ಬಾಲ ಶಿವ
ಜಗದ ಜಂಜಡದಿ ನಲುಗುತ್ತಿರುವ ನಿನ್ನ ಸ್ಮರಣೆಯ ಮಾಡುವವರಿಗೆ ಬೆಳಕಿನ ಸಿಹಿಯ ಉಣಬಡಿಸು
ದೇವಾ ಗಿರಿಜಾ ಶಂಕರ
ನನ್ನ ಬಾಲ ಶಿವಮಹಿಮೆಯ
ಏನೆಂದು ಬಣ್ಣಿಸಲಿ
ಶಿವ ಶಿವಯೆಂದು
ತಮ್ಮ ಭಕ್ತಿಯ ಸಮರ್ಪಣೆಗೈಯುವವರಿಗೆ ಸದಾ ರಕ್ಷಣೆಯ ಅಭಯವ ನೀಡುವ ಮುದ್ದುಶಿವ. ನೀ ಜಗಜ್ಜ್ಯೋತಿಯ ದಿವ್ಯಕಾಂತಿ
ನಿನ್ನ ಆಟ ನೋಟಗಳದೆಷ್ಟು ರಮಣಿಯವೋ
ಅದಕ್ಕೂ ಮಿಗಿಲಾಗಿಹವು ನಿನ್ನೊಲವಿನ ನಂದನವನ
ಗಂಗೆಯ ಧರಿಸಿಹ ನೀ
ಜೀವವಾಹಿನಿ
ಕೈಯಲಿ ತ್ರಿಶೂಲ ಪಿಡಿದಿಹ ನೀನು ತಪ್ಪೆಸಗುವವರಿಗೆ ಶಿಕ್ಷೆಯ ಸಂದೇಶ ನೀಡುತಾ ಸದಾ ಹಸನ್ಮುಖದಿಂದ ನಗುತಿರುವ ನನ್ನ ಬಾಲ ಶಿವ
ಸಾಕ್ಷಾತ್ ಪರಮಶಿವನ ಅವತಾರಿ ನೀ
ನಿನ್ನಿಂದಲೇ ಇಹವು ನಿನ್ನಿಂದಲೇ ಪರವು
ಜಗದ ಬೆಳಕು ನೀ ಪರಮಾವತಾರಿ ಗುರು
ನಿನ್ನ ಬಾಲಶಿವನ ವೇಷದಲಿ ಕಾಣುತಿದೆ ಸಾಕ್ಷಾತ್ ಪರಮಾತ್ಮನ ದಿವ್ಯ ಮೂರುತಿ ಚಿತ್ತಶಾಂತಿಯ
ಮಂಗಳಮೂರ್ತಿ
ಸಕಲರಿಗೆ ಲೇಸ ಬಯಸುವ ಮುದ್ದು ಕಂದನ ರೂಪದ ಶಿವನೇ
ನಮ್ಮೆಲ್ಲರ ಬಾಳು ಹಸನಾಗಿಸಲು
ಹರಸು ಕರುಣದಿ ದೇವಾ
ಶಿವ ಶಿವ
ನಿನಗಿದೋ ನನ್ನ
ಶರಣು ಶರಣಾರ್ಥಿ
ಶಿವಕುಮಾರ ಕೋಡಿಹಾಳ, ಮೂಡಲಗಿ ( ಬಾಲಶಿವನ ವೇಷದಲ್ಲಿ ನಿಹಾಲ್, ಬಾಗಲಕೋಟೆ )