೆಶನದಂತೆ ಎಲ್ಲಾ ಶಾಲೆಗಳಲ್ಲಿಯೂ ತರಗತಿಗಳು ಪ್ರಾರಂಭಗೊಂಡಿವೆ. ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಕಲರವ ನೋಡುವುದೇ ಚಂದ ಎಂದು ವಲಯದ ಇಸಿಒ ಜಿ.ಎಮ್.ಕರಾಳೆ ಖುಷಿಯನ್ನು ಹಂಚಿಕೊಂಡರು.
ಸ್ಥಳೀಯ ಸ.ಕಿ.ಪ್ರಾ ಕನ್ನಡ ಶಾಲೆ ನಂ-೬ ರಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ತೆಂಗಿನ ಸಸಿ ನೆಟ್ಟು ಅವರು ಮಾತನಾಡಿದರು.
ನಂತರ ಶಾಲೆಯಲ್ಲಿ ಮಾಡಿಕೊಂಡ ತಯಾರಿ ಪರಿಶೀಲಿಸಿ, ಸರಕಾರದ ಸುತ್ತೋಲೆಗಳ ಪಾಲನೆ, ಮಕ್ಕಳಿಗೆ ಬಿಸಿಯೂಟ ನಿರ್ವಹಣೆಯ ಸ್ವಚ್ಛತಾ ಕಾರ್ಯ, ಎಸ್.ಓ.ಪಿ ಅನುಪಾಲನೆ, ಹಾಗೂ ನವ್ಹಂಬರನಲ್ಲಿ ವಾಲ್ಮೀಕಿ ಪಥ ಮಾಸಾಚರಣೆ ವಿಷಯಗಳ ಬಗ್ಗೆ ಇನ್ನೋರ್ವ ಇಸಿಒ ಎಮ್.ಜಿ.ಕಡೇಮನಿ ಮಾರ್ಗದರ್ಶನ ಮಾಡಿದರು.
ಶಾಲಾ ಶಿಕ್ಷಕ ಎನ್.ಎನ್.ಕಬ್ಬೂರ ಇವರಿಂದ ಸಂಗ್ರಹಿಸಿದ್ದ ಮಾಸ್ಕ, ಪೆನ್ನು, ನೋಟಪುಸ್ತಕಗಳನ್ನು ಎಲ್ಲಾ ಮಕ್ಕಳಿಗೆ ವಿತರಿಸಲಾಯಿತು. ಮಕ್ಕಳಿಗೆ ಸಿಹಿ ಹಂಚಲಾಯಿತು, ಈ ಸಂದರ್ಭದಲ್ಲಿ ಪಿ.ಎನ್.ದೊಡಮನಿ ಶಿಕ್ಷಕಿ ಎಮ್.ಆರ್.ಪಂಡಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು ಮತ್ತು ಮಕ್ಕಳು ಇದ್ದರು.