ಮೂಡಲಗಿ – ಮೂಡಲಗಿ ನಗರದಲ್ಲಿ ಪ್ರಥಮ ಬಾರಿಗೆ ಉದ್ಯೋಗ ಮೇಳವನ್ನು ಸಮೂಹ ಶಿಕ್ಷಣ ಸಂಸ್ಥೆಗಳು ಮೂಡಲಗಿ ಹಾಗೂ ಕರಾವಳಿ ಟೀಚರ್ಸ ಹೆಲ್ಪ್ ಲೈನ್ ಇವರುಗಳ ಆಶ್ರಯದಲ್ಲಿ ದಿನಾಂಕ-ಮೇ-12-2024 ರಂದು ಮುಂಜಾನೆ 9 ರಿಂದ 3 ಗಂಟೆಯ ವರೆಗೆ ಮೂಡಲಗಿ ಎಜುಕೇಶನ್ ಸೊಸಾಯಿಟಿ ಕಾಲೇಜು ಮೈದಾನ,ಮೂಡಲಗಿಯಲ್ಲಿ ನಡೆಯುತ್ತದೆ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ ಹೇಳಿದರು.
ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಸಭಾ ಭವನದಲ್ಲಿ ಆಡಳಿತ ಮಂಡಳಿಯವರು “ಉದ್ಯೋಗ ಮೇಳದ” ಕಾರ್ಯಕ್ರಮದ ಸುದ್ದಿ ಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.
ಇದೊಂದು ವಿಶೇಷ ಕಾರ್ಯಕ್ರಮ,ಶಿಕ್ಷಣ ಕ್ಷೇತ್ರಗಳಲ್ಲಿ ಒಳ್ಳೆಯ ಶಿಕ್ಷಕರ ಕೊರತೆ ಇದೆ. ಉದ್ಯೋಗ ಅವಕಾಶಕ್ಕಾಗಿ ವಿದ್ಯಾರ್ಥಿ/ನಿಯರಿಗೆ ನೇರ ಸಂದರ್ಶನ ಮೂಲಕ ಪ್ರತಿಷ್ಠಿತ ಕಾಲೇಜು, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಹಾಗೂ ಎಮ್.ಎನ್.ಸಿ ಕಂಪನಿಯ ನೇರ ನೇಮಕ ಹೊಂದುವ ಸುವರ್ಣಾವಕಾಶ ತಮ್ಮದಾಗಿಸಿಕೊಳ್ಳಿ. ಗ್ರಾಮೀಣ ವಿದ್ಯಾರ್ಥಿ/ನಿಯರಿಗೂ ಒಳ್ಳೆಯ ಅವಕಾಶ.SSLC-PUC-NTC-D.Ed-B.Ed- BPEd-BSW-MSW-MA-M.COM-M.Sc- MBA-BBA-BCA-PG-ITI-Diploma- Phamacy-BE-M.Tech-Etc ಈ ಎಲ್ಲ ಪದವಿ ಪಡೆದಿರುವ ಯುವಕ-ಯುವತಿಯರು ಸಂದರ್ಶನಕ್ಕೆ ಬರುವ ವಿದ್ಯಾರ್ಥಿ/ನಿಯರು 1)ರೇಷನ್ ಕಾರ್ಡ್ 2)SSLC,PUC, ಡಿಗ್ರಿ ಮಾರ್ಕ್ಸ್ ಕಾರ್ಡ 3)ಆಧಾರ ಕಾರ್ಡ 4) ಪಾನ ಕಾರ್ಡ ಈ ದಾಖಲಾತಿಯೊಂದಿಗೆ ಬನ್ನಿ ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹೇಳಿದರು.
ಮಾಜಿ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ನಿವೃತ್ತ ಗ್ರಂಥಪಾಲಕರಾದ ಬಾಲಶೇಖರ ಬಂದಿ ಹಾಗೂ ಪ್ರಾಂಶುಪಾಲರಾದ ಸಂಗಮೇಶ ಗುಜಗೋಂಡ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ 9742487642- 9742449360 ಸಂಪರ್ಕಿಸಲು ಕೋರಲಾಗಿದೆ