ಆಯ್ದಕ್ಕಿ ಲಕ್ಕಮ್ಮ
ರಾಯಚೂರು ಜಿಲ್ಲೆಯಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿವೆ ಅವುಗಳಲ್ಲಿ ಅಮರೇಶ್ವರ ಕ್ಷೇತ್ರವು ಒಂದು. ಸುಂದರವಾದ ಕ್ಷೇತ್ರ ಸುಮಾರು 890ವರ್ಷಗಳ ಹಿಂದೆ ಆ ಕ್ಷೇತ್ರದಲ್ಲಿ ಮಾರಯ್ಯ ಮತ್ತು ಲಕ್ಕಮ್ಮ ಎಂಬ ಇಬ್ಬರು ದಂಪತಿಗಳಿದ್ದರೂ ಮನೆತನದಿಂದ ಬಡವರು. ಆದರೆ ಭಕ್ತಿಯಿಂದ ಶ್ರೀಮಂತರು ಸಾತ್ವಿಕರು ಸತ್ಯವಂತರು ಆಗಿದ್ದರು. ಅಮರೇಶ್ವರ ಕ್ಷೇತ್ರಕ್ಕೆ ಬರುವ ಜಂಗಮರಿಂದ ಕಲ್ಯಾಣದ ವಿಚಾರವನ್ನು ತಿಳಿದ ಲಕ್ಕಮ್ಮ ಮತ್ತು ಮಾರಯ್ಯ ದಂಪತಿಗಳು ಕಲ್ಯಾಣಕ್ಕೆ ಹೋಗುವ ತವಕ ಮೂಡಿ ಒಂದು ದಿನ ಕಲ್ಯಾಣಕ್ಕೆ ಹೋಗಲೇ ಬೇಕೆಂಬ ನಿರ್ಧಾರ ಮಾಡಿದರು. ಕ್ಷೇತ್ರದ ಜನರೆಲ್ಲರೂ ಅವರನ್ನು ಕಳುಹಿಸಲು ಬಂದರು. ಒಂದು ವಾರದ ಪ್ರಯಾಣದ ನಂತರ ಅವರು ಕಲ್ಯಾಣವನ್ನು ತಲುಪಿ ಅನುಭವ ಮಂಟಪಕ್ಕೆ ಹೋದರು ಅಲ್ಲಿ ಎಲ್ಲ ಶರಣರೊಡನೆ ಅಸಂಖ್ಯಾತ ಶರಣರನ್ನು ನೋಡಿದರು. ವಾಡಿಕೆಯಂತೆ ಶರಣರೆಲ್ಲರೂ ಅನುಭವ ಮಂಟಪದಲ್ಲಿ ತಮ್ಮ ಪರಿಚಯ ಮಾಡಿಕೊಳ್ಳಬೇಕಿತ್ತು.
ಪ್ರಭುದೇವರು ಆಜ್ಞೆ ಮಾಡಿದಾಗ,
ನರನ ಮುಟ್ಟಿ ಒಲಿಸುವಲ್ಲಿ
ಪರಿಚಯ ಪದವಿಗಳುಂಟು
ಪರಶಿವ ಮೂರ್ತಿಯ ನರಿದಲ್ಲಿ
ಇಹಪರದಲ್ಲಿ ಪರಮ ಸುಖವುಂಟು
ಇದೇ ಬರ ತತ್ವ ಧೀರವು
ಅಮರೇಶ್ವರ ಲಿಂಗವ ಬೆರೆಸಬಲ್ಲಡೆ ಇದೇ ಸುಖ
ಎಂದಾಗ ಶರಣರೆಲ್ಲರೂ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು ನಂತರ ಪ್ರಭುದೇವರು ಲಕ್ಕಮ್ಮನಿಗೆ ಆದೇಶವಿತ್ತರು ಲಕ್ಕಮ್ಮ ವೇದಿಕೆ ಏರಿ ಶರಣರಿಗೆ ಕೈಮುಗಿದು ನಾನಿನ್ನು ಕೂಸು ಈ ಕೂಸಿನ ತೊದಲು ನುಡಿ ಕೇಳುವ ಆಸೆಯೇ ನೀವೆನ್ನ ತಂದೆ-ತಾಯಿಗಳು ನನಗೆ ತಿಳಿದಷ್ಟು ಭಕ್ತಿಯ ಬಗ್ಗೆ ಹೇಳುತ್ತೇನೆ.
ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು
ನಡೆಯಿಲ್ಲದ ನುಡಿ, ಅರಿವಿಂಗೆ ಹಾನಿ
ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ
ದೃಢ ವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವ ಮುಟ್ಟದ ಭಕ್ತಿ.
ಸರ್ವ ಶರಣರು ಲಕ್ಕಮ್ಮನ ವಚನವನ್ನು ಮೆಚ್ಚಿಕೊಂಡರು. ಪ್ರಭುದೇವರು ಸಂತೋಷದಿಂದ ಭೇಷ್ ಎoದರು. ಮಹಾಮನೆಯ ಅತಿಥಿ ಗೃಹದಲ್ಲಿ ಕೆಲವು ದಿನ ಇದ್ದು ಬಸವಣ್ಣನವರ ನೆರವಿನಿಂದ ತ್ರಿಪುರಂಕೆಶ್ವರ ದೇವಾಲಯದ ಹತ್ತಿರ ಒಂದು ಗುಡಿಸಲನ್ನು ಕಟ್ಟಿಕೊಂಡರು. ಎಲ್ಲ ಶರಣರು ಕಾಯಕವನ್ನು ಮಾಡುವ ಹಾಗೆ ಇವರು ಅಕ್ಕಿ ಆಯೋಗ ಕಾಯಕವನ್ನು ಪ್ರಾರಂಭ ಮಾಡಿದರು ಅವರವರ ಕಾಯಕಕ್ಕೆ ತಕ್ಕಂತೆ ಶರಣರುಗಳನ್ನು ಕರೆಯುವ ಹಾಗೆ ಇವರನ್ನು ಕೂಡ ಆಯ್ದಕ್ಕಿ ಲಕ್ಕಮ್ಮ ಮತ್ತು ಮಾರಯ್ಯ ಎಂದು ಕರೆಯಲಾಯಿತು.
ಒಂದು ದಿನ ಮಾರಯ್ಯ ಕಾಯಕದಿಂದ ಅಕ್ಕಿಯನ್ನು ಹೆಚ್ಚಿಗೆ ತಂದಾಗ ಲಕ್ಕಮ್ಮ ಅವನನ್ನು ಹೀಗೆ ಎಚ್ಚರಿಸುತ್ತಾಳೆ.
ಎನ್ನಾರ್ದರೇ, ಯಾಕೆ ಹೆಚ್ಚು ತಂದಿರಿ?
ನಿತ್ಯದಷ್ಟೇ ಸಾಕು ಈ ಹೆಚ್ಚಿನ ದುರಾಸೆ ನಿಮಗೆ ಏಕೆ ಉಂಟಾಯಿತು
ಆಸೆ ಎಂಬುದು ನರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ?
ರೋಷವೆಂಬುದು ಯಮದೂತರಿಗೆ ಅಲ್ಲದೆ ಅಜಾತರಿಗೆ ಉಂಟೆ ಅಯ್ಯಾ? ಈಸಕ್ಕೀ ಆಸೆ ನಿಮಗೇಕೆ? ಈಶ್ವರನಪ್ಪ. ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ
ಎಂದು ಗುಡುಗುವಳು.
ಒಂದು ದಿನ ಬಸವಣ್ಣನವರ ಪರಿವಾರವನ್ನು ಕರೆದು ದಾಸೋಹ ಮಾಡಲು ಪ್ರಸಾದದಿಂದ ತೃಪ್ತಿಗೊಂಡ ಅಲ್ಲಮ ಪ್ರಭುಗಳು
ಆರನೇಮಕ್ಕೆ ಸಂದಿತ್ತು
ಇಚ್ಚಾ ಭೋಜನಕ್ಕೆ ತೃಪ್ತಿಯಾಯಿತು.
ಮನಗನದೊಳಗೆ ಕಂಡೆಯ ಸಂಗನ ಬಸವಣ್ಣ?
ಗುಹೇಶ್ವರ ಲಿಂಗಕ್ಕೆ ಆಶ್ಚರ್ಯವಾಯಿತು. ಎಂದಾಗ
ಮನೆ ನೋಡ ಬಡವರು. ಮನ ನೋಡ ಸಂಪನ್ನರು.
ಕೂಡಲಸಂಗನಾಶರಣರು ಕರುಳಿಲ್ಲದ ಕಲಿಗಳು
ಯಾರಿಗೆ ಉಪಯೋಗಿಸಬಹುದು? ಎಂದು ಕೊಂಡಾಡಿದರು.
ಕಾಯಕ ತತ್ವಕ್ಕೆ ಉಜ್ವಲ ಉದಾಹರಣೆಯಾಗಿ ಉಳಿದಿದ್ದ ಲಕ್ಕಮ್ಮ ಕಾಯಕನಿಷ್ಠೆ ದಾಸೋಹ ಭಾವ, ಅನುಭವಗೋಷ್ಠಿಯಲ್ಲಿ ಭಾಗಿ ವಚನ ರಚನೆ ಇಂಥ ಸಾರ್ಥಕ ಬದುಕು ಅವರದು. ಇಳಿ ವಯಸ್ಸಿನವರೆಗೂ ಶರಣ ಸಂಸ್ಕೃತಿಯಲ್ಲಿ ಬಾಳಿದರು ಒಮ್ಮೆ ಮಾರಯ್ಯ ಇಹದ ಲೌಕಿಕ ಬಾಳು ಸಾಕಣಿಸಿ ಕೈಲಾಸಕ್ಕೆ ಹೋಗಬೇಕು ಎಂದಾಗ ಲಕ್ಕಮ್ಮ ಹೀಗೆ ಹೇಳುತ್ತಾಳೆ ಮಾಡಿ ನೀಡಿ ಹೋದೆ ಹೆನೆಂದಾಗ ಕೈಲಾಸ ವೆಂಬುದು ಕೈ ಕೂಲಿಯೆ? ಭಕ್ತಿಯು ನಿಷ್ಕಾಮವಾಗಿರಬೇಕು. ಬೇಡಿಕೆಗಳನ್ನು ಮುಂದಿಟ್ಟು ಮಾ ಡುವ ಪೂಜೆಗೆ ಅರ್ಥವಿಲ್ಲ.
ಮಾಡುವ ಆಟವುಳ್ಳ ನಕ್ಕ ಬೇರೊಂದು ಪದವನರಸಲೇತಕ್ಕೆ?
ದಾಸೋಹವೆಂಬ ಸೇವೆಯ ಬಿಟ್ಟು ನೀ ಸಲಾರದೆ
ಕೈಲಾಸವೆಂಬ ಆಸೆ ಬೇಡ
ಮಾರಯ್ಯಪ್ರಿಯ ಅಮರೇಶ್ವರ ಲಿಂಗವಿದ್ದ ಠವೇ ಕೈಲಾಸ.
ಹೀಗೆ ಸದಾ ಕಾಲವು ಗಂಡನನ್ನು ಎಚ್ಚರಿಸುತ್ತಿದ್ದಳು ಲಕ್ಕಮ್ಮ ಹೀಗೆ ಮಾರಯ್ಯ ದಂಪತಿಗಳದು ಅಪರೂಪದ ಜೋಡಿ. ಉಭಯ ದೃಷ್ಟಿ ಏಕದೃಷ್ಟವಾದಂತೆ ದಂಪತಿಯ ಕೋಭಾವದಲ್ಲಿ ಗುಹೇಶ್ವರ ಲಿಂಗಕ್ಕೆ ಅರ್ಪಿತವಾಯಿತು ಎಂಬ ಪ್ರಭುವಿನ ವಾಣಿ ನಿಜವಾಗಿದೆ. ಬಸವಾದಿ ಶರಣರು ಒದಗಿಸಿದ ಅವಕಾಶ ಪ್ರೋತ್ಸಾಹಗಳನ್ನು ಬಳಸಿಕೊಂಡು, ಅಂದಿನ ಅವಕಾಶ ವಂಚಿತ ಹೆಣ್ಣು ಮಕ್ಕಳು ಹೇಗೆ ಬೆಳೆದರು ಉಳಿದವರಿಗೆ ಹೇಗೆ ದಾರಿ ದೀಪವಾದರು ಎಂಬುದಕ್ಕೆ ಲಕ್ಕಮ್ಮ ನಿದರ್ಶನವಾಗಿ ನಿಂತಿದ್ದಾರೆ. ಏಕೋ ಬಾವದ ಇವರ ಜೀವನ ಸರ್ವರಿಗೂ ಬೇಕಾಗಿದ್ದೇ ಸರ್ವಕಾಲಕ್ಕೂ ಬೇಕಾಗಿದ್ದೇ.
…………………………………….
ರತ್ನಮ್ಮ ಕಾದ್ರೊಳ್ಳಿ