ಛಾಯಾಗ್ರಾಹಕ ಸಂಘಕ್ಕೆ ಅಧ್ಯಕ್ಷರಾಗಿ ಹಾದಿಮನಿ

0
203

ಮೂಡಲಗಿ: ತಾಲೂಕಾ ವೃತ್ತಿನಿರತ ಛಾಯಾಗ್ರಾಹಕ ಸಂಘದ ಕಚೇರಿಯಲ್ಲಿ ರವಿವಾರದಂದು ನಡೆದ ಸಭೆಯಲ್ಲಿ ತಾಲೂಕಾ ಸಂಘದ ಅಧ್ಯಕ್ಷರಾಗಿ ಶಂಕರ ಹಾದಿಮನಿ ಆಯ್ಕೆಯಾದರು.

ಉಪಾಧ್ಯಕ್ಷ ಕೃಷ್ಣಾ ಸೋನವಾಲ್ಕರ ಹಾಗೂ ಕಾರ್ಯದರ್ಶಿಯಾಗಿ ಮಹೇಶ ಭಸ್ಮೆ ಆಯ್ಕೆಯಾಗಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ಯಮಕನಮರಡಿ ತಿಳಿಸಿದ್ದಾರೆ.

ಇನ್ನು ಸಹ ಕಾರ್ಯದರ್ಶಿಯಾಗಿ ರವಿ ಜಾಧವ್, ಖಂಜಾಚಿಯನ್ನಾಗಿ ಪ್ರಕಾಶ ದೊಂಗಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.