spot_img
spot_img

ಶಿಕ್ಷಕ ಹುಲಿಗೊಪ್ಪರಿಗೆ ಗಣರಾಜ್ಯೋತ್ಸವ ಪ್ರಶಸ್ತಿ

Must Read

spot_img
- Advertisement -

ನಾನು ಮುನವಳ್ಳಿಯಲ್ಲಿ ೭ ನೆಯ ತರಗತಿಯಲ್ಲಿ ಓದುತ್ತಿದ್ದಾಗ ಸುರೇಶ ಗಿ.ಕಡೇಮನಿ ಗುರುಗಳು ನಮಗೆ ಪ್ರಧಾನ ಗುರುಗಳಾಗಿದ್ದರು. ಚುಳಕೀಮಠ ಗುರುಗಳು ಕನ್ನಡ ವಿಷಯವನ್ನು ಹೇಳಿದರೆ ಕಡೇಮನಿಯವರು ಇಂಗ್ಲೀಷ ಬೋಧಿಸುತ್ತಿದ್ದರು. ಅಸೂಟಿ ಗುರುಗಳು ವಿಜ್ಞಾನ ವಿಷಯ. ಹುಲಿಗೊಪ್ಪ ಗುರುಗಳು ಗಣಿತ ವಿಷಯವನ್ನು ಹೇಳುತ್ತಿದ್ದರು. ಹುಲಿಗೊಪ್ಪ ಗುರುಗಳಿಗೆ ಸಿಟ್ಟು ಬಂದರೆ ದಂಡಿಸುವ ರೀತಿ ವಿಭಿನ್ನ. ಕಿವಿಯನ್ನು ಹಿಡಿದುಕೊಂಡು ಕುಳಿತುಕೊಳ್ಳುವುದು ಏಳುವುದು ಕನಿಷ್ಠ ಹತ್ತು ಸಲ ಈ ರೀತಿ ಮಾಡಬೇಕು. ಹೆಚ್ಚು ಮಾತನಾಡುವವರಲ್ಲ. ವಿಷಯ ನೇರವಾಗಿ ಹೇಳುವುದು ಅವರ ರೂಢಿ. ಇದನ್ನೇಕೆ ನೆನಪಿಸಿದೆನೆಂದರೆ ನನ್ನ ಗುರುಗಳ ಮಗ ಬಸನಗೌಡ ಹುಲಿಗೊಪ್ಪ ಈ ವರ್ಷದ ಸವದತ್ತಿ ತಾಲೂಕ ಆಡಳಿತದ ಗಣರಾಜ್ಯೋತ್ಸವದ ಉತ್ತಮ ಶಿಕ್ಷಕ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವುದು.

ಇವರ ಸಹೋದರ ಕೂಡ ನನಗೆ ಆತ್ಮೀಯ. ನಾವೆಲ್ಲ ಪದವಿ ಓದಿದ್ದು ದಾರವಾಡದಲ್ಲಿ. ಅಲ್ಲಿ ಮುನವಳ್ಳಿಯವರೆಲ್ಲ ಪ್ರತಿ ನಿತ್ಯ ಒಂದೆಡೆ ಸೇರುತ್ತಿದ್ದೆವು. ಅವನು ನ್ಯಾಯವಾದಿಯಾಗುವ ನಿಟ್ಟಿನಲ್ಲಿ ಎಲ್.ಎಲ್.ಬಿ. ಓದುತ್ತಿದ್ದನು. ಹೀಗೆ ಇವರ ನಂಟು ನನ್ನೊಂದಿಗೆ ಇದ್ದು ಬಸನಗೌಡ ಹುಲಿಗೊಪ್ಪರಿಗೆ ಪ್ರಶಸ್ತಿ ಸಂದಾಗ ಅಭಿನಂದಿಸುವ ಜೊತೆಗೆ ಅವರ ವ್ಯಕ್ತಿತ್ವ ಕುರಿತು ಎರಡು ಮಾತುಗಳನ್ನು ನನ್ನ ಬರಹದ ಮೂಲಕ ವ್ಯಕ್ತಪಡಿಸುವ ನಿಟ್ಟಿನಲ್ಲಿ ಈ ಬರಹ.

- Advertisement -

ವಯಸ್ಸಿನಲ್ಲಿ ನನಗಿಂತ ಹಿರಿಯರು ಬಸನಗೌಡ ಹುಲಿಗೊಪ್ಪ. ಆದರೆ ವೃತ್ತಿಯಲ್ಲಿ ನಾವೆಲ್ಲ ಪರಿಚಿತರು. ಮುನವಳ್ಳಿ ಶ್ರೀ ಸೋಮಶೇಖರ ಮಠದ ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ನಿರೂಪಣೆ ಶಿಕ್ಷಕ ಬಸನಗೌಡ ಹುಲಿಗೊಪ್ಪರದು ಮತ್ತು ಕೆ.ಎಸ್.ಆರ್.ಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ಗಂಗಾಧರ ಗೋರಾಬಾಳ ಅವರದು ಇದ್ದೇ ಇರುತ್ತದೆ. ಅವರ ನಿರೂಪಣೆ ಶೈಲಿ ಕೂಡ ವಿಶಿಷ್ಡ. ವಚನ ಸಾಹಿತ್ಯದ ಜೊತೆಗೆ ಕವಿಪುಂಗವರ ನುಡಿಗಳ ಬಳಕೆ ಅವುಗಳನ್ನು ಸಂದರ್ಭೋಚಿತವಾಗಿ ಹೇಳುವ ರೀತಿ ಜೊತೆಗೆ ಮಠದಿಂದ ಗೌರವಕ್ಕೆ ಪಾತ್ರರಾಗುವವರಿಗೆ ಭಿನ್ನವತ್ತಳೆಯನ್ನು ಕೂಡ ರಚಿಸುವ ಹುಲಿಗೊಪ್ಪ ಅವರದು ವಿಭಿನ್ನ ವ್ಯಕ್ತಿತ್ವ.

ನೇರ ನುಡಿಯ ಆದರ್ಶ ಶಿಕ್ಷಕ ತಂದೆ ಭರಮಗೌಡ ಹಾಗೂ ಮಮತಾಮಯಿ ತಾಯಿ ಚಂದ್ರವ್ವ ಇವರ ಜೇಷ್ಠ ಸುಪುತ್ರರಾಗಿ ಮುನವಳ್ಳಿಯಲ್ಲಿ ೧೮-೦೭-೧೯೬೮ ರಲ್ಲಿ ಜನಿಸಿದ ಇವರ ಹೆಸರನ್ನು ಇವರ ತಂದೆ ಇಟ್ಟಿದ್ದು.ಬಸವಣ್ಣವರ ನಾಮಸ್ಮರಣೆ ನಿತ್ಯ ಜರುಗಲಿ ಎಂಬ ಆಶಯದಿಂದ “ಬಸನಗೌಡ “ ಎಂದು.ಶರಣತತ್ವದ ದಂಪತಿಗಳು ಸದಾ ತಮ್ಮ ಮಕ್ಕಳು ಉತ್ತಮ ಚಾರಿತ್ರ್ಯವಂತನಾಗಲಿ ಎಂದು ಉತ್ತಮ ಸಂಸ್ಕಾರ ನೀಡಿದರು..ಶಾಂತಾ ಹಾಗೂ ನಿಂಗವ್ವ ಎಂಬ ಇಬ್ಬರು ಅಕ್ಕಂದಿರು ಮತ್ತು ವಿರಾಜಗೌಡ ಎಂಬ ಓರ್ವ ತಮ್ಮನನ್ನು ಹೊಂದಿದ ಚೊಕ್ಕ ಕುಟುಂಬ ಇವರದ್ದಾಗಿದೆ.

ಪ್ರಾಥಮಿಕ ಶಿಕ್ಷಣವನ್ನು ಮುನವಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿಯೂ ಹಾಗೂ ಪ್ರೌಢಶಿಕ್ಷಣವನ್ನು ಜೆ.ಎಸ್.ಪಿ. ಸಂಸ್ಥೆಯ ಎಸ್.ಪಿ.ಜೆ.ಜಿ ಪ್ರೌಢಶಾಲೆ ಮುನವಳ್ಳಿಯಲ್ಲಿ ಪೂರೈಸಿದ ಇವರು ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡದಲ್ಲಿ ಪಿಯುಸಿ ಸೈನ್ಸ್ ಸೇರಿದರು. ಅಲ್ಲಿ ಅನುತ್ತೀರ್ಣರಾಗಿ ತಂದೆಯ ಆಸೆಯಂತೆ ಶಿಕ್ಷಕನಾಗಲು,ಮತ್ತೆ ಮುನವಳ್ಳಿಯಲ್ಲಿ ಪಿಯುಸಿ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿ ಧಾರವಾಡದ ಸರಕಾರಿ ಶಿಕ್ಷಣ ತರಬೇತಿ ವಿದ್ಯಾಲಯದಲ್ಲಿ ಡಿ ,ಎಡ್ ಪದವಿ ಪಡೆದರು.

- Advertisement -

ಸವದತ್ತಿಯ ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಬಿ.ಎ. ಅಧ್ಯಯನ ಮಾಡುತ್ತಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಸೇವೆಗಾಗಿ ಶ್ರೀ ಗಜಾನನ ವಿದ್ಯಾವರ್ಧಕ ಜನಕಲ್ಯಾಣ ಟ್ರಸ್ಟ್ ನ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ೧೯೯೨ ರಿಂದ ೧೯೯೭ ರ ವರೆಗೆ ಸೇವೆ ಸಲ್ಲಿಸಿದರು. ಬಹುಶಃ ಇವರ ಈ ಸೇವೆ ಒಂದು ಆದರ್ಶ ಶಿಕ್ಷಕನಾಗಿ ರೂಪಿತವಾಗಲು ಆ ಆಡಳಿತ ಮಂಡಳಿಯ ನಿರಂತರ ಒಡನಾಟ ದಿವಂಗತ ಡಾ.ಎ..ಜಿ.ನಾಯಕ. ಸತ್ಸಂಗಿಗಳು ಹಿರಿಯರಾದ ಯಶವಂತಗೌಡರ. ಶ್ರೀಕಾಂತ ಮಿರಜಕರ ಹೀಗೆ ಹಲವು ಹಿರಿಯರ ಮಾರ್ಗದರ್ಶನ ಉತ್ತಮ ಬೋಧನೆ ಮಕ್ಕಳೊಂದಿಗೆ ವೈಶಿಷ್ಟ್ಯಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಮೆಚ್ಚಿನ ಶಿಕ್ಷಕರಾಗಿ ಬೆಳಗತೊಡಗಿದರು. ಆಗ ಇವರಿಗೆ ಒಲಿದು ಬಂದಿದ್ದು ಸರಕಾರಿ ಶಿಕ್ಷಕ ವೃತ್ತಿ , ರಾಮದುರ್ಗ ತಾಲೂಕಿನ ಉಜ್ಜಿನಕೊಪ್ಪ ಸರಕಾರಿ ಶಾಲೆಯಲ್ಲಿ ಸತತ ೧೭ ವರ್ಷಗಳ ವರೆಗೆ ಶಿಕ್ಷಕರಾಗಿ ಸೇವೆಗೈಯುತ್ತ ಸ್ವಂತ ಸ್ಥಳಕ್ಕೆ ವರ್ಗಾವಣೆಗೊಳ್ಳುವ ಮೂಲಕ ೨೦೧೪ ರಿಂದಲೂ ಸವದತ್ತಿ ತಾಲೂಕಿನ ಕಲ್ಲೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆಗೆ ಬಂದರು. ಸದ್ಯ ಕೂಡ ಕಲ್ಲೋಳಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಒಳ್ಳೆಯ ನಿರೂಪಕರಾಗಿ, ಗಾಯನ ಕಲಾವಿದರಾಗಿ, ಉಪನ್ಯಾಸಕರಾಗಿ ತಬಲಾ ವಾದಕರಾಗಿ ಹೆಸರು ಮಾಡಿದ್ದಾರೆ. ಭಜನೆ ಸತ್ಸಂಗ,ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಪಾಲ್ಗೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಕವನ ,ಮಠಗಳ ಪರಿಚಯ ಲೇಖನ, ಬರೆಯುತ್ತ ಸಾಹಿತ್ಯ ಕ್ಷೇತ್ರದಲ್ಲಿಯೂ ಕಾರ್ಯ ಮಾಡುತ್ತಿದ್ದಾರೆ. “ಮುನಿಪುರಾಧೀಶರು” ಹಾಗೂ “ಗುರು ಶಿಷ್ಯರು” ಎರಡು ಸ್ಮರಣ ಸಂಚಿಕೆಗಳ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿರುವರು.

ಅನೇಕ ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.೨೦೧೩ ರಲ್ಲಿ ಜೈಂಟ್ಸ್ ಗ್ರುಪ್ ನ ರಾಣಿ ಚೆನ್ನಮ್ಮ ಸಹೇಲಿ ಗ್ರುಪ್ ವತಿಯಿಂದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಆಶಾ ಇವರನ್ನು ೧೯೯೭ ರ ಎಪ್ರೀಲ್ ೩೦ ರಂದು ವಿವಾಹವಾಗಿ, ಇಬ್ಬರು ಸುಪುತ್ರ ರನ್ನು ಹೊಂದಿ ಸುಖೀ ಜೀವನ ಸಾಗಿಸುತ್ತಿದ್ದಾರೆ.

ಇಷ್ಟೇ ಅಲ್ಲ ಜೈಂಟ್ಸ ಗ್ರುಪ್ ಆಪ್ ಮುನವಳ್ಳಿ. ಶರಣ ಸಾಹಿತ್ಯ ಪರಿಷತ್ತು. ಕನ್ನಡ ಸಾಹಿತ್ಯ ಪರಿಷತ್ತು ಮುನವಳ್ಳಿ ಹೋಬಳಿ ಘಟಕಗಳಲ್ಲಿ ಪದಾಧಿಕಾರಿಗಳಾಗಿ ಕೂಡ ರಚನಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಸನಗೌಡ ಹುಲಿಗೊಪ್ಪ ಅವರನ್ನು ಗಣರಾಜ್ಯೋತ್ಸವದಂದು ಸವದತ್ತಿಯಲ್ಲಿ ಶಿಕ್ಷಣ ರಂಗದ ಸೇವೆಯನ್ನು ಗುರುತಿಸಿ ಸವದತ್ತಿ ತಾಲೂಕಾ ಆಡಳಿತದವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜನಪ್ರೀಯ ಶಾಸಕ ಹಾಗೂ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ.

ತಹಶೀಲ್ದಾರ ಪ್ರಶಾಂತ.ಪಾಟೀಲ. ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ.ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ.ಉಪಾಧ್ಯಕ್ಷ ದೀಪಕ ಜಾನ್ವೇಕರ ,ಪುರಸಭೆ ಮುಖ್ಯಾಧಿಕಾರಿಗಳಾದ ಪಿ.ಎಮ್.ಚನ್ನಪ್ಪನವರ, ಸಿ.ಪಿ.ಐ.ಮಂಜುನಾಥ ನಡುವಿನಮನಿ, ಪಿ.ಎಸ್.ಐ. ಶಿವಾನಂದ ಗುಡುಗನಟ್ಟಿ..ಗಣ್ಯರಾದ ಜಗದೀಶ ಶಿಂತ್ರಿ. ಸೇರಿದಂತೆ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಆಯ್ಕೆಯನ್ನು ಮುನವಳ್ಳಿಯ ವಿವಿಧ ಸಂಘಟನೆಗಳು ಅಭಿನಂದಿಸುವ ಜೊತೆಗೆ ಶ್ರೀ ಸೋಮಶೇಖರ ಮಠದಲ್ಲಿ ಜರುಗಿದ ಶ್ರೀ ಬಸವಲಿಂಗ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಸಂದರ್ಭದಲ್ಲಿ ರಾಣಿ ಚನ್ನಮ್ಮ ಸಹೇಲಿ ಬಳಗ. ಅನ್ನದಾನೇಶ್ವರ ಮಹಾವಿದ್ಯಾಲಯದ ಶಿಕ್ಷಕ ಬಳಗ. ಗುರುಗಳ ವಿದ್ಯಾರ್ಥಿಗಳು. ಮತ್ತು ಶ್ರೀ ಸೋಮಶೇಖರ ಮಠದ ಪೂಜ್ಯರಾದಿಯಾಗಿ ಬಸನಗೌಡ ಹುಲಿಗೊಪ್ಪ ಗುರುಗಳಿಗೆ ಗುರುರಕ್ಷೆ ಮತ್ತು ಸನ್ಮಾನ ಕಾರ್ಯಕ್ರಮ ಜರುಗಿಸುವ ಮೂಲಕ ಶುಭ ಕೋರಿದರು.ಅಷ್ಟೇ ಅಲ್ಲ ಕರ್ನಾಟಕ ಸಾಂಸ್ಕೃತಿಕ ಸಾಹಿತ್ಯ ಪರಿಷತ್ತು ಸವದತ್ತಿ ತಾಲೂಕು ಘಟಕದ ಅಧ್ಯಕ್ಷರಾದ ಅನುರಾಧ ಬೆಟಗೇರಿಯವರು ಕೂಡ ಇವರ ಈ ಸಾಧನೆಗೆ ಶುಭ ಕೋರಿದರು.

ಇಂತಹ ಶಿಕ್ಷಕರಿಗೆ ಇನ್ನೂ ಉತ್ತರೋತ್ತರ ಜಿಲ್ಲೆ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿ ಗೌರವಗಳು ದೊರಕಲಿ ಎಂದು ಈ ಸಂದರ್ಭದಲ್ಲಿ ಶುಭ ಕೋರುವೆನು.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

- Advertisement -
- Advertisement -

Latest News

ಕವನಗಳು

ಭ್ರೂಣವು .ಹೊಸ ಬಸುರಿನ ಒಡಲೊಳಗೆ ಚಿಗುರೊಡೆದ ಭ್ರೂಣವು ಒಡಲಾಚೆ ವಿಶ್ವದಿ ಮೊಟ್ಟೆಯೊಡೆದು ಹುಟ್ಟ ಬಯಸುವ ಪಕ್ಷಿಯು ಕಡಲೊಳಗೆ ಕಣ್ಣ್ತೆರೆದು ಕನಸು ಕಾಣುವ ಪುಟ್ಟ ಮೀನು ಜೀವಜಾಲದ ಮಧ್ಯೆ ನಗೆಯ ಪರಿಮಳ ಕಂಪು ಸೂಸುವದು ಮುಗ್ಧ ಭಾವ ಮೊಳಕೆಯೊಡೆವ ಜೀವಕೆ ಗೊತ್ತಿಲ್ಲ ಹೆಣ್ಣೋ ಗಂಡೋ? ಸಮಕಳೆ ಶಾಂತಿ ಮಂತ್ರ ________________________ ನೆಲವನಾಳುವ ನೆಲವನಾಳುವ ನೀಚ ಮನುಜರೆ ಏಕೆ ಕಾಡು ಕೊಲ್ಲುತಿರಿ ಮರದ ಪೊದರಲಿ ಪುಟ್ಟ ಪಕ್ಷಿ ನಗುವ ಕಲೆಗೆ ಏಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group