ಸಾರ್ಥ
ಸ್ವಾಭಿಮಾನಿಗೆ ಯಾವ ನಿರೀಕ್ಷೆ
ಸರ್ವ ದಿಕ್ಕಿನಿಂದಲೂ ಉಪೇಕ್ಷೆ
ಹಸಿದವ ಉಂಡವ ಉಭಯತ
ರಲ್ಲಿ ಸಿಲುಕಿ ಕೌತುಕದಿ ಕಣ್ಬಿಟ್ಟವ
ಯಾರ ಯಾವ ಪರಿಗಣನೆಗೆ
ಬಾರದ ವ್ಶಕ್ತಿತ್ವ ಭಾವಜೀವ
ಅತ್ತ ಹಸಿದವ ಇತ್ತ ತುಂಬಿದವ
ನೆತ್ತಿಗೇರಿದವರ ಮಧ್ಶ ಒದ್ದಾಡುವವ
ಯಾರದೆ ಕೊಂಕು ಕುಚೇಷ್ಟೆಗೆ
ತಲೆ ಬಿಸಿಯಿಲ್ಲದೆ ಮಿಡಿಯುವ
ಯಾರ ಕಾಳಜಿಗೂ ದಕ್ಕದವ
ಯಾರ ಗಣನೆಗೂ ಸಿಕ್ಕದವ
ಹೆಳವ ಮುಳುವ ಎಡ ಬಲ ಸಪ್ರೇಮ
ಎಗ್ಗಿಲ್ಲದ ಗೌಜಿಲ್ಲದ ಬದುಕಿನ ಮಮ
ತೋಳಬಲ ಸಾಮರ್ಥ್ಮದ ದಿಟ ಬದುಕು
ಕಾಯಕವೆ ಕೈಲಾಸವೆಂದ ನಿಜ ಶ್ರಮಿಕ.
ಸಹನೆ ಶ್ರಮ, ಕ್ಷಮತೆ ಮಮತೆ ಗೊತ್ತು
ಅತ್ತ ದರಿ ಇತ್ತ ಪುಲಿ ಹೆಗಲ, ಹೊತ್ತು!
ವ್ಶವಧಾನ ತನುಮನದಿಂದ ಕೈಜೋಡಿಸಿ
ಯುಕ್ತಾಯುಕ್ತ ಸಹಜತೆಯಿಂದ ಸ್ಪಂದಿಸಿ
ವಿಕಾರ ಭಾವ ಇವನದ್ದೆಂದು
ಹಲ-ಕೆಲವರ ಮನಸ್ಸಿಗೆ ತಾಕದವ
ಸಾಪೇಕ್ಷ ನಿರಪೇಕ್ಷ ಎಲ್ಲ ಮೂಲದ್ರವ್ಶ
ಜೀವ ಜತನಕ್ಕಿರಲಿ, ತುಡಿತ-ಮಿಡಿತ
ತನ್ನ ಕಷ್ಟ ಕಾರ್ಪಣ್ಶ ಬವಣೆಯೆಂದು
ಯಾರಲ್ಲೂ ಹೇಳಲಾಗದೆ ಹೋದವ
ಆದರೂ ಜೀವಕೆ ಜೀವ ಕೊಡುವವ
ಮಧ್ಶಮನೋ ಅಧಮನೋ ಮಾತಿನ ಭುಕ್ತಿ
ಕಾಕದೃಷ್ಟಿ ತೋಳ ತೆಕ್ಕೆಯಲಿ, ಬಿಟ್ಟ ಪಿಳಿಪಿಳಿ
ಸಾವರಿಸಿಕೊಳ್ಳ ಬೇಕಾದ ಸಂಕಷ್ಟವು
ಅಡ್ಕತ್ತರಿಗೆ ಸಿಕ್ಕಿದಂಥ ಮನೋಗತ, ಸ್ಥಿತ
ಮಾನಾಪಮಾನದಲ್ಲಿ ಸರಿದಾರಿ ನಡೆದದ್ದು
ಜೀವನ ಪಥವದು ಸಾರ್ಥ ಗಟ್ಟಿ ಮುಟ್ಟಿಗ !!
ಅಮರ್ಜಾಾ
ಅಮರೇಗೌಡ ಪಾಟೀಲ ಜಾಲಿಹಾಳ,
ಕುಷ್ಟಗಿ
ಅಂತರಾಳ: ಅತ್ತ ಬಡವ-ಹಸಿದವ ಇತ್ತ ಬಲಾಢ್ಶ-ಹೊಟ್ಟೆ ಬಿರಿದವ ನಟ್ಟನಡುವೆ ಇರುವ ಅಪಾರ ಜನಸ್ತೋಮ. ಹೇಳಲಿಕ್ಕಿವೆ ಮಾತುಗಳು, ಗಂಟಲಿಂದೀಚೆಗೆ ಹೊರಬಾರದೆ ಸಿಕ್ಕಿ , ಹೇಳುವದೇನಿದೆ ಎಂದ, ನೊಂದ. ದೇಶದ ಹಾರ ಭಾರ ಹೊತ್ತು ಮುನ್ನಡೆಯುತ್ತಿರುವ ಅಪಾರ ನಿಷ್ಕಾಮ ಕರ್ಮಿ ಕಾರುಣ್ಶರು, ಅವರಿಗಾಗಿ ಸಮರ್ಪಿತ.