- Advertisement -
ಬೆಳಗಾವಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದಿ. ಎಂ. ಜಿ ಪಾಟೀಲ ಇವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಕ.ಸಾ.ಪ ಬೆಳಗಾವಿ ತಾಲೂಕಾ ಘಟಕದ ಅಧ್ಯಕ್ಷರಾದ ಸುರೇಶ ಹಂಜಿಯವರು ಮಾತನಾಡಿ, ದಿ. ಎಂ. ಜಿ. ಪಾಟೀಲ ಅವರ ಕುರಿತು ತಮ್ಮಒಡನಾಟದ ಬಗ್ಗೆ ಮತ್ತು ಅವರು ಮಾಡಿದ ಸಮಾಜ ಸೇವೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಬೆಳಗಾವಿ ಜಿಲ್ಲಾ ಕ ಸಾ ಪ ಗೌರವಕಾರ್ಯದರ್ಶಿಯಾದ ಎಂ. ವಾಯ್. ಮೆಣಸಿನಕಾಯಿ ಯವರು ತಮ್ಮ ಸೇವಾ ಅವಧಿಯಲ್ಲಿ ಪಾಟೀಲ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತ ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
- Advertisement -
ಇದೇ ಸಂದರ್ಭದಲ್ಲಿ ಬಾಳಗೌಡ ದೊಡಬಂಗಿ ನಿ. ಉಪನ್ಯಾಸಕರು ಮಾತನಾಡಿ ಎಂ. ಜಿ. ಪಾಟೀಲ ಸರ್ ಅವರ ಶಿಸ್ತಿನ ಜೀವನದ ಕುರಿತು ತಿಳಿಸಿದರು.
ಬೆಳಗಾವಿ ತಾಲೂಕಾ ಕ ಸಾ ಪ ದ ಪರವಾಗಿ ಮೌನಚಾರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಸುದೀಪ ಗಡ್ಕರಿ ಮತ್ತು ವೀ. ಮ. ಅಂಗಡಿ ಉಪಸ್ಥಿತರಿದ್ದರು