ಸಿಂದಗಿ: ಇಡಿ ಪ್ರಪಂಚವೇ ಭಾರತದತ್ತ ನೋಡುವ ಹಾಗೆ 2024ಕ್ಕೆ ರಾಮಮಂದಿರದಲ್ಲಿ ರಾಮ ವಿರಾಜಮಾನವಾಗುತ್ತಾನೆ. ಅಲ್ಲದೆ ದೇಶದಲ್ಲಿ ನಡೆಯುತ್ತಿರುವ ಗೋಹತ್ಯೆ, ಲವ್ ಜಿಹಾದ್ ಮಾಡಿದರೆ ಇನ್ನು ಮುಂದೆ ಹುಷಾರ್ ಎಂದು ವಿಶ್ವ ಹಿಂದೂ ಪರಿಷದ್ ಕೇಂದ್ರ ಸಹ ಸಂಘಟನಾ ಮಹಾ ಮಂತ್ರಿ ಗೋಪಾಲ ಜೀ ಎಚ್ಚರಿಸಿದರು.
ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಹಮ್ಮಿಕೊಂಡ ಶ್ರೀ ಹನುಮಾನ ಮೂರ್ತಿ ಅನಾವರಣ ಹಾಗೂ ರಾಮ ನವಮಿ ಉತ್ಸವದ ಶೋಭಾಯಾತ್ರೆ ಹಾಗೂ ಸಾರ್ವಜನಿಕ ಸಮಾವೇಶವನ್ನು ಉದ್ಘಾಟಿಸಿ, ರಾಮಮಂದಿರ ಬಗ್ಗೆ ಕೂಲಂಕುಷವಾಗಿ ಮಾತಾಡಿ ರಾಮಮಂದಿರ ಕಟ್ಟಡದ ಹಂತಗಳನ್ನು ವಿವರಿಸಿ ಈಗ ಭಾರತ ಮೊದಲಿನಂತಿಲ್ಲ ಭಾರತ ಬದಲಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆಲಮೇಲ ಹಿರೇಮಠದ ಪೂಜ್ಯಶ್ರೀ ಚಂದ್ರಶೇಖರ ಶಿವಾಚಾರ್ಯರು ಬೋರಗಿ-ಪುರದಾಳ ವಿಶ್ವಾರಾದ್ಯ ಮಠದ ಪೂಜ್ಯಶ್ರೀ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಕನ್ನೊಳ್ಳಿ ಮರುಳಾರಾಧ್ಯಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಯಂಕಂಚಿ ಹಿರೇಮಠದ ಪೂಜ್ಯಶ್ರೀ ಅಭಿನವ ರುದ್ರಮುನಿ ಶಿವಾಚಾರ್ಯರು ವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಹನುಮಾನ ಮೂರ್ತಿ ಲೋಕಾರ್ಪಣೆ ಬಹಳ ವಿಜೃಂಭಣೆಯಿಂದ ಜರುಗಿತು.
ಈ ಕಾರ್ಯಕ್ರದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಸಿದ್ದಣ್ಣ ಹೂಗಾರ, ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ, ಜಿಲ್ಲಾ ಬಜರಂಗದಳ ಸಂಯೋಜಕ ಈರಣ್ಣ ಹಳ್ಳಿ ತಾಲೂಕ ಅಧ್ಯಕ್ಷ ಡಾ. ಶರಣಗೌಡ ಬಿರಾದಾರ, ತಾಲೂಕ ಕಾರ್ಯದರ್ಶಿ ಶೇಖರಗೌಡ ಹರನಾಳ, ತಾಲೂಕ ಬಜರಂಗದಳ ಸಂಯೋಜಕ ಯಮನಪ್ಪ ಚೌಧರಿ, ಗ್ರಾಮ ಘಟಕ ಅಧ್ಯಕ್ಷ ಅರ್ಜುನ ಕಂಟಿಗೊಂಡ, ಶಾಸಕ ರಮೇಶ್ ಭೂಸನೂರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಬಸವರಾಜ ಹೂಗಾರ, ಸುದರ್ಶನ ಜಂಗಣ್ಣಿ, ಸಿದ್ದು ಪೂಜಾರಿ, ಸೋಮನಗೌಡ ಪಾಟೀಲ, ಶಿವಕುಮಾರ್ ಕಕ್ಕಳಮೇಲಿ, ಗುರಣ್ಣ ಕಂಟಿಗೊಂಡ, ಶಿವಾನಂದ ಬಿರಾದಾರ, ಅಶೋಕ ಚೌಧರಿ, ಪ್ರಶಾಂತ್ ಹಾಳಿಕೇರಿ, ಪರಮಾನಂದ ಬಿರಾದಾರ, ಸಂತೋಷ ಕಂಟಿಗೊಂಡ, ಶ್ರೀಶೈಲ ಬಿರಾದಾರ, ಹಾಗೂ ಊರಿನ ಗ್ರಾಮಸ್ಥರು ಹಾಗೂ ಹಿಂದೂ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗಿಯಾಗಿದ್ದರು.