Homeಸುದ್ದಿಗಳುಚರಂಡಿಗೆ ಬಿದ್ದು ವ್ಯಕ್ತಿ ಸಾವು; ತನಿಖೆಗೆ ರಾಜಶೇಖರ ಕೂಚಬಾಳ ಆಗ್ರಹ

ಚರಂಡಿಗೆ ಬಿದ್ದು ವ್ಯಕ್ತಿ ಸಾವು; ತನಿಖೆಗೆ ರಾಜಶೇಖರ ಕೂಚಬಾಳ ಆಗ್ರಹ

ಸಿಂದಗಿ: ನಗರದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಲ್ಲಿ ಒಂದಾದ ಒಳಚರಂಡಿ ಕಾಮಗಾರಿ ರೂ. 92 ಕೋಟಿ ವೆಚ್ಚದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಅವೈಜ್ಞಾನಿಕ ಒಳಚರಂಡಿ ಕಾಮಗಾರಿಗೆ ಕಾರ್ಯ ನಿರ್ವಹಿಸುವಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ವಿಫಲರಾಗಿದ್ದಾರೆ ಎಂದು ಜಿಲ್ಲಾ ಜಾಗೃತ ದಳದ ಸದಸ್ಯ ರಾಜಶೇಖರ ಕೂಚಬಾಳ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಗರದಲ್ಲಿ ನಡೆಯುತ್ತಿರುವ ಈ ಅವೈಜ್ಞಾನಿಕ ಕಾಮಗಾರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾ.11 ರಂದು ಡಾ. ಅಂಬೇಡ್ಕರ್ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿ. ಜಗಪ್ಪ ಸುಲ್ಪಿ ಎಂಬ ವ್ಯಕ್ತಿ ಸುತ್ತಲೂ ಸುರಕ್ಷತೆಯಿಲ್ಲದೆ ಆಳವಾದ ಚರಂಡಿಯ ಗುಂಡಿಯಲ್ಲಿ ಬಿದ್ದು ತುಂಬಾ ಪೆಟ್ಟಾಗಿದ್ದು ಆದರೆ ಪೊಲೀಸರು ಮತ್ತು ಗುತ್ತಿಗೆದಾರರು ಶಾಮೀಲಾಗಿ ಯಾವುದೇ ಕೇಸ್ ದಾಖಲಿಸದೆ ಜಗಪ್ಪನನ್ನು ಆಸ್ಪತ್ರೆಗೆ ಸೇರಿಸುವ ನಾಟಕವಾಡಿರುತ್ತಾರೆ.

ಆದರೆ ಮೃತ ಜಗಪ್ಪ ಸುಲ್ಪಿ ಮಾ.15 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು,  ತನಿಖೆ ಮಾಡಬೇಕಿದ್ದ ಅಧಿಕಾರಿಗಳು ತರಾತುರಿಯಲ್ಲಿ ಶವ ಸಂಸ್ಕಾರ ಮಾಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ  ಬಡ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ ಇದನ್ನು ಮರು ತನಿಖೆ ಮಾಡಬೇಕೆಂದು  ಜಿಲ್ಲಾ ಜಾಗೃತ ದಳದ ಸದಸ್ಯ ರಾಜಶೇಖರ ಕೂಚಬಾಳ ಆಗ್ರಹಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group