spot_img
spot_img

ಚುನಾವಣೋತ್ತರ ಸಮೀಕ್ಷೆ ; ಮುಂದುವರೆಯಲಿದೆ ಮೋದಿ ವಿಜಯ ಪಥ

Must Read

spot_img
- Advertisement -

ಹೊಸದೆಹಲಿ – ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನ ಮುಗಿಯುತ್ತಲೇ ಚುನಾವಣೋತ್ತರ ಸಮೀಕ್ಷೆ ಎಕ್ಸಿಟ್ ಪೋಲ್ ಗಳ ಅಲೆ ದೇಶದಾದ್ಯಂತ ಭುಗಿಲೆದ್ದಿದ್ದು ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿ ಅಥವಾ ಎನ್ ಡಿಎ ಬಹುಮತ ಸಾಧಿಸುತ್ತದೆ ಎನ್ನುತ್ತವೆ ಆದರೆ ಮೋದಿಯವರ ಮಹತ್ವಾಕಾಂಕ್ಷೆಯ ೪೦೦ ಸ್ಥಾನ ಬರುತ್ತವೆ ಎಂಬುದು ಎಲ್ಲಿಯೂ ಕಂಡುಬರುತ್ತಿಲ್ಲ.

ಎನ್ ಡಿಎ ಈ ಸಲ ಹೆಚ್ಚೆಂದರೆ ೩೫೦ ಸ್ಥಾನಗಳನ್ನು ಪಡೆಯಲಿದೆ ಎಂಬುದನ್ನು ಹೇಳಿರುವ ಎಕ್ಸಿಟ್ ಪೋಲ್ ಫಲಿತಾಂಶವು ಇಂಡಿ ಮೈತ್ರಿಕೂಟಕ್ಕೆ ೧೫೦ ಸ್ಥಾನಗಳು ಸಿಗಲಿವೆ ಎಂದು ಹೇಳುತ್ತದೆ.

ಇದರರ್ಥ ಮೂರನೆಯ ಬಾರಿಗೆ ನರೇಂದ್ರ ಮೋದಿಯವರು ಮತ್ತೆ ಭಾರತದ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಅವರ ವಿಜಯಪಥ ಮುಂದುವರೆಯಲಿದೆ ಆದರೆ ರಾಮ ಮಂದಿರ ನಿರ್ಮಾಣ ಹಾಗೂ ಉದ್ಘಾಟನೆಯ ಕಾಲಕ್ಕೆ ಇದ್ದ ಮೋದಿ ಹವಾ ಬರುಬರುತ್ತ ಸ್ವಲ್ಪ ತಗ್ಗಿದ್ದು ಅದರ ಪರಿಣಾಮ ಬಿಜೆಪಿಗೆ ಕಡಿಮೆ ಸ್ಥಾನಗಳು ಬರಲಿವೆ ಎನ್ನಲಾಗುತ್ತಿದೆ.

- Advertisement -

ಆದರೂ ಮೋದಿಯವರ ಮೇಲೆ ಇಡೀ ದೇಶವೇ ಭರವಸೆ ಇಟ್ಟಿದ್ದು ಅವರ ದೇಶಪ್ರೇಮದ ವಿಷಯಕ್ಕಾಗಿ ಅಲ್ಲದೆ ಮೋದಿಯವರನ್ನು ಪ್ರಶ್ನೆ ಮಾಡುವ ಇನ್ನೊಬ್ಬ ನಾಯಕ ವಿರೋಧ ಪಕ್ಷಗಳಲ್ಲಿ ಇಲ್ಲದೇ ಹೋದದ್ದು ಭಾರತೀಯ ಜನತಾ ಪಕ್ಷಕ್ಕೆ ಲಾಭ ತಂದುಕೊಡಲಿದೆ ಎನ್ನಲಾಗುತ್ತಿದೆ.

ಇನ್ನು ಸಮೀಕ್ಷೆಯನ್ನು ನೋಡುವುದಾದರೆ, ಜನ್ ಕಿ ಬಾತ್ ಎನ್ ಡಿಎ ೩೬೨- ೩೯೨ ಇಂಡಿ ಒಕ್ಕೂಟ ೧೪೧-೧೬೧,
ಮಾಡ್ರಿಜ್ ಎನ್ ಡಿಎ ೩೫೩-೩೬೮ ಇಂಡಿ ಒಕ್ಕೂಟ ೧೧೮-೧೩೩,
ರಿಪಬ್ಲಿಕ್ ಎನ್ಡಿಎ ೩೫೯ ಇಂಡಿ ಒಕ್ಕೂಟ ೧೫೪,
ಇಂಡಿಯಾ ಟುಡೇ ಎನ್ ಡಿಎ ೩೫೨ ಇಂಡಿ ಒಕ್ಕೂಟ ೧೫೫,
ಲೋಕಪಾಲ್ ಎನ್ ಡಿಎ ೩೨೫-೩೩೫ ಇಂಡಿ ಒಕ್ಕೂಟ ೧೫೫-೧೬೫,
ಝೀ ನ್ಯೂಸ್ ಎನ್ ಡಿಎ ೩೬೦ ಇಂಡಿ ಒಕ್ಕೂಟ ೧೨೧ ಎಂದು ತಿಳಿಸಿವೆ.
ಕರ್ನಾಟಕ ಕುರಿತಂತೆ ಎಲ್ಲ ಸಮೀಕ್ಷೆಗಳು ಬಿಜೆಪಿಗೆ ಹೆಚ್ಚು ಕಡಿಮೆ ೨೦-೨೨ ಸ್ಥಾನ, ಕಾಂಗ್ರೆಸ್ ಗೆ ೧-೫ ಸ್ಥಾನ ಹಾಗೂ ಜೆಡಿಎಸ್ ಗೆ ೩ ಸ್ಥಾನ ಸಿಗಬಹುದು ಎಂದು ಹೇಳಿವೆ.

ಪ್ರಧಾನಿ ಮೋದಿಯವರು ಸಮೀಕ್ಷೆಗಳನ್ನು ಸ್ವಾಗತಿಸಿದ್ದಾರೆ. ಜನತೆ ದೇಶಕ್ಕಾಗಿ ಮತ ಹಾಕಿದ್ದಾರೆ, ಪರಿವಾರವಾದವನ್ನು ತಿರಸ್ಕರಿಸಿದ್ದಾರೆ ಎಂದವರು ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

ಆದರೆ ಈ ಸಮೀಕ್ಷೆಗಳನ್ನು ಕಾಂಗ್ರೆಸ್ ಪಕ್ಷ ತಳ್ಳಿ ಹಾಕಿದ್ದು ಇದೆಲ್ಲ ಮೈಂಡ್ ಗೇಮ್ ಎಂದಿದೆ. ಇದೆಲ್ಲ ಮೋದಿಯವರು ಆಡುತ್ತಿರುವ ಮೈಂಡ್ ಗೇಮ್ ಅಷ್ಟೇ ಆದರೆ ರಿಸಲ್ಟ್ ಬೇರೆಯೇ ಇರುತ್ತದೆ ನೋಡ್ತಾ ಇರಿ ಎಂದು ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ.

ಇತ್ತ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ ಯಾದವ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತವನ್ನು ದುರುಪಯೋಗ ಪಡಿಸಿಕೊಂಡಿತು, ಚುನಾವಣಾ ಆಯೋಗ ಕ್ರಮ ಕೈಗೊಳ್ಳವಲ್ಲಿ ತಡ ಮಾಡಿತು ಎಂದು ಆರೋಪಿಸಿದ್ದಾರೆ.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group