ಕವನ : ಬಾಲ ಶಿವ

Must Read

ಬಾಲ ಶಿವ

ಜಗದ ಜಂಜಡದಿ ನಲುಗುತ್ತಿರುವ ನಿನ್ನ ಸ್ಮರಣೆಯ ಮಾಡುವವರಿಗೆ ಬೆಳಕಿನ ಸಿಹಿಯ ಉಣಬಡಿಸು
ದೇವಾ ಗಿರಿಜಾ ಶಂಕರ
ನನ್ನ ಬಾಲ ಶಿವಮಹಿಮೆಯ
ಏನೆಂದು ಬಣ್ಣಿಸಲಿ

ಶಿವ ಶಿವಯೆಂದು
ತಮ್ಮ ಭಕ್ತಿಯ ಸಮರ್ಪಣೆಗೈಯುವವರಿಗೆ ಸದಾ ರಕ್ಷಣೆಯ ಅಭಯವ ನೀಡುವ ಮುದ್ದುಶಿವ.                                   ನೀ ಜಗಜ್ಜ್ಯೋತಿಯ ದಿವ್ಯಕಾಂತಿ

ನಿನ್ನ ಆಟ ನೋಟಗಳದೆಷ್ಟು ರಮಣಿಯವೋ
ಅದಕ್ಕೂ ಮಿಗಿಲಾಗಿಹವು ನಿನ್ನೊಲವಿನ ನಂದನವನ
ಗಂಗೆಯ ಧರಿಸಿಹ ನೀ
ಜೀವವಾಹಿನಿ

 ಕೈಯಲಿ ತ್ರಿಶೂಲ ಪಿಡಿದಿಹ ನೀನು               ತಪ್ಪೆಸಗುವವರಿಗೆ ಶಿಕ್ಷೆಯ ಸಂದೇಶ ನೀಡುತಾ              ಸದಾ ಹಸನ್ಮುಖದಿಂದ ನಗುತಿರುವ                               ನನ್ನ ಬಾಲ ಶಿವ

ಸಾಕ್ಷಾತ್ ಪರಮಶಿವನ ಅವತಾರಿ ನೀ
ನಿನ್ನಿಂದಲೇ ಇಹವು ನಿನ್ನಿಂದಲೇ ಪರವು
ಜಗದ ಬೆಳಕು ನೀ ಪರಮಾವತಾರಿ ಗುರು

ನಿನ್ನ ಬಾಲಶಿವನ ವೇಷದಲಿ ಕಾಣುತಿದೆ ಸಾಕ್ಷಾತ್ ಪರಮಾತ್ಮನ ದಿವ್ಯ ಮೂರುತಿ ಚಿತ್ತಶಾಂತಿಯ
ಮಂಗಳಮೂರ್ತಿ

                          ಸಕಲರಿಗೆ ಲೇಸ ಬಯಸುವ                          ಮುದ್ದು ಕಂದನ ರೂಪದ ಶಿವನೇ
ನಮ್ಮೆಲ್ಲರ ಬಾಳು ಹಸನಾಗಿಸಲು
ಹರಸು ಕರುಣದಿ ದೇವಾ
ಶಿವ ಶಿವ
ನಿನಗಿದೋ ನನ್ನ
ಶರಣು ಶರಣಾರ್ಥಿ

 

ಶಿವಕುಮಾರ ಕೋಡಿಹಾಳ, ಮೂಡಲಗಿ                          ( ಬಾಲಶಿವನ ವೇಷದಲ್ಲಿ ನಿಹಾಲ್, ಬಾಗಲಕೋಟೆ )

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group