ವಿಶ್ವಕರ್ಮ ಸಮಾಜ ಒಂದುಗೂಡಿಸಲು ಮೂಡಲಗಿಯಲ್ಲಿ ಬೃಹತ್ ಸಮಾವೇಶ

Must Read

ಮೂಡಲಗಿ: ಎಲ್ಲಾ ಸಮಾಜದವರಂತೆ ತಾಲೂಕಿನಲ್ಲಿ ವಿಶ್ವಕರ್ಮ ಸಮಾಜವನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ದಿ.೧೪ ರಂದು ಶ್ರೀ ಬಸವ ಮಂಟಪದಲ್ಲಿ ವಿಶ್ವಕರ್ಮ ಸಮಾಜದ ಬೃಹತ್  ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಜಾನನ ಪತ್ತಾರ ಹೇಳಿದರು.

ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಉಳಿದೆಲ್ಲ ಸಮಾಜದವರಿಗೆ ರಾಜಕೀಯವಾಗಿ,  ಸಾಮಾಜಿಕವಾಗಿ ಪ್ರಾಶಸ್ತ್ಯ ಕೊಡಲಾಗಿದೆ ಅದರಂತೆ ವಿಶ್ವಕರ್ಮ ಸಮಾಜಕ್ಕೂ ಕೊಡಬೇಕು. ನಮ್ಮ ಸಮಾಜಕ್ಕಾಗಿಯೇ ಹಲವಾರು ಸೌಲಭ್ಯಗಳಿವೆ ಆದರೆ ಅವು ಸರಿಯಾಗಿ ಸಿಗುತ್ತಿಲ್ಲ. ಈ ಸೌಲಭ್ಯಗಳು ಸಿಗುವಂತೆ ತಾಲೂಕಾ ಮಟ್ಟದಲ್ಲಿ ಕಚೇರಿಗಳನ್ನು ಆರಂಭಿಸಲು ಆಗ್ರಹಿಸಲಾಗುವುದು ಎಂದರು.

ಈ ಸಮಾವೇಶದಲ್ಲಿ ಶ್ರೀ ದತ್ತಾತ್ರಯ ಬೋಧ ಸ್ವಾಮೀಜಿ ಹಾಗೂ ಚಿಕ್ಕುಂಬಿ ನಾಗಲಿಂಗ ಮಠದ ಶ್ರೀ ಅಭಿನವ ನಾಗಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಹಾಗೂ ಅರಭಾವಿ ಶಾಸಕ ಬಾಲವಂದ್ರ ಜಾರಕಿಹೊಳಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕಾಳಿಕಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ,  ಶ್ರೀಕಾಂತ ಪತ್ತಾರ, ಮೌನೇಶ ಪತ್ತಾರ, ಅಶೋಕ ಬಡಿಗೇರ, ವಿರೂಪಾಕ್ಷ ಪತ್ತಾರ, ವೀರಣ್ಣ ಶಿಲ್ಪಿ ( ವಂದಾಲ ), ಭಗವಂತ ಬಡಿಗೇರ, ರಾಜು ಬಡಿಗೇರ ಉಪಸ್ಥಿತರಿದ್ದರು.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group