HomeUncategorizedಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

 

ಭಾಗ್ಯವನು ಬಯಸುವೊಡೆ ಮಾಡುತಿಹ ಕೆಲಸದಲಿ
ಮನವಿರಲಿ ತನುವಿರಲಿ ಶ್ರದ್ಧೆಯಿರಲಿ
ದಾರಿದ್ರ್ಯ ದೂರಾಗಿ ದೊರಕುವುದು ಸುಖಶಾಂತಿ
ಕಾಯಕವೆ ಕೈಲಾಸ – ಎಮ್ನೆತಮ್ಮ

ಶಬ್ಧಾರ್ಥ
ಭಾಗ್ಯ = ಸಂಪತ್ತು, ಸಿರಿತನ. ಶ್ರದ್ಧೆ = ಗೌರವ, ನಿಷ್ಠೆ
ದಾರಿದ್ರ್ಯ = ಬಡತನ

ತಾತ್ಪರ್ಯ
ಕಾಯಕದ ಮಹತ್ವವನ್ನು ಈ‌ ಕಗ್ಗ ಸಾರುತ್ತಿದೆ. ನಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ‌ ಶ್ರದ್ಧೆಯಿಂದ ಮಾಡುವುದು ಕಾಯಕವಾಗಿ ಪರಿಣಮಿಸುತ್ತದೆ. ಬೇಕಾಬಿಟ್ಟಿಯಾಗಿ‌ ಮಾಡುವುದು ಕೆಲಸವಾಗುತ್ತದೆ. ಇದು‌ ಕೆಲಸ ಮತ್ತು ಕಾಯಕಕ್ಕಿರುವ‌ ವ್ಯತ್ಯಾಸ. ಅಸಡ್ಡೆಯಿಂದ ಕೆಲಸ ಮಾಡಿದರೆ ದಾರಿದ್ರ್ಯ ವಕ್ಕರಿಸುತ್ತದೆ. ಸತ್ಯಶುದ್ಧ ಕಾಯಕವನ್ನು ತನುಮನದಿಂದ ಮಾಡಿದರೆ ಶಾಂತಿ ಸುಖಸಂಪತ್ತು‌ ಬಂದು ಸೇರುತ್ತವೆ. ಅಲಕ್ಷ್ಯದಿಂದ‌ ಮಾಡುವ ಕೆಲಸದಿಂದ‌‌ ಅಶಾಂತಿ
ಬಡತನ ಬಂದೊದಗುತ್ತವೆ. ಕೆಲಸವು Dignity of labour
ಆಗಬಾರದು; ಅದು‌ work is worship ಆಗಬೇಕು. ಅದನ್ನೆ
ಶರಣರು ಕಾಯಕವೆ ಕೈಲಾಸವೆಂದು‌ ಕರೆದರು. ಸುಖಸಂಪತ್ತು
ಬೇಕೆಂದು ಬಯಸಿದರೆ ತನುವನ್ನು ದಣಿಸಿ ಮನವನ್ನು ತಣಿಸಿ
ಸತ್ಯಶುದ್ಧಕಾಯಕವನ್ನು‌ ಮಾಡಬೇಕಾಗುತ್ತದೆ. ಅಂದರೆ
ನ್ಯಾಯಮಾರ್ಗದಿಂದ ಕೆಲಸ‌ಮಾಡಿ ಧರ್ಮದಿಂದ ಹಣ ಸಂಪಾದಿಸುವುದೆ ಕಾಯಕ.ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ. ಎಂದು ಆಯ್ದಕ್ಕಿ ಲಕ್ಕಮ್ಮ ಹೇಳುತ್ತಾಳೆ

ರಚನೆ ಮತ್ತ ವಿವರಣೆ
ಎನ್ .ಶರಣಪ್ಪ‌ ಮೆಟ್ರಿ
ಮೊ: 9449030990

RELATED ARTICLES

Most Popular

error: Content is protected !!
Join WhatsApp Group