spot_img
spot_img

Aydakki Lakkamma: ಶರಣೆ ಆಯ್ದಕ್ಕಿ ಲಕ್ಕಮ್ಮ

Must Read

spot_img
- Advertisement -

ಶ್ರಾವಣ ಮಾಸದ ನಿಮಿತ್ತ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಅವರ  ವಚನ ಸಾರ ವಚನೋತ್ಸವ ಮನೆಮನೆಗಳಲ್ಲಿ ಮನಮನಂಗಳಿಗೆ ಕಾರ್ಯಕ್ರಮ ದಿ. 29  ರಂದು ಶರಣ ಪ್ರಭು ಮುಗಳಿ ಹಾಗೂ ಜಯಶ್ರೀ ಮುಗಳಿ ಅವರ ಮನೆಯಲ್ಲಿ ನೆರವೇರಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪೂಜ್ಯ  ಮೃತ್ಯುಂಜಯ ಹಿರೇಮಠ ಗಂದಿಗವಾಡ ಗುರುಗಳು ಅಲಂಕರಿಸಿದ್ದರು.

ವಸಂತಕ್ಕಾ ಗಡ್ಕರಿ  ಅವರು ಶರಣೆ ಆಯ್ದಕ್ಕಿ ಲಕ್ಕಮ್ಮ ಕುರಿತು ಉಪನ್ಯಾಸ ನೀಡಿದರು.    

- Advertisement -

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸ್ತ್ರೀಯರಿಗೆ ಕೊಟ್ಟ ಸ್ವಾತಂತ್ರ್ಯದ ಸಧ್ಭಳಕೆಯನ್ನು ಮಾಡಿಕೊಂಡ ಶರಣೆಯರಲ್ಲಿ ಲಕ್ಕಮ್ಮನು ಒಬ್ಬಳು.ಇವಳು ಆಯ್ದಕ್ಕಿ ಮಾರಯ್ಯನವರ ಧರ್ಮ ಪತ್ನಿ. ಇವಳು ಕಾಯಕ ನಿಷ್ಠೆ, ಸಮಯ ಪ್ರಜ್ಞೆ, ಸ್ವಾಭಿಮಾನದ ಸೂಕ್ಷ್ಮಮತಿಯವಳಾಗಿದ್ದಳು, ಮಾರಯ್ಯನವರಿಗೆ ಮಾರ್ಗದರ್ಶಕಳಾಗಿದ್ದಳು ಶರಣ ತತ್ವಗಳನ್ನು ನಿಷ್ಠೆಯಿಂದ ಪಾಲಿಸುತಿದ್ದಳು ಯಾರ ಹಂಗೂ ಇಲ್ಲದೆ ಬದುಕುವ  ಛಲ ಹೊಂದಿದ್ದಳು ಹೀಗಾಗಿ ಪತಿಯನ್ನು ಸದಾ ಎಚ್ಚರಿಸುವ ಪರಿಯು ಅವಳ ವಚನಗಳಲ್ಲಿ ಕಂಡು ಬರುತ್ತದೆ.     

“ಕಾಯಕ ನಿಂದಿತ್ತು ಹೋಗಯ್ಯ ಮಾರಯ್ಯ ಎನ್ನಾಳ್ದನೆ”, “ಒಮ್ಮನವ ಮೀರಿ ಇಮ್ಮನವ ತಂದಿರಿ ಇದು ನಿಮ್ಮ ಮನವೂ ಬಸವಣ್ಣನ ಅನುಮಾನದ ಚಿತ್ತವೂ” 

  “ಘನ ಶಿವ ಭಕ್ತರಿಗೆ ಬಡತನವಿಲ್ಲ” 

- Advertisement -

 “ಆಸೆ ಎಂಬುದು ಅರಸಂಗಲ್ಲದೆ ಶಿವ ಭಕ್ತರಿಗುಂಟೆ “? ರೋಷವೆಂಬುದು ಯಮದೂತರಿಗುಂಟು ಅಜಾತರಿಗುಂಟೆ ?ಇಸಕ್ಕಿ ಆಸೆ ಎಮಗೇಕೆ ಎಂದು ಕೇಳುವ ಲಕ್ಕಮ್ಮನ ಅಚಲ ಭಕ್ತಿ ಕಾಯಕ ನಿಷ್ಠೆ ಶರಣರಲ್ಲಿರುವ ಛಲ ಲಕ್ಕಮ್ಮನಲ್ಲಿ ಎದ್ದು ತೋರುತ್ತದೆ ಎಂದು ಹೇಳಿದರು. 

ಮೃತ್ಯುಂಜಯ ಅಪ್ಪಗಳು ಶರಣರು  ಎಂದಿಗೂ ಸಂಗ್ರಹಿಸಿ ಇಡುವುದನ್ನು ಒಪ್ಪಿದವರಲ್ಲ, ಅವರು ಕಾಯಕದಲ್ಲಿ ನಿರತನಾದಡೆ ಗುರುಲಿಂಗ ಜಂಗಮವಾದರು ಮರೆಯಬೇಕು  ತನ್ನ ಕಾಯಕವನ್ನೇ ತಾನೇ ಮಾಡಬೇಕು ಅಲ್ಲದೆ ಕಾಯಕದಿಂದ ಬಂದುದನ್ನು ತನಗೆ ಬಳಸಿ ಮಿಕ್ಕಿದ್ದನ್ನು ದಾಸೋಹಕ್ಕೆ ಬಳಸುತ್ತಿದ್ದರು ಹೊರತು ಕೂಡಿಸಿ ಇಡುತಿದ್ದಿಲ್ಲ, ಶರಣರು ಶಿವಯೋಗ ಸಾಧನೆಯಿಂದ ಹೃದಯ ಶ್ರಿಮಂತರಾಗಿದ್ದರು ಭಕ್ತಿಯಲ್ಲಿ ಶ್ರಿಮಂತರಾಗಿದ್ದರು ಅವರು ಯಾವುದೇ ಆಸೆ ನಿರಾಸೆ ನೋವು ದುಃಖ ಸುಖ ಸಂತೋಷ ಇವುಗಳನೆಲ್ಲ ಮಿರಿ ಹೃದಯ ಶ್ರೀಮಂತಿಕೆಯಲಿ ಭಕ್ತಿ ನಿಷ್ಠೆ ಕಾಯಕ ಶ್ರೀಮಂತಿಕೆಯಲ್ಲಿ ಇದ್ದವರು ಇವು ಜೀವನದಲ್ಲಿ ನಿಜವಾದ ಆನಂದವನ್ನು ಕೊಡುತ್ತವೆ ಕ್ಷಣಿಕ ಆಸೆಗಳನ್ನು ಬಿಟ್ಟು ಶರಣರ ನಡೆದು ಬಂದ ದಾರಿಯನ್ನು ಸರಿಯಾಗಿ ಅರ್ಥೈಸಿಕೊಂಡು ಆ ಮಾರ್ಗದಲ್ಲಿ ನಡೆಯಬೇಕೆಂದು ಆಶೀರ್ವಚನ ನೀಡಿದರು. 

ಅಧ್ಯಕ್ಷರು ಎಸ್ ಜಿ ಸಿದ್ನಾಳ ಉಪಸ್ಥಿತರಿದ್ದರು, ಶರಣ ಕಟ್ಟಿಮನಿ ಅವರು ನಿರೂಪಣೆ ಮಾಡಿದರು, ಶೋಭಾ ಶಿವಳ್ಳಿ ಸುನಿತಾ ನಂದೆಣ್ಣವರ ಪ್ರಾರ್ಥನೆ ನಡೆಸಿಕೊಟ್ಟರು,  ಶರಣರಾದ ಶಂಕರ ಶೆಟ್ಟಿ, ಸಂಕೇಶ್ವರ, ಮುರಿಗೆಪ್ಪ ಬಾಳಿ,  ಮುನವಳ್ಳಿ, ಗುರಣ್ಣವರ, ಬಿ ಡಿ ಪಾಟೀಲ, ಶೈಲಜಾ, ದಾಕ್ಷಾಯಿಣಿ, ಪ್ರೇಮಾ ತ್ರಿವೇಣಿ, ಉಮಾ, ವಿಜಯ ಲಕ್ಷ್ಮಿ, ಶಾರದಾ ರೇಖಾ  ಮುಂತಾದ ಶರಣ ಶರಣೆಯರು ಉಪಸ್ಥಿತರಿದ್ದರು.

- Advertisement -
- Advertisement -

Latest News

ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ಸಿಂದಗಿ ಪೊಲೀಸರ ದಾಳಿ

ಸಿಂದಗಿ: ನಕಲಿ ಮದ್ಯ ತಯಾರಿಕಾ ಘಟಕದಲ್ಲಿ ೫೬೨ ಲೀಟರ್ ನಕಲಿ ಮದ್ಯ ಹಾಗೂ ೧೫೦ಕ್ಕೂ ಅಧಿಕ ಲೀಟರ್ ಮದ್ಯಸಾರ ಹಾಗೂ ಎಮ್.ಸಿ ಮ್ಯಾಕಡೋವೇಲ್ಸ್ ಮತ್ತು ಆಯ್.ಬಿ...
- Advertisement -

More Articles Like This

- Advertisement -
close
error: Content is protected !!
Join WhatsApp Group