spot_img
spot_img

ಮಸಣಯ್ಯ ಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನಕಾರ್ತಿ

Must Read

- Advertisement -

ಇವಳ ಒಂದು ವಚನವು ಅತ್ಯಂತ ಕಠೋರ ವಚನವು ದಿಟ್ಟ ಗಣಾಚಾರದ ಆಶಯವನ್ನು ಹೊಂದಿದೆ .                 ಶಿವ ಶರಣೆಯರ ವಚನಗಳು. ಸಮಗ್ರ ವಚನ ಸಂಪುಟ 5-ಪುಟ 416 .ಇಲ್ಲಿ ಕಂಡು ಬರುವ ಒಬ್ಬ ಅನಾಮಿಕ ವಚನಕಾರಾರ ಸಂಶೋಧನೆ ಹುಡುಕಾಟವು ನನ್ನನ್ನು ಅತಿಯಾಗಿ ಕಾಡ ಹತ್ತಿತು.

ಮಸಣಯ್ಯ ಪ್ರಿಯ ಎಂಬ ಅಂಕಿತ ಹೊಂದಿರುವದರಿಂದ ವಚನಕಾರರು ಶರಣೆ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಆದರೆ ಈ ಶರಣೆ ಯಾರು ಎಂಬುದು
ಇತ್ಯರ್ಥಕ್ಕೆ ಬರುವುದು ಒಂದು ಸಾತ್ವಿಕ ಕರ್ತವ್ಯ ಮತ್ತು ಸಂಶೋಧಕರ ಜವಾಬ್ದಾರಿ. ಹಸ್ತ ಪ್ರತಿ ನೋಡಿದಾಗ ಇದು ಪ್ರಕ್ಷಿಪ್ತ ವಚನಕಾರ್ತಿಯರ ವಚನ ಅಲ್ಲವೆಂದು ತಿಳಿದು ಬರುತ್ತದೆ .ಹಾಗಿದ್ದರೆ ಯಾರು ಆ ಮಸಣಯ್ಯ ನಮ್ಮ ಮುಂದಿನ ಪ್ರಶ್ನೆಯಾಗಿದೆ.

ಮುಖ್ಯವಾಗಿ ವಚನಕಾರರಲ್ಲಿ ಗಜೇಶ ಮಸಣಯ್ಯ ಮತ್ತು ತೆಲುಗೇಶ ಮಸಣಯ್ಯ ಎಂಬ ಇಬ್ಬರು ವಚನಕಾರರು ಕಂಡು ಬರುತ್ತಾರೆ. ತೆಲುಗೇಶ ಮಸಣಯ್ಯ ಮೂಲ ಆಂಧ್ರ ಪ್ರದೇಶದವನಾಗಿದ್ದು ಕಲ್ಯಾಣ ವಚನ ಆಂದೋಲನ ,ಅನುಭಾವದ ಸಂಪ್ರೀತಿಗೆ ಬೆರಗಾಗಿ ಇಂತಹ ಚಳವಳಿಯಲ್ಲಿ ಭಾಗವಹಿಸಲು ಕಲ್ಯಾಣಕ್ಕೆ ಬಂದಿರುವುದು ಕಾಣುತ್ತದೆ. ವೃತ್ತಿಯಲ್ಲಿ ತೆಲುಗೇಶ ಮಸಣಯ್ಯ ಶರಣರ ಗೋವುಗಳನ್ನು ಕಾಯೋದು .ಇವನು ಒಟ್ಟು ಏಳು ವಚನಗಳನ್ನು ರಚಿಸಿದ್ದಾನೆ. ಅತ್ಯಂತ ಕೆಳ ಸ್ತರದ ದಲಿತನಾದ ತೆಲುಗೇಶ ಮಸಣಯ್ಯ ದನ ಕರಗಳನ್ನು ಮೇಯಿಸಿಕೊಂಡು ಬರುವುದು, ಅವುಗಳಿಗೆ ನೀರು ಕುಡಿಸಿ ಶರಣರ ಮನೆಯಲ್ಲಿ ಅವುಗಳನ್ನು ಜೋಪಾನವಾಗಿ ಕಟ್ಟುವುದು ಕಾರ್ಯವಾಗಿತ್ತು .

- Advertisement -

ಮಸಣಯ್ಯ ಪ್ರಿಯ ಮಾರೇಶ್ವರಲಿಂಗ ಅಂಕಿತದ ವಚನಕಾರ್ತಿಯು ತೆಲುಗು ಮಸಣಯ್ಯನವರ ಪುಣ್ಯ ಸ್ತ್ರೀಯಾಗಿರಬಹುದು.ಮೂಲತಃ ದಲಿತ ಕುಟುಂಬದಿಂದ ಬಂದ ಈ ಮಹಿಳೆಯು ಬಸವಾದಿ ಶರಣರ ಪ್ರಭಾವದಲ್ಲಿ ಸಂಪೂರ್ಣ ಪರಿವರ್ತನೆಗೊಂಡು ಸತ್ಯ ಶುದ್ಧ ಕಾಯಕವನ್ನು ಮಾಡುವವಳಾಗಿರಬೇಕು .

ಅಯ್ಯಾ ಅಸ್ಥಿ ಚರ್ಮ ಮಾಂಸ ಶುಕ್ಲ ಶೋಣಿತದ ಗುಡಿಯ ಕಟ್ಟಿ ,
ಹಂದಿಯ ದೇವರ ಮಾಡಿ ಕುಳ್ಳಿರಿಸಿ ,
ಪಾದರಕ್ಷೆಯ ಪೂಜೆಯ ಮಾಡಿ
ನೈವೇದ್ಯವ ಹಿಡಿದು ,ಮೂತ್ರದ ನೀರ ಕುಡಿಸಿ  ಶ್ವಾನ ಕುಕ್ಕುಟನಂತೆ ಕೂಗಿ ಬೊಗಳಿ ,
ದಡ ದಡ ನೆಲಕ್ಕೆ ಕಾಡಿಕೊಂಡು
ಆ ದೇವರ ಒಡೆಯ ಮಾರೇಶ್ವರ
ಕಂಡ ಹೆಂಡ ಕೊಡುವನಲ್ಲದೆ ಅನ್ನ ನೀರು ಕೊಡುವನೆ ?
ಆ ದೇವರಿಗೆ ಹೊಲೆಯರು ಮೆಚ್ಚುವರಲ್ಲದೆ ,
ಉತ್ತಮರು ಮೆಚ್ಚರು ನೋಡಯ್ಯ.
ಮಸಣಯ್ಯ ಪ್ರಿಯ ಮಾರೇಶ್ವರ ಲಿಂಗವೇ.

ಇವಳ ವಚನವು ಅತ್ಯಂತ ಗಣಾಚಾರ ಧೋರಣೆಯಿಂದ ಕೂಡಿದೆ .

- Advertisement -

ಅಯ್ಯಾ ಅಸ್ಥಿ ಚರ್ಮ ಮಾಂಸ ಶುಕ್ಲ ಶೋಣಿತದ ಗುಡಿಯ ಕಟ್ಟಿ ,-ಮನುಷ್ಯರ ಎಲವು ಚರ್ಮ ಮಾಂಸ ಶುಕ್ಲ ಶೋಣಿತದಿಂದ ಗುಡಿಯನ್ನು ಕಟ್ಟಿ
ಹಂದಿಯ ದೇವರ ಮಾಡಿ ಕುಳ್ಳಿರಿಸಿ -ಅಮೇಧ್ಯವನ್ನು ತಿನ್ನುವ ಹಂದಿಯನ್ನು ದೇವರನ್ನು ಮಾಡಿ ಸ್ಥಾಪಿಸಿ ,ಪಾದರಕ್ಷೆಯಿಂದ ಪೂಜೆಯ ಮಾಡಿ ,ನೈವೇದ್ಯ ಹಿಡಿದು ,ಮೂತ್ರದ ನೀರ ಕುಡಿಸಿ ನಾಯಿ ಕೋಳಿಯಂತೆ ಕೂಗಿ ನೆಲಕ್ಕೆ ದಡದಡ ಬಿದ್ದು ಕೇಳಿಕೊಂಡರೆ ಅಂತಹ ದೇವರು ಖಂಡ ಹೆಂಡ ಕೊಡುವನಲ್ಲದೆ ಅನ್ನ ನೀರು ಕೊಡುವನೆ? ಎಂದು ಪ್ರಶ್ನಿಸಿ ಅಂತಹ ದೇವರಿಗೆ ಮಾಂಸದಂತಹ ಹೊಲಸು ತಿನ್ನುವವರು ಮೆಚ್ಚುವರಲ್ಲದೆ ಉತ್ತಮರು ಗುಣವಂತರು ಮೆಚ್ಚರು. ಇದು ಅನಾಮಿಕ ವಚನಕಾರ್ತಿಯ ಮನೋಗತವಾಗಿದೆ.
ಪ್ರಾಣಿಗಳನ್ನು ದೇವರನ್ನಾಗಿ ಕಾಣುವ ಭಾರತೀಯ ಸಂಸ್ಕೃತಿಯಲ್ಲಿ ಮನುಷ್ಯ ಸಮಾಜದ ಜಂಗಮ ಸಂಸ್ಕೃತಿಯನ್ನು ಕಡೆಗಣಿಸಿದ್ದನ್ನು ಸಾತ್ವಿಕ ಕೋಪದಿಂದ ಪ್ರಶ್ನಿಸಿದ್ದಾಳೆ ವಚನಕಾರ್ತಿ.
ಈ ವಚನವನ್ನು ನೋಡಿದರೆ ಮಾಂಸಾಹಾರಿಗಳು ಪ್ರಾಣಿ ಕೊಂದು ತಿನ್ನುವ ಒಂದು ಜನಾಂಗವು ಕ್ಷುದ್ರ ದೇವತೆಯನ್ನು ವರಿಸುವ ವಿವಿಧ ಪರಿಯ ಜೊತೆಗೆ ಅತ್ಯಂತ ವ್ಯಂಗ್ಯವಾಗಿ ಕಟುವಾಗಿ ಅಂದಿನ ಕಂದಾಚಾರಣೆಯನ್ನು ಮೌಢ್ಯವನ್ನು ಪ್ರಶ್ನಿಸಿದ್ದಾಳೆ. ಕಾರಣ ಇಂತಹ ಆಶಯ ಹೊಂದಿದ ದಲಿತ ಮಹಿಳೆ ವಚನಕಾರ್ತಿಯು ತೆಲುಗು ಮಸಣಯ್ಯನವರ ಪುಣ್ಯ ಸ್ತ್ರೀ ಎನ್ನುವ ಸಂಭಾವ್ಯತೆ ಇದೆ. ಇದು ನನ್ನ ವ್ಯಕ್ತಿಗತ ಗ್ರಹಿಕೆ ಅಭಿಮತ.
_________________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group