- Advertisement -
ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ನಗರ ವಿಶ್ವವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಗೊರೂರು ರಾಮಸಾಮಿ ಅಯ್ಯಂಗಾರ್ ಅವರ 120ನೇ ಜನ್ಮದಿನದ ಅಂಗವಾಗಿ ಗೊರೂರು ಸಂಸ್ಮರಣೆ ಹಾಗೂ ಮಹಾತ್ಮ ಗಾಂಧೀ ವ್ಯಕ್ತಿ ವಿಚಾರಗಳ ಪ್ರಸ್ತುತತೆ ಎಂಬ ವಿಷಯದ ವಿಚಾರ ಸಂಕಿರಣವು ಬೆಂಗಳೂರಿನ ಗಾಂಧೀ ಭವನ ಮಹದೇವಸ್ವಾಮಿ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಭಿಮಾನಿಗಳ ಬಳಗ ಭಾಗವಹಿಸಿ ಡಾ. ಗೊರೂರರ ಮಗಳು ಶ್ರೀಮತಿ ವಾಸಂತಿ ಲಕ್ಷ್ಮೀಮೂರ್ತಿ ಗೊರೂರು (ಕೆನಡಾ) ಇವರನ್ನು ಸನ್ಮಾನಿಸಿ ಗೌರವಿಸಿದರು. ಸಾಹಿತಿ ಗೊರೂರು ಅನಂತರಾಜು, ಕ್ಯಾಪ್ಟನ್ ಗೋಪಿನಾಥ್, ಉಡುವೇರೆ ಡಿ. ಸುಂದರೇಶ್, ಲೇಖಕರು ನಟರಾಜ್, ನಾಟಕಕಾರರು ಜಿ.ಎಸ್.ಪ್ರಕಾಶ್, ಮಲ್ಲಶೆಟ್ಟಿ, ಯಾಕೂಬ್ ಖಾನ್, ಡಾ.ಜಿ.ಎನ್.ಶ್ರೀನಿವಾಸನ್ ಗೊರೂರು ಮೊದಲಾದವರು ಇದ್ದರು