- Advertisement -
ಭವ್ಯ ಭಾರತ
ಇದೋ ನಮ್ಮ ಭಾರತ
ಪುಣ್ಯ ಭೂಮಿ ಭಾರತ
ವೇಷ ಭಾಷೆ ಬೇರೆ ಆದರೂ
ಕಣ ಕಣದಲಿ ದೇಶ ಭಕ್ತಿ ಉಸಿರು.
ಹಿಮಾಲಯದ ಶಿಖರದಿಂದ
ಕನ್ಯಾಕುಮಾರಿ ಕಡಲ ತಡಿಯ ಚಂದ
ಋಷಿ ವರ್ಯರ ಹೊತ್ತ ದಿವ್ಯ ನಾಡು
ನದಿನದಗಳ ಚೆಲುವ ಬೀಡು.
- Advertisement -
ವೀರ ಶೂರರು ಜನ್ಮ ವೆತ್ತು
ದೇಶಕಾಗಿ ಜೀವ ತೆತ್ತು
ಮಾನವೀಯತೆಯ ಸಾರಿ
ಸಮನ್ವಯತೆಯ ಬೇರು ಹೀರಿ.
ವ್ಯಾಸ ವಿವೇಕ ಕುವೆಂಪು
ಕಾಳಿದಾಸ ಕನಕದಾಸರ ಕಂಪು
ತಾಯ ಮಡಿಲಲಿ ಮಂದಹಾಸ
ವೇದ ಉಪನಿಷತ್ತುಗಳ ಪ್ರಭಾಸ.
ನ್ಯಾಯ ಸಮಾನತೆಯ ಒಂದು ಗೂಡಿಸಿ
ವರ್ಗ ಬೇಧವ ಅಳಿಸಿ
ಇದೋ ಭವ್ಯ ಭಾರತ
ಸೌಹಾರ್ದತೆಯ ಸಾರುತ.
- Advertisement -
ಸನಾತನ ಧರ್ಮ ಸಂಸ್ಕೃತಿ
ನಿತ್ಯ ವಿನೂತನ ಸಂತತಿ
ಜಗಕೆ ಬೆಳಕು ಬೀರುವಂತೆ
ಕಾಯಕ ಸಿರಿಯ ಅರಳುವಂತೆ.
ಸಿಂಧು ಕಣಿವೆಯಲಿ ಬೆಳೆದು
ಗಂಗ ಕದಂಬ ರಾಷ್ಟ್ರಕೂಟರ ಮೈದಳೆದು
ಪಾವನ ಚರಣ ಕಮಲದಿ
ವಿಶ್ವ ಚೇತನಕೆ ಆದಿ.
ರೇಷ್ಮಾ ಕಂದಕೂರ
ಶಿಕ್ಷಕಿ
ಸಿಂಧನೂರು