ಕವನ : ಸಾಂಸ್ಕೃತಿಕ ರಾಯಭಾರಿ

Must Read
ಸಾಂಸ್ಕೃತಿಕ ರಾಯಭಾರಿ
ಬಡವರ ಬಾಳಿನ ವಿದ್ಯಾದಾತರು
ಅನಾಥ ಮಕ್ಕಳ ಪಾಲಿನ ಕಲ್ಪವೃಕ್ಷರು
ಅನ್ನ ಅಕ್ಷರ ಜ್ಞಾನ ದಾಸೋಹ ನೇತಾರರು
ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳವರು/೧/
ಮನುಕುಲೋದ್ಧಾರಕ ಹಿತಚಿಂತಕರು
ಶರಣರ ಸಂದೇಶ ಪರಿಪಾಲಕರು
ದಯೆ ಮಮತೆ ಕರುಣಾ ಸಾಗರರು
ಸುತ್ತೂರ ಶ್ರೀ ಮಹಾಶಿವಯೋಗಿಗಳವರು/೨/
‘ಅರಿವೆ ಗುರು’ ತತ್ವಾದರ್ಶ ಆರಾಧಕರು
ಜ್ಞಾನ ದೀಕ್ಷೆ ಸಂಸ್ಕೃತಿ ಹರಿಕಾರರು
ಸರಳ ಸಾಮಾಜಿಕ ಅಪೂರ್ವ ಸಾಧಕರು
ಕಾಯಕದಲ್ಲಿ ಕೈಲಾಸ ಕಂಡುಂಡವರು/೩/
ಬಡವರೇಳ್ಗೆಗಾಗಿ ಚಿನ್ನಾಭರಣ ತ್ಯಜಿಸಿಹರು
ನಿರಾಡಂಬರ ನಿಸ್ವಾರ್ಥಕೆ ದಾರಿದೀಪರು
ಮನುಕುಲದ ವೈರತ್ವ ನಿವಾರಿಸಿಹರು
ವಿದೇಶಗಳಲ್ಲಿ ಸಾಂಸ್ಕೃತಿಕ ಪರಂಪರೆ ಬಿತ್ತರಿಸಿಹರು/೪/
ಬಡತನದ ಬವಣೆಯಲಿ ಬೆಂದವರು
ನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿಹರು
ಜನ್ಮಶತಮಾನೋತ್ಸವದ ಮಹಾನಾಯಕರು
ಶ್ರೀ ಶಿವರಾತ್ರಿ ರಾಜೇಂದ್ರ ಪರಮಪೂಜ್ಯರು/೫/
ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರು
ಅಂತಾರಾಷ್ಟ್ರೀಯ ಸಂಘಟನಾ ಚತುರರು
ಸ್ನೇಹ ವಾತ್ಸಲ್ಯ ಮಮತೆಯ ಸ್ವರೂಪರು
ಸೂರ್ಯ ಚಂದ್ರರಂತೆ ಆಚಂದ್ರಾರ್ಕರು/೬/
ಬಹು ಕ್ಷೇತ್ರ ಅನುಪಮ ಸಾಧಕವರೇಣ್ಯರು
ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರು
ಕನ್ನಡ ನಾಡುನುಡಿಯ ಸೌಭಾಗ್ಯ ದೇವರು
ವಿಶ್ವಕೆ ಆದರ್ಶಪ್ರಾಯ ಮಹಾನ್ ದಾರ್ಶನಿಕರು/೭/

********
— ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ.
ವಿಶ್ರಾಂತ ಕನ್ನಡ ಪ್ರಾಧ್ಯಾಪಕರು.ಗದಗ 

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group