- Advertisement -
ಗೋಕಾಕ – ಸಮೀಪದ ಅಡಿಬಟ್ಟಿ ಗ್ರಾಮದ ಮೇಟಿಯವರ ಮದುವೆ ಸಮಾರಂಭದಲ್ಲಿ ವೇದಿಕೆಯ ಫಲಕದಲ್ಲಿ ಮೇ ೭ ರಂದು ಮತದಾನ ಮಾಡೋಣ ಎಂಬ ಫಲಕ ಹಾಕಿ ಮತದಾನ ಜಾಗೃತಿ ಮೂಡಿಸಲಾಗಿದೆ.
ಘಟಪ್ರಭಾ ನದಿ ತೀರದ ಶ್ರೀ ಪರಮೇಶ್ವರ ದೇವಸ್ಥಾನದಲ್ಲಿ ಅಡಿಬಟ್ಟಿ ಗ್ರಾಮದ ಮೇಟಿ ಕುಟುಂಬದ ಮದುವೆಯಿದ್ದು ವಧು ವರರ ಹೆಸರುಗಳು ಇರುವಲ್ಲಿ ಮೇ ೭ ಕ್ಕೆ ಮತದಾನ ಮಾಡೋಣ ಎಂಬ ಫಲಕ ಹಾಕಲಾಗಿದೆ.
ಮೇಟಿ ಕುಟುಂಬದ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಮತದಾನ ಎನ್ನುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮತದಾನ ಮಾಡಿ ಮೇಟಿ ಕುಟುಂಬದ ಈ ಪ್ರಯತ್ನವನ್ನು ಸಾರ್ಥಕಪಡಿಸಬೇಕಾಗಿದೆ