Homeಕವನಕವನ: ಅವಳ ಬದುಕು

ಕವನ: ಅವಳ ಬದುಕು

spot_img

ಅವಳ ಬದುಕು

ಕೂಡಿಟ್ಟ ಆಸೆಗಳ ಕನಸು ಕಾಣುತ
ಮೂರು ಗಂಟಿಗೆ ಶರಣಾದಳವಳು
ಸಪ್ತಪದಿ ತುಳಿದಳು
ಕೈ ಹಿಡಿದ ಗಂಡ ಕೈಬಿಡನು ಎಂದು

ಮದುವೆ ಆದ ಮೂರೇ
ದಿನದಲ್ಲಿ ತಿಳಿಯಿತು
ಕೈ ಹಿಡಿದ ಗಂಡ ಗುಂಡಿಗೆ ದಾಸನಾಗಿದ್ದ ಅಮಲೇರಿದ ಗಂಡ
ಹೆಂಡತಿಗೆ ಮೂಲೆ ಗುಂಪಾಗಿಸಿದ..

ಜಗಳ, ಕೋಪ, ಮನಸ್ಥಾಪ,
ಹೆಚ್ಚಾಯಿತು ದಿನ ದಿನವೂ
ತವರಿನಿಂದ ತಂದ ತುಂಡು ಬಂಗಾರ ಮಾರಿ ತವರಿನ ದಾರಿ ಹಿಡಿದಳು

ಅವಳ ಬದುಕು
ನೂರು ಕಾಲ ಚೆನ್ನಾಗಿ ಇರದೆ
ಬದಲಿಗೆ ಬಹುಬೇಗ
ಅಳಿದು ಹೊಯಿತು


ರಾಹುಲ್ ಸುಭಾಷ್ ಸರೋದೆ
ಗಂಗಾವತಿ 583227
📱9482448733

RELATED ARTICLES

Most Popular

error: Content is protected !!
Join WhatsApp Group