- Advertisement -
ಹಾಗೆ….ಸುಮ್ಮನೆ ಒಂದು ಕವಿತೆ.
ನಿನ್ನೊಲವ ಕಾಯ್ದು
••••••••••••••••••••••••••
ನಾವಂದುಕೊಂಡ
ಆ…ರಾತ್ರಿ ಬರಲೇ ಇಲ್ಲ.,
ಮನದ ಮೂಲೆಯ
ಮುತ್ತುಗಳು
ನಲುಗಿದವು.
ಒಣಗಿದ
ಎಲೆಗಳಂತೆ ನರಳುತ
ಉರುಳಾಡುತಿವೆ ಸಪ್ಪಳವಿದ್ದೂ
ಗಪ್ಪನೆ
ಮಲಗುತಿವೆ
ಕಂಗಳು.
- Advertisement -
ತಿಂಗಳ ಏಕಾಂತದಲಿ
ಚಂದ್ರನು ಕಾಡಿದ
ತಂಗಾಳಿ
ಸ್ಪರ್ಶದಿ
ಹರುಷ ಕಸಿದು
ಮರೆಯಲಿ ನಗತೊಡಗಿದ.
ಕಲೆಯಿಲ್ಲ,ಗಾಯವಿಲ್ಲ,
ನೀಡಲೇಗೆ…ದೂರು…?
ಹಂಬಲಿಸಿದ
ವಿರಹವು,
ಅಲೆಗಳ
ಜೊತೆ ಕೈ ಜೋಡಿಸಿ,
ದುಃಖದಲ್ಲೂ
ಸುಖಿಸುತಿದೆ.
ತನಗೆ….ತಾನೆ….
ನಗುತಿದೆ
ಹುಚ್ಚೋ….ಪೆಚ್ಚೋ..?
ನಾವಂದುಕೊಂಡ
ಆ….ರಾತ್ರಿ ಬರಲಿಲ್ಲ ಹೃದಯದ ಬಾಗಿಲು
ತೆರೆಯಲಿಲ್ಲ.,
ಎದೆಗಿರಿಯುವ ನೆನಪುಗಳಿಗೆ
ಆಕಳಿಕೆ ಬರಲಿಲ್ಲ.,
- Advertisement -
ಸಂತೆಯ
ಗದ್ದಲದಲಿ
ಉಸಿರು
ಆರ್ಭಟಿಸಿದರೂ,
ಯಾರಿಗೂ ಕೇಳುತ್ತಿಲ್ಲ.,
ಕಣ್ಣೊಳಗಿನ
ನೀರಿಗೆ
ದಣಿವಾಗಿದೆ.
ಆ ರಾತ್ರಿ ಬರಲೇ ಇಲ್ಲ.,
°°°°°°°°°°°°°°°°°°°
ಶರಣಪ್ಪ ತಳ್ಳಿ ಕುಪ್ಪಿಗುಡ್ಡ