ನಮ್ಮ ಅಡಿಗೆ ಮನೆಗಳಲ್ಲಿ ಬಳಸುವ ಅನೇಕ ಸಂಬಾರ ಪದಾರ್ಥಗಳಲ್ಲಿ ಮೆಂತ್ಯವೂ ಒಂದು. ಅರಿಷಿಣ, ಯಾಲಕ್ಕಿ, ಮೆಣಸು ಮುಂತಾದ ಪದಾರ್ಥಗಳು ಅಡಿಗೆಗೆ ಉತ್ತಮ ರುಚಿ ತಂದುಕೊಡುತ್ತವೆ. ಇವೆಲ್ಲದರ ಜೊತೆಗೆ ಮೆಂತ್ಯದ ಕಾಳು ಕೂಡ ಅಡಿಗೆಗೆ ರುಚಿ ಕೊಡುವುದಲ್ಲದೆ ಆರೊಗ್ಯಕ್ಕೂ ಅತ್ಯುತ್ತಮ ಅನ್ನವುದನ್ನು ನೀವು ತಿಳಿದುಕೊಂಡರೆ ಮೆಂತ್ಯದ ನೀರನ್ನು ನೀವೂ ಕುಡಿಯಲು ಶುರು ಮಾಡುತ್ತೀರಿ.
ಸಂಶೋಧನೆಯ ಪ್ರಕಾರ ಮೆಂತ್ಯ ಕಾಳುಗಳು ತೂಕ ಕಡಿಮೆ ಮಾಡಲು ಸಹಕಾರಿ. ಇದರಿಂದ ಇನ್ಸುಲಿನ್ ಕೂಡ ಹೆಚ್ಚಲು ಸಹಕಾರಿಯಾಗಿದ್ದು ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡಿ ಒಳ್ಳೆಯ ಕೊಬ್ಬು ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟರಾಲ್ ದಿಂದ ಬೊಜ್ಜು ಹೆಚ್ಚಾಗುತ್ತದೆ. ಆದರೆ ಮೆಂತ್ಯ ಕಾಳು ಈ ಬೊಜ್ಜು ಕರಗಲು ಸಹಾಯಮಾಡುತ್ತದೆ.
ಪ್ರತಿದಿನ ರಾತ್ರಿ ಒಂದು ಚಮಚ ಮೆಂತ್ಯ ಕಾಳು ಒಂದು ಗ್ಲಾಸ್ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತ ಬಂದರೆ ಸಕ್ಕರೆ ಕಾಯಿಲೆ ಇದ್ದವರಿಗೆ ತುಂಬ ಉಪಯುಕ್ತ. ರಕ್ತದ ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡುತ್ತದೆ. ಪ್ರತಿದಿನ ಸೇವಿಸುವದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
ಮೆಂತ್ಯದಲ್ಲಿ ಆ್ಯಂಟಿಬಯೋಟಿಕ್ ಅಂಶಗಳಿಂದಾಗಿ ಅನೇಕ ಪ್ರಯೋಜನಗಳುಂಟು. ರಕ್ತ ಶುದ್ಧಿಗೂ ಮೆಂತ್ಯ ಕಾಳು ಉಪಯುಕ್ತವಾಗಿದೆ. ಅಲ್ಲದೆ ಚಯಾಪಚಯ ಕ್ರಿಯೆಗೂ ಇದು ಸಹಕಾರಿಯೆನ್ನಲಾಗಿದೆ.