spot_img
spot_img

ಸ್ಪೂರ್ತಿದಾಯಕ ಪೋಷಕರ ಶಿಕ್ಷಕರ ಸಭೆ

Must Read

- Advertisement -

ಸಿಂದಗಿ: ವಿದ್ಯಾರ್ಥಿಗಳು ಅತ್ಯುತ್ತಮ ಸರ್ವತೋಮುಖ ಬೆಳವಣಿಗೆ ಹೊಂದಿ ಹೊರಹೊಮ್ಮಲು ವಿದ್ಯಾರ್ಥಿ, ಶಿಕ್ಷಕರು ಹಾಗೂ ಪಾಲಕರು ಈ ಮೂರು ಕೊಂಡಿಯಾಗಿ ಕೆಲಸ ಮಾಡಿದರೆ ಮಾತ್ರ ಮಗುವು ಅತ್ಯುತ್ತಮ ಶಿಕ್ಷಣ ಪಡೆಯಲು ಯಶಸ್ವಿಯಾಗುತ್ತದೆ ಎಂದು ಶಿಕ್ಷಣ ತಜ್ಞರು ಹಾಗೂ ಬೆಂಗಳೂರ ರೂಟ್ಸ ಎಜುಕೇಶನ ಅಕಾಡೆಮಿಯ ವಿನಯ ಪಾಟೀಲ ಹೇಳಿದರು.

ಪಟ್ಟಣದ ಹೊರವಲಯದ ಜೇವರ್ಗಿ ರಸ್ತೆಯಲ್ಲಿರುವ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲನಲ್ಲಿ ನಡೆದ ಪಿ.ಟಿ.ಎಮ್ ಸಮಾರಂಭವು ಪೋಷಕ, ಶಿಕ್ಷಕ, ವಿಧ್ಯಾರ್ಥಿ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಕ್ಕಳಿಗೆ ಕಳೆದ ಎರಡು ವರ್ಷದ ನಂತರ ಉಲ್ಲಾಸವನ್ನು ತುಂಬಲು, ಮಾನಸಿಕ, ದೈಹಿಕ, ಶೈಕ್ಷಣಿಕವಾಗಿ ಸರ್ವೋತೊಮುಖ ಬೆಳವಣಿಗೆಗೆ ಪ್ರೇರಣೆಯಾಗಿ ವಿದ್ಯಾಥಿಗಳಿಗೆ ಅತ್ಯುತ್ತಮ ಸಂದೇಶವನ್ನು ನೀಡಿದರು ಹಾಗೂ ಮಕ್ಕಳೊಂದಿಗೆ ಸಂವಾದ ಮಾಡುವ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದರು. ನಂತರ ಪೋಷಕರಿಗೆ ಮಕ್ಕಳೊಂದಿನ ಸಂಬಂಧವನ್ನು ಯಾವ ರೀತಿಯಾಗಿ ಇರಬೇಕೆಂಬುದು ಮತ್ತು ಪೋಷಕರ ಪ್ರಮುಖ ಪಾತ್ರವೇನೆಂಬುದನ್ನು ಅನೇಕ ಉದಾಹರಣೆಗಳ ಮೂಲಕ ಶಿಕ್ಷಕರಿಗೆ, ಪೋಷಕರಿಗೆ, ವಿದ್ಯಾರ್ಥಿಗಳಿಗೆ ಅವರವರ ಕರ್ತವ್ಯ ಜವಾಬ್ದಾರಿ ನಿಭಾಯಿಸಲು ಸಲಹೆಗಳನ್ನು ನೀಡಿದರು.

- Advertisement -
- Advertisement -

Latest News

ಮಹಿಳಾ ಟಿ೨೦ ತಂಡಕ್ಕೆ ಜಯಶ್ರೀ ಕೂಚಬಾಳ ಆಯ್ಕೆ

ಸಿಂದಗಿ - ಪಟ್ಟಣದ ಶ್ರೀ ಪದ್ಮರಾಜ್ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿ ಜಯಶ್ರೀ ರಾಜಶೇಖರ ಕೂಚಬಾಳ ಕರ್ನಾಟಕ ಅಂಡರ್ 23   ಮಹಿಳಾ ಟಿ20 ತಂಡಕ್ಕೆ ರಾಯಚೂರು...
- Advertisement -

More Articles Like This

- Advertisement -
close
error: Content is protected !!
Join WhatsApp Group