ಸಿಂದಗಿ: ಯಾವುದೇ ವಾಹನವನ್ನು ಚಲಾಯಿಸಬೇಕಾದರೆ ಚಲಾಯಿಸುವ ವ್ಯಕ್ತಿಗೆ 18 ವರ್ಷ ಕಡ್ಡಾಯವಾಗಿ ತುಂಬಿರಬೇಕು. ಹದಿನೆಂಟು ವರ್ಷದ ಒಳಗಿನ ಮಕ್ಕಳಿಗೆ ದಯವಿಟ್ಟು ವಾಹನವನ್ನು ಬಳಸಲು ಕೊಡಬೇಡಿ ಮತ್ತು ಹದಿನೆಂಟು ವರ್ಷ ತುಂಬಿರುವವರು ವಾಹನವನ್ನು ಚಲಾಯಿಸಬೇಕಾದರೆ ಕಡ್ಡಾಯವಾಗಿ ಚಾಲನಾ ಪರವಾನಿಗೆ ಪಡೆದಿರಬೇಕು ಎಂದು ರಾಮು ಡ್ರೈವಿಂಗ್ ಸ್ಕೂಲಿನ ಮುಖ್ಯಸ್ಥ ಆನಂದ ಆಸಂಗಿ ಹೇಳಿದರು.
ನಗರದಲ್ಲಿರುವ ಸಂಗಮ ಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಪಂಚಾಯತ್ ರಾಜ್ ಕುರಿತು ತರಬೇತಿ ಹಾಗೂ ವಾಹನ ಚಾಲನಾ ಪರವಾನಿಗೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಾಹನದ ಜೊತೆಗೆ ಇನ್ಸೂರೆನ್ಸ್ ಕಡ್ಡಾಯವಾಗಿ ಇಟ್ಟುಕೊಳ್ಳತಕ್ಕದು ಎಂದು ರಸ್ತೆ ದಾಟುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸುತ್ತ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷರವರು ಮಾತನಾಡಿ, ಭಾರತದಲ್ಲಿ ಗ್ರಾಮಗಳ ಸ್ಥಳೀಯ ಸ್ವ-ಸರಕಾರದ ವ್ಯವಸ್ಥೆಯಾಗಿದೆ. ಇದು ಪಂಚಾಯತ್ ರಾಜ್ ಸಂಸ್ಥೆಗಳನ್ನು ಒಳಗೊಂಡಿದೆ ಮತ್ತು ಅದರ ಮೂಲಕ ಗ್ರಾಮಗಳ ಸ್ವ-ಸರಕಾರವನ್ನು ಸಾಕಾರಗೊಳಿಸಲಾಗುತ್ತದೆ. ಮಹಾತ್ಮಾ ಗಾಂಧಿಯವರು ಪಂಚಾಯತ್ ರಾಜ್ ಅನ್ನು ಭಾರತದ ರಾಜಕೀಯ ವ್ಯವಸ್ಥೆ ಬುನಾದಿ ಎಂದು ಪ್ರತಿಪಾದಿಸಿದರು ಮತ್ತು ಒಂದು ವಿಕೇಂದ್ರಿಕೃತ ಸರ್ಕಾರವಾಗಿ ಪ್ರತಿ ಗ್ರಾಮವು ತನ್ನದೇ ಆದ ವ್ಯವಹಾರಗಳಿಗೆ ಜವಾಬ್ದಾರರಾಗಿರುತ್ತಾರೆ ಅಂತಹ ದೃಷ್ಠಿಕೋನದ ಪದವು ಗ್ರಾಮ ಸ್ವರಾಜ್ಯ ಆಗಿತ್ತು ಬದಲಾಗಿ ಭಾರತವು ಹೆಚ್ಚು ಕೇಂದ್ರಿಕೃತ ಸರ್ಕಾರವನ್ನು ಅಭಿವೃದ್ಧಿಪಡಿಸಲು ಈ ಸ್ಥಳೀಯರ ಸರಕಾರ ಅವಶ್ಯಕ ಎಂದರು.
ತಾಲೂಕು ಪಂಚಾಯತ್ ಮೇಲ್ವಿಚಾರಕಿ ಲಕ್ಷ್ಮೀ ಪಾಟೀಲ ಮಾತನಾಡಿ, ಕೇಂದ್ರದಿಂದ ನಮ್ಮ ಹಳ್ಳಿಗಳಿಗೆ ಅನುದಾನ ತಲುಪಬೇಕಾದರೆ ಅದು ಅಷ್ಟು ಸುಲಬವಲ್ಲ ಆದ್ದರಿಂದ ಭಾರತ ಸಂವಿಧಾನದಲ್ಲಿ ಸರಕಾರದ ಎಲ್ಲ ಸೌಲಭ್ಯಗಳು ಸಿಗಬೇಕಾದರೆ ಅಲ್ಲಿ ಗ್ರಾಮದಲ್ಲಿ ಮಂಡಲ ಪಂಚಾಯತ್ ಎಂಬ ಕಛೇರಿಯನ್ನು ಸ್ಥಾಪಿಸಲಾಯಿತು. ಇದು ಆದ ನಂತರ ಆ ಮಂಡಲ ಪಂಚಾಯತಿಯನ್ನು ಗ್ರಾಮ ಪಂಚಾಯತಿ ಎಂದು ಮರು ನಾಮಕರಣ ಮಾಡಲಾಯಿತು. ಈ ಗ್ರಾಮ ಪಂಚಾಯತಿ ವತಿಯಿಂದ ಶಾಲೆ, ರಸ್ತೆ, ಬೀದಿ ದೀಪಗಳು, ಕೆರೆ, ಭಾವಿಗಳ ರಚನೆ, ಸಾರ್ವಜನಿಕ ತೋಟ, ಶಿಸುಗಳ ಕಲ್ಯಾಣ ಇಲಾಖೆ, ಇವುಗಳನ್ನು ನಮ್ಮ ಗ್ರಾಮ ಪಂಚಾಯತ್ಯಿಂದ ಪೂರೈಸಲಾಗುತ್ತದೆ. ಅಲ್ಲದೆ ಒಂದು ವರ್ಷದಲ್ಲಿ ಎರಡು ಬಾರಿ ಗ್ರಾಮ ಸಭೆಗಳು ನಡೆಸಬೇಕು. ವಾರ್ಡ್ ಸಭೆಗಳನ್ನು ವರ್ಷದಲ್ಲಿ ನಾಲ್ಕು ಬಾರಿ ಕಡ್ಡಾಯವಾಗಿ ಮಾಡಲೇಬೇಕು. ಜನ ಸಾಮಾನ್ಯರು ಏನಾದರು ಸೌಲಭ್ಯವನ್ನು ಪಡೆಯಬೇಕಾದರೆ ಅಥವಾ ಯಾವುದಾದರು ನಿಮಗೆ ಕುಂದು ಕೊರತೆ ಇದ್ದರೆ ಗ್ರಾಮ ಸಭೆಯಲ್ಲಿ ಮಂಡಿಸಬೇಕು ಇಲ್ಲಿ ಮಂಡಿಸಿರುವ ಮಸೂದೆಯನ್ನು ಯಾವುದೆ ಕಾರಣಕ್ಕೂ ರದ್ದು ಮಾಡುವಂತಿಲ್ಲ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರು, ಯುವಕರು ಮತ್ತು ಮಹಿಳೆಯರು ಉಪಸ್ಥಿತರಿದ್ದರು. ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ನಿರೂಪಿಸಿದರು, ವಿಜಯ ವಿ ಬಂಟನೂರ ಸ್ವಾಗತಿಸಿದರು, ಬಸವರಾಜ ಬಿಸನಾಳ ಸಂವಿಧಾನ ಪ್ರಸ್ತಾವನೆ ಮಂಡಿಸಿದರು ಮತ್ತು ಮಲಕ್ಕಪ್ಪ ಹಲಗಿ ಇವರು ವಂದಿಸಿದರು.