spot_img
spot_img

ನಾಡ ಪ್ರಭು ಕೆಂಪೇಗೌಡರು

Must Read

spot_img
- Advertisement -

ಬೆಂಗಳೂರು ನಗರವನ್ನು ಸ್ಥಾಪಿಸಿದವರು ಕೆಂಪೇಗೌಡರು. ಒಂದಾನೊಂದು ಕಾಲದಲ್ಲಿ ಈ ಪ್ರದೇಶವು ಜನವಸತಿ ಇಲ್ಲದಿದ್ದಾಗ ಹೊಯ್ಸಳರ ರಾಜ ಎರಡನೇ ವೀರಬಲ್ಲಾಳನು ಇಲ್ಲಿಗೆ ಬಂದಿದ್ದರು. ಅಲ್ಲಿ ಕೇವಲ ಒಂದು ಗುಡಿಸಲು ಆ ಗುಡಿಸಿಲಿನಲ್ಲಿ ಮುದುಕಿಯೊಬ್ಬಳು ವಾಸವಾಗಿದ್ದಳು. ಇವನಿಗೆ ಹಸಿವೆ. ಏನಾದರೂ ತಿನ್ನಲು ಕೊಡು ಎಂದಾಗ ಅವಳು ಅವನಿಗೆ ಬೆಂದಿದ್ದ ಕಾಳನ್ನು ಕೊಟ್ಟಳು. ಈ ಕಾರಣದಿಂದಲೇ ಆ ಸ್ಥಳಕ್ಕೆ ಬೆಂದಕಾಳೂರು ರೂಢಿಯಲ್ಲಿ ಬೆಂಗಳೂರಾಯಿತು. ಈಗಿನ ಹೆಬ್ಬಾಳವೇ ಈ ಪ್ರದೇಶ ಹಳೆ ಬೆಂಗಳೂರು ಎಂದೂ ಹೆಸರುಂಟು.

ವಿಜಯ ನಗರದ ಸನಾತನ ಧರ್ಮವನ್ನು ಪರಿಪಾಲಿಸಿಕೊಂಡು ಬರಲು ಕೆಂಪ ನಂಜೇಗೌಡನು ಅಧೀನ ಪಾಳೇಗಾರರಲ್ಲಿ ಒಬ್ಬನಾಗಿ ನಿಯೋಜಿತನಾದನು. ಇವನ ಪತ್ನಿ ಲಿಂಗಮಾಂಬಾ ಇವರಿಗೆ ಬೇಗನೇ ಮಕ್ಕಳಾಗಲಿಲ್ಲ. ಇವರ ಕುಲ ದೇವರಾದ ಭೈರವೇಶ್ವರ ಮತ್ತು ಕೆಂಪಮ್ಮನನ್ನು ಮೊರೆ ಹೋದಾಗ ಕುಲ ದೇವತೆ ಕೆಂಪಮ್ಮನ ಹರಕೆಯಿಂದ ಗಂಡು ಮಗು ಜನಿಸಿತು. ಅವನಿಗೆ ಕೆಂಪೇಗೌಡನೆಂದು ಹೆಸರಿಟ್ಟರು. ಮಾಧವ ಭಟ್ಟರು ಜಾತಕ ನೋಡಿ ಇವನು ಹಿರಿಯ ದೊರೆಯಾಗಿ ಅಪಾರವಾದ ಕೀರ್ತಿ ಹೊಂದುತ್ತಾನೆ ಎಂದು ಭವಿಷ್ಯ ನುಡಿದರು.

ಕೆಂಪೇಗೌಡರಿಗೆ ಮಾಧವಭಟ್ಟರು ತಮ್ಮ ಆಶ್ರಮದಲ್ಲಿ ರಾಜಯೋಗ್ಯವಾದ ವಿದ್ಯೆ ನೀಡಿದರು. ಅದರ ಜೊತೆ ಮಲ್ಲಯುದ್ಧ, ಕತ್ತಿವರಸೆ, ದೊಣ್ಣೆವರಸೆ ಕಲಿಸಿದರು. ಒಮ್ಮೆ ಆಶ್ರಮಕ್ಕೆ ಕಳ್ಳರು ನುಗ್ಗಿ ಹಸುಗಳನ್ನು ಅಪಹರಿಸಿಕೊಂಡು ಹೋದರು. ಕರುವಿನ ‘ಅಂಬಾ’ ಎಂಬ ಶಬ್ದಕ್ಕೆ ಎಚ್ಚೆತ್ತು ನಾಲ್ಕೈದು ಜನರನ್ನು ಎಚ್ಚರಿಸಿ ಅವರ ಬೆನ್ನಟ್ಟಿ ಅವರೊಡನೆ ಹೋರಾಡಿ ಹಸುಗಳನ್ನು ಬೆಳಿಗ್ಗೆ ಆಶ್ರಮಕ್ಕೆ ತಂದರು. ಶಿಷ್ಯನನ್ನು ಆಶೀರ್ವದಿಸಿದರು ನಂತರ ನೀನು ದೇಶ ತಿರುಗಬೇಕು ಕೋಶ ಓದಬೇಕು, ಸಂಚಾರದಿಂದ ಅನುಭವ ತಿಳಿವಳಿಕೆ ಬರುತ್ತದೆ.

- Advertisement -

ವಿಜಯ ನಗರಕ್ಕೆ ಸಂದರ್ಶನ ಕೊಡು ಎಂದು ಬೀಳ್ಕೊಟ್ಟರು.
ವಿಜಯನಗರ ಹಿಂದು ಸಾಮ್ರಾಜ್ಯಗಳ ಕಣ್ಮಣಿ. ಈ ಸಾಮ್ರಾಜ್ಯವಿಲ್ಲದಿದ್ದರೆ ಹಿಂದೂ ಧರ್ಮವು ಹೇಳ ಹೆಸರಿಲ್ಲದಂತೆ ಅಳಿದು ಹೋಗುತ್ತಿತ್ತು. ಕೃಷ್ಣದೇವರಾಯನ್ನು ಸರ್ವೋತ್ತಮನಾಗಿದ್ದನು. ಕೆಂಪನಂಜೇಗೌಡನು ಯಲಹಂಕ ನಾಡ ಪ್ರಭು ಎನಿಸಿಕೊಂಡು ದಕ್ಷಿಣದ ಯಲಹಂಕದಲ್ಲಿ ಬೆಂಗಾವಲಾಗಿದ್ದನು. ಅಲ್ಲಿ ನವರಾತ್ರಿಯಲ್ಲಿ ಪ್ರತಿ ವರ್ಷವೂ ದರ್ಬಾರಿನಲ್ಲಿ ಕ್ರೀಡೆಗಳನ್ನು ಏರ್ಪಡಿಸುತ್ತಿದ್ದರು. ಅವುಗಳಲ್ಲಿ ಮಲ್ಲ ಯುದ್ಧವು ಒಂದು. ಕೆಂಪೇಗೌಡರು ಪ್ರತಿಯೊಂದು ಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಸ್ಥಾನ ಗಳಿಸಿದರು.

ಕೃಷ್ಣದೇವರಾಯನ ಸಮ್ಮುಖದಲ್ಲಿ ತಿರುಮಲರಾಯ ಚಕ್ರವರ್ತಿಯ ಅಳಿಯ ಕೆಂಪೇಗೌಡನಿಗೂ ತಿರುಮಲ ರಾಮನಿಗೆ ಮಲ್ಲಯುದ್ಧ ಸಾವಿರಾರು ಜನ ಸೇರಿದ್ದರು. ಇವರ ಕಾಳಗ ನೋಡುವವರ ಮೈಯನ್ನು ನಡುಗಿಸುವಂತಿತ್ತು. ತಿರುಮಲರಾಯನನ್ನು ಅಂಗಾತನಾಗಿ ಕೆಳಕ್ಕೆ ಕೆಡವಿ ಜಯಶಾಲಿಯಾದನು.

ಹೀಗೆ ದೇಶ ಸಂಚಾರವನ್ನು ನಡೆಸಿ ವಿಜಯ ನಗರದ ರಾಜಧಾನಿಯಿಂದ ಕೆಂಪೇಗೌಡನು ತಂದೆಯ ರಾಜ್ಯಕ್ಕೆ ಹಿಂತಿರುಗಿದ. ತಂದೆ-ತಾಯಿಗೆ ಸಂತೋಷ ತಂದ. ಕುಲಗುರುವನ್ನು ಬರಮಾಡಿಕೊಂಡು ರಾಜ್ಯಸೂತ್ರಗಳನ್ನು ವಹಿಸಿ ಪಟ್ಟ ಕಟ್ಟುವ ಸಂಗತಿ ತಿಳಿಸಿದನು. ಈ ಹೊಣೆಯ ಕೆಲಸವನ್ನು ನಿರಾತಂಕವಾಗಿ ನಡೆಸಲು ಎಲ್ಲರೂ ಆಶೀರ್ವಸಬೇಕೆಂದು ಬೇಡಿಕೊಂಡನು.
ಅದರ ಜೊತೆ ಲಿಂಗಾಂಬೆಯ ಅಣ್ಣನ ಮಗಳಾದ ಚೆನ್ನಾಂಬೆಯೊಡನೆ ಲಗ್ನವೂ ಆಯಿತು. ಕೆಂಪೇಗೌಡನ ಪಟ್ಟಾಭಷೇಕವಾದ ಒಂದರೆಡು ವರ್ಷಗಳಲ್ಲೇ ಯಲಹಂಕನಾಡು ವಿಸ್ತಾರಗೊಂಡಿತು. ಪ್ರಜೆಗಳ ಸೌಖ್ಯವೇ ತನ್ನ ಸುಖವೆಂದು ತಿಳಿದು ನಾಡನ್ನು ಪಾಲಿಸುತ್ತಿದ್ದನು. ಕೆಲವು ವರ್ಷಗಳ ನಂತರ ತಂದೆ ತೀರಿಕೊಂಡರು 1513 ರಲ್ಲಿ ರಾಜ್ಯದ ಆಡಳಿತವನ್ನು ವಹಿಸಿಕೊಂಡರು.

- Advertisement -

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಿದ್ದಂತೆ ಮಹಾನಗರ ಒಂದನ್ನು ಕಟ್ಟಲು ವಿಜಯನಗರದ ಅರಸನಿಂದ ಗೌಡರು ಒಪ್ಪಿಗೆ ಪಡೆದರು. ಶಾಸ್ತ್ರೋಕ್ತವಾದ ವಿಧಿಗಳು ಮುಗಿದ ನಂತರ ನೊಗ ಹೂಡಿದ ನಾಲ್ಕು ಜೊತೆ ಎತ್ತುಗಳು ಈಗ ದೊಡ್ಡಪೇಟೆ ಇರುವ ಸ್ಥಳದಲ್ಲಿ ಬಂದು ನಿಂತವು, ಪೂರ್ವಕ್ಕೆ ಹಲಸೂರು, ಪಶ್ಚಿಮಕ್ಕೆ ಅರಳೇಪೇಟೆ, ಉತ್ತರಕ್ಕೆ ಯಲಹಂಕ, ದಕ್ಷಿಣಕ್ಕೆ ಕೋಟೆಯ ತೆಂಕಣ ಗಡಿಯವರೆಗೂ ಗೆರೆ ಹಾಕಲ್ಟಟ್ಟಿತು. ಇಲ್ಲಿಯೇ ಮಂತ್ರಿಗಳು ಹಾಗೂ ಇತರ ಪ್ರಮುಖರಿಗೂ ಭವನಗಳನ್ನು ಕಟ್ಟುವ ಕೆಲಸ ಆರಂಭವಾಯಿತು. 1537ರಲ್ಲಿ ಈ ಪ್ರದೇಶಕ್ಕೆ “ಬೆಂಗಳೂರು” ಎಂದು ಹೆಸರಿಟ್ಟರು.

ಹೀಗೆ ರಚನೆಯಾದ ಬೆಂಗಳೂರಿಗೆ ಅನೇಕರು ವಲಸೆ ಬರಲಾಂಭಿಸಿದರು. ನಗರ ರಕ್ಷಣೆಗಾಗಿ ಕೋಟೆಗಳನ್ನು ನಿರ್ಮಿಸಿದನು. ಉತ್ತರಕ್ಕೆ ಯಲಹಂಕ ಬಾಗಿಲು, ಪೂರ್ವಕ್ಕೆ ಹಲಸೂರು ಬಾಗಿಲು, ದಕ್ಷಿಣಕ್ಕೆ ಮೈಸೂರು ಬಾಗಿಲು (ಲಾಲ್ ಬಾಗ ಹತ್ತಿರ) ಪಶ್ಚಿಮಕ್ಕೆ ಸೊಂಡೇಕೊಪ್ಪದ ಬಾಗಿಲು ಈ ರೀತಿ ನಾಲ್ಕು ದಿಕ್ಕುಗಳಲ್ಲಿ ಗೋಪುರಗಳನ್ನು ಕಟ್ಟಿಸಿದನು.

ಒಟ್ಟು 64 ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಕೆಂಪೆಗೌಡರದ್ದು. ಬಹುಶಃ ಇಂಥ ಪೇಟೆಗಳನ್ನು ಯಾವುದೇ ರಾಜ ಮಹಾರಾಜರೂ ನಿರ್ಮಿಸಿರಲಾರರು. ಅರಳೆಪೇಟೆ, ಅಕ್ಕಿಪೇಟೆ, ಕುಂಬಾರ ಪೇಟೆ, ರಾಗಿ ಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಗೊಲ್ಲರ ಪೇಟೆ, ಹೂವಾಡಿಗರ ಪೇಟೆ, ಮಂಡಿಪೇಟೆ, ಅಂಚೇಪೇಟೆ, ಬಳೇ ಪೇಟೆ, ತರಗು ಪೇಟೆ, ಸುಣ್ಣಕಲ ಪೇಟೆ, ಮೇದಾರ ಪೇಟೆ, ಕುರಬರ ಪೇಟೆ, ಮುತ್ತಾಲ ಪೇಟೆ, ಕುಂಚಿಟಿಗರ ಪೇಟೆ, ದೊಡ್ಡ ಪೇಟೆ, ಚಿಕ್ಕಪೇಟೆ, ಉಪ್ಪಾರ ಪೇಟೆ ….. ಹೀಗೆ ಸಾಗುತ್ತವೆ.

ಈ ಎಲ್ಲ ಪೇಟೆಗಳಿಗೆ ಕುಲಕಸುಬುದಾರರನ್ನು ಕರೆದುಕೊಂಡು ಬಂದು ಅವರಿಗೆ ಸ್ಥಳನೀಡಿ ಅವರ ಜೀವನಕ್ಕೆ ಆಧಾರವಾದರು. ಒಂದು ನಗರವನ್ನು ಹೇಗೆ ಕಟ್ಟಬೇಕು ಎಂಬುದನ್ನು ಕೆಂಪೇಗೌಡರು ಹೀಗೆ ತೊರಿಸಿಕೊಟ್ಟದ್ದರು. ಅಲ್ಲದೇ ನೂರಾರೂ ಕೆರೆಗಳನ್ನು ಕಟ್ಟಿಸಿದರು. ಕರೆಗಳು ಅಂತರ್ಜಲವನ್ನು ವೃದ್ದಿಸಿದ್ದವು. ಬೆಂಗಳೂರಿನ ಸ್ಥಾಪನೆ, ನಗರ ನಿರ್ಮಾಣ ಕೋಟೆಯ ಮಹಾದ್ವಾರದ ಬಲಿದಾನ ಭೈರವ ನಾಣ್ಯ ಚಲಾವಣೆ ಮುಂತಾದವುಗಳನ್ನೆಲ್ಲ ವಿಜಯನಗರದ ಅರಸು ಅಚ್ಚುತರಾಯನು ದೂತರಿಂದ ಕೇಳಿ ತಿಳಿದಿದ್ದನು.

ನವರಾತ್ರಿಯಲ್ಲಿ ಗೌಡರನ್ನು ಕರೆಸಿಕೊಂಡು ಇತರ ಪಾಳೇಗಾರರ ಸಮ್ಮುಖದಲ್ಲಿ ಸನ್ಮಾನಿಸಿದರು. ವಿಜಯ ನಗರದ ಸನಾತನ ಧರ್ಮದ ಪುನರುದ್ಧಾರಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದಾಗಿ ಬಿನ್ನೈಸಿಕೊಂಡರು.

ಚೆನ್ನ ಪಟ್ಟಣದ ಪಾಳೇಗಾರ ಜಗದೇವರಾಯನಿಗೆ ಗೌಡರ ಅಭ್ಯುದಯವು ಸಹಿಸಲಿಲ್ಲ. ತಿರುಮಲರಾಯನ ಜೊತೆಗೂಡಿ ಒಳ ಸಂಚು ನಡಿಸಿ ಗೌಡನು ಭೈರವ ನಾಣ್ಯವನ್ನು ಮುದ್ರಿಸಿ ತಾನೇ ಚಕ್ರವರ್ತಿ ಎಂದು ತೋರಿಸಿಕೊಳ್ಳುತ್ತಿದ್ದಾನೆ ಎಂದು ಕಿವಿ ಚುಚ್ಚಿ ರಾಜಬಂಧನ ಮಾಡಿ ಜಗದೇವರಾಯನನ್ನೇ ಯಲಹಂಕದ ಆಡಳಿತಕ್ಕೆ ನೇಮಿಸಿದನು. ಆದರೂ ಗೌಡರು ದೃತಿಗೆಡಲಿಲ್ಲ, ಸತ್ಯಕ್ಕೆ ಜಯವಿರುವುದು ಗೊತ್ತಾಗುತ್ತದೆ. ಭೀತಿಯು ಸೋಂಕು ಇಲ್ಲದ ಪಾಪದ ಲೋಪವಿಲ್ಲದ ಆ ದೃಢ ವಾಣಿಗೆ ಚಕ್ರವರ್ತಿ ಬೆರಗಾಗಿ ಕೆಂಪೇಗೌಡನ ಸ್ವಾಮಿ ಭಕ್ತಿ ನಿಷ್ಠೆ ಚಕ್ರವರ್ತಿ ಸದಾಶಿವರಾಯನಿಗೆ ಮನವರಿಕೆಯಾಯಿತು.

ಕಾರಣವಿಲ್ಲದೇ ರಾಜ ಬಂಧನಕ್ಕೆ ಗುರಿಪಡಿಸಿದ್ದಕ್ಕೆ ಪಶ್ಚಾತ್ತಾಪ ಆಯಿತು. ಏಕಾಂತ ವಾಸದಿಂದ ಬಿಡುಗಡೆ ಮಾಡಿದರು. ಹೀಗೆ ರಾಜಧಾನಿಗೆ ಹಿಂದಿರುಗಿದ ಗೌಡರು ವಿಜಯನಗರದ ಮೇಲ್ಪಂಕ್ತಿಯನ್ನು ಅನುಸರಿಸಿ ಅನೇಕ ಸುಧಾರಣೆಗಳನ್ನು ಕೈಗೊಂಡರು. ಗವಿ ಗಂಗಾಧರೇಶ್ವರ ಹಾಗೂ ಸೋಮೇಶ್ವರ ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು. ಹೀಗೆ ಕೆಂಪೇಗೌಡರು 1569 ರ ವರೆಗೂ ಆಳಿ ಕಾಲವಾದರು. ಈತನ ನಂತರ ಎರಡನೇ ಕೇಂಪೆಗೌಡರು ಪಟ್ಟಕ್ಕೆ ಬಂದರು. ಹೀಗೆ ಈ ವಂಶದಲ್ಲಿ ಕೇಂಪೆಗೌಡರು 1728ರ ವರೆಗೂ ಆಳಿದರು. ನಂತರ ಮೈಸೂರು ರಾಜ್ಯದಲ್ಲಿ ಸೇರಿ ಹೋಯಿತು.

ಬೆಂಗಳೂರಿನ ನಗರಾಡಳಿತ ಕಚೇರಿಯ ಮುಂದಿನ ಚೌಕದಲ್ಲಿ ಕೇಂಪೇಗೌಡರ ಪ್ರತಿಮೆ ಇದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಇಟ್ಟಿದ್ದಾರೆ.

ಶ್ರೀ ಎಂ. ವೈ. ಮೆಣಸಿನಕಾಯಿ
ಮನೆ ನಂ.4691,
ಇಂದಿರಾ ಕಾಲನಿ
ಬೆಳಗಾವಿ
ಮೋ: 9449209570

- Advertisement -
- Advertisement -

Latest News

ಜಮೀರ್ ಖಾನ್ ಒಬ್ಬ ಹುಚ್ಚ – ರಟಗಲ್ ಶ್ರೀಗಳು

ಬೀದರ - ಜಮೀರ ಖಾನ್ ಏನ್ ಮಾತನಾಡುತ್ತಾನೋ ಅವನಿಗೇ ತಿಳಿಯೋದಿಲ್ಲ ಆತ ಒಬ್ಬ ಹುಚ್ಚನಂತೆ ಇದ್ದಾನೆ ಅಂಥವನಿಗೆ ಸಿದ್ಧರಾಮಯ್ಯ ಬೆಂಬಲ ಕೊಡುತ್ತಿದ್ದಾರೆ ಎಂದು ರಟಗಲ್ ಶ್ರೀಗಳು...
- Advertisement -

More Articles Like This

- Advertisement -
close
error: Content is protected !!
Join WhatsApp Group