spot_img
spot_img

ಶಿಕ್ಷಣಕ್ಕೆ ಜ್ಞಾನಿಗಳು ಶಿಕ್ಷಕರಾಗಬೇಕು

Must Read

- Advertisement -

ಕನ್ನಡೇತರರಿಗೆ ಕನ್ನಡ ಕಲಿಸಲು ಹಣ ನೀಡಿ,ಶಿಕ್ಷಕ ತರಬೇತಿ ನೀಡುವ ಬದಲಾಗಿ ಕನ್ನಡದಲ್ಲಿ ಉತ್ತಮ ಅಂಕಪಡೆದು ನಿರುದ್ಯೋಗಿಗಳಾದವರಿಗೆ ಶಿಕ್ಷಕರನ್ನಾಗಿ ಮಾಡಿದರೆ ಉತ್ತಮ.

ಸಣ್ಣ ದೊಡ್ಡ ಸಾಹಿತಿಗಳು ಕನ್ನಡಿಗರಾಗಿ ಶಿಕ್ಷಕ ಹುದ್ದೆಯಲ್ಲಿ ದ್ದರೆ ತಮ್ಮ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳ ಜ್ಞಾನವೂ‌ ‌ಬೆಳೆಯುತ್ತಿತ್ತು. ಆದರೆ, ಹೊರಗಿನ ಜನರಿಗೆ ತಮ್ಮ ಬರವಣಿಗೆ ಲ ಮೂಲಕ ಹತ್ತಿರವಾಗಿ, ಶಿಕ್ಷಣ ಕ್ಷೇತ್ರದಿಂದ ದೂರ ಉಳಿದವರಿಗೆ ಸರ್ಕಾರ ಗೌರವಧನ,ಸನ್ಮಾನ, ಮಾಡಿದರೆ ರಾಜ್ಯದ ಜನತೆಗಾಗಲಿ,‌ ಮಕ್ಕಳಿಗಾಗಲಿ ಅವರ ಜ್ಞಾನದಿಂದ ಎಷ್ಟು ಪ್ರಯೋಜನ?

ಸರ್ಕಾರದ ಋಣ ತೀರಿಸಲು ಶಿಕ್ಷಣ ದಲ್ಲಿ ಸ್ವಚ್ಚಜ್ಞಾನವಿರುವ ಶಿಕ್ಷಕರ ಅಗತ್ಯವಿತ್ತು. ಈಗೀಗ ಕೆಲವು ಶಿಕ್ಷಕರು ಹೆಸರಿಗಾಗಿ ನಾಟಕ ಜಗತ್ತಿನಲ್ಲಿ ಮುಂದೆ ಬಂದು, ವಿದ್ಯಾರ್ಥಿಗಳಿಗೆ ಕೆಟ್ಟ ಸಂದೇಶದ ಧಾರಾವಾಹಿಯ ಕಥಾವಸ್ತು ವಾದರೆ, ಶಿಕ್ಷಕ ಹುದ್ದೆಗೆ ಅವಮಾನ. ನಿಜ, ಕಲೆ ಬೆಳೆಸಬೇಕು.

- Advertisement -

ಹಾಗಂತ ನಮ್ಮ ಪವಿತ್ರವಾದ ಹುದ್ದೆಗೆ ವಿರುದ್ಧವಾದ ಅಭಿನಯಗಳಿಂದ ವಿದ್ಯಾರ್ಥಿಗಳಿಗೆ ತಾವೇ ತಪ್ಪು ದಾರಿಗೆಳೆದಂತೆ ಹಿಂದಿನ ಶಿಕ್ಷಕರಲ್ಲಿದ್ದ ದೇಶ ಸೇವಾಬುದ್ದಿ ಇಂದಿನವರಲ್ಲಿ ಹಿಂದುಳಿದಿದೆ. ಶಿಕ್ಷಕರನ್ನು ಮಾದರಿಯಾಗಿಟ್ಟುಕೊಂಡು ನಡೆಯುವ ಯುವಪೀಳಿಗೆಗೆ ಸ್ಪೂರ್ತಿ ಆಗಬೇಕಾದವರೆ ತಪ್ಪು ದಾರಿ ಹಿಡಿದಾಗ ,ಮಕ್ಕಳ ಗತಿ?

ಕನ್ನಡದ ರಕ್ಷಣೆಗೆ ಭಾಷೆಯ ಮಹತ್ವ ಅರ್ಥ ಮಾಡಿಸಬೇಕಿದೆ
ಮಕ್ಕಳಿಗೆ ಮಾತೃಭಾಷೆಯ ಶಿಕ್ಷಣ ನೀಡುವುದರಲ್ಲಿಯೇ ರಾಜಕೀಯ ಷಡ್ಯಂತ್ರವಿದ್ದರೆ ಇದರಿಂದ ಇನ್ನೊಂದು ಸಮಸ್ಯೆ ಬೆಳೆಯುತ್ತದೆ. ಮಾತೃಭಾಷೆ ಎಂದರೆ ತಾಯಿ ನಾಡಿನ ,ತಾಯಿ ಭೂಮಿಯ ಭಾಷೆ.ತಾಯಿ ಭಾಷೆ ಮಗುವಿಗೆ ಜನ್ಮದಾರಂಭದಲ್ಲಿಯೇ ರಕ್ತಗತವಾಗಿ ಬಂದಿರುವಾಗ ಯಾವುದೇ ವಿಚಾರ ತಿಳಿಸಿದರೂ ಸರಳವಾಗಿ ಅರ್ಥ ಮಾಡಿಕೊಂಡು ಆಸಕ್ತಿಯಿಂದ ಕಲಿಯುತ್ತದೆ ಎನ್ನುವ ಕಾರಣಕ್ಕಾಗಿಯೇ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕೆಂದರು.

ಆದರೆ, ಇತ್ತೀಚೆಗೆ ಪರ ರಾಜ್ಯದವರ ವಲಸೆ,ಪರದೇಶದವರ ವಲಸೆಗಳಿಂದ ಆಂಗ್ಲ ಮಾಧ್ಯಮಗಳು ಎಲ್ಲೆಂದರಲ್ಲಿ ಹುಟ್ಟಿ ಬೆಳೆದು ಆಕ್ರಮಣಕಾರಿಯಾಗಿ ಪೋಷಕರ ಜೊತೆಗೆ ಮಕ್ಕಳ ನಿದ್ದೆ ಕೆಡಿಸಿ ಮೂಲ ಭಾಷೆ,ಜ್ಞಾನವೆ ಹಿಂದುಳಿದಿದೆ. ಆದರೂ ಇನ್ನೂ ಎಷ್ಟೋ ಭಾಷಾ ಪ್ರೇಮಿಗಳು ರಾಜ್ಯದಲ್ಲಿದ್ದು ತಮ್ಮ ಬುದ್ದಿವಂತಿಕೆಯಿಂದ ಉತ್ತಮ ಶಿಕ್ಷಣ ಪಡೆದು ಉತ್ತಮ ಶ್ರೇಣಿಯಲ್ಲಿ ಕನ್ನಡ ಮಾಧ್ಯಮದಲ್ಲಿ, ಹಾಗು ಆಂಗ್ಲ ಮಾಧ್ಯಮದಲ್ಲಿ ಕನ್ನಡ ಭಾಷೆ ಕಲಿತು ಕೆಲಸವಿಲ್ಲದೆ ಕುಳಿತವರನ್ನು ಸ್ವಾಗತಿಸುವ ಕೆಲಸ ಪ್ರಾಧಿಕಾರಗಳು,ಸಂಘಟನೆಗಳು,
ಸರ್ಕಾರ ಮಾಡಬೇಕಿದೆ.

- Advertisement -

ಕನ್ನಡ ಕಲಿಸಿ ಬೆಳೆಸುವುದರ ಮೊದಲು ಕಲಿತವರಿಗೆ ಶಿಕ್ಷಕರಾಗಲು ಅವಕಾಶ ನೀಡಿದರೆ ಸಮಯದ ಉಳಿತಾಯವಾಗುತ್ತದೆ ಅಲ್ಲವೆ? ಎಷ್ಟೋ ಕನ್ನಡ ಶಿಕ್ಷಕರಿಗೆ ಕನ್ನಡ ಭಾಷೆಯ ಪೂರ್ಣ ಜ್ಞಾನವಿಲ್ಲ ಆಂಗ್ಲ ಮಾಧ್ಯಮಗಳಲ್ಲಿ ಕಾಟಾಚಾರದ ಪಾಠಗಳು ನಡೆದರೂ ಕೇಳೋರಿಲ್ಲ.

ಇನ್ನು ಕನ್ನಡ ಮಾತನಾಡುವ ಮಕ್ಕಳಿಗೆ ನೀಡುವ ಶಿಕ್ಷೆಯನ್ನು ಪೋಷಕರೆ ಸ್ವಾಗತಿಸಿದರೆ ಕರ್ನಾಟಕದಲ್ಲಿದ್ದು ಕರ್ ನಾಟಕ ಮಾಡೋರೆ ಹೆಚ್ಚು ಎನ್ನಬಹುದಲ್ಲವೆ?

ನಾಟಕಕ್ಕೆ ಭಾಷೆ ಕಲಿತರೆ ಹಣ ಬರುತ್ತದೆ.ಜ್ಞಾನವಲ್ಲ.ಒಟ್ಟಿನಲ್ಲಿ ಜ್ಞಾನವನ್ನು ಬೆಳೆಸುವ ಶಿಕ್ಷಣಕ್ಕೆ ಜ್ಞಾನಿಗಳೆ ಶಿಕ್ಷಕರಾಗಬೇಕು. ಇದರಲ್ಲಿ ರಾಜಕೀಯತೆ ಇರಬಾರದು.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group