Homeಕವನಕವನ : ಕಪ್ಪತ್ತ ಸಿರಿ

ಕವನ : ಕಪ್ಪತ್ತ ಸಿರಿ

 ಕಪ್ಪತ್ತ ಸಿರಿ

ಹಚ್ಚ ಹಸುರಿನ ಗಿರಿಗಳ ಸಾಲು ಮಧ್ಯೆ ಅಂಕು ಡೊಂಕಾಗಿ ಸಾಗುವ ಕವಲುದಾರಿಗಳ ಮಧ್ಯೆ ಹೋಗುವ
ಇದುವೇ ಕಪ್ಪತ ಗಿರಿಯ ಸಿರಿ….

ಹಸಿರಿನ ಬೆಟ್ಟ ಸುತ್ತುವರಿದು ಹೋಗುವ                   ಬೆಳ್ಳಿ ಮೋಡಗಳು ಬೆಟ್ಟಗಳ ಸಾಲಿನ ಮೇಲೆ     ಬೆಳ್ಳಿಯನ್ನೇ ನಾಚಿಸು ವಂತ ಮಂಜಿನ ಹನಿ
ಇದುವೇ ಕಪ್ಪತ್ತ ಗಿರಿಯ ಸಿರಿ….

ಇಬ್ಬನಿ ತಬ್ಬಿದ ಎಲೆ ಮರಗಳು
ತಣ್ಣನೆ ಗಾಳಿ ಮೈ ನಡುಗುವ ಚಳಿ ಮಳೆ ಸಿಂಚನ ವನ ಸಿರಿ ಮೈ ಮರೆತು ಸಂತಸದಿ ನಡೆದು ಸಾಗಲು ಸ್ವರ್ಗವೇ     ಧರೆಗಿಳಿದಂತೆ ಭಾಸ
ಇದುವೇ ಕಪ್ಪತ್ತ ಗಿರಿಗಳ ಸಿರಿ…..

ಮುಗಿಲೆತ್ತರದ ಬೆಟ್ಟ ಮೇಲೆ ನೋಡಲು
ಸಮೃದ್ಧ ಔಷಧಿ ಸಸ್ಯಗಳ ಆಗರ
ಸಸ್ಯಗಳ ಕಾಶಿಯಂದೆ ಪ್ರಸಿದ್ಧ
ಕಪ್ಪತ್ತ ಗಿರಿಗಳ ಸಿರಿ
ವನ್ಯಜೀವಿಗಳ ವಾಸ ವಿಧ ವಿಧ ಪಕ್ಷಿಗಳ ಚಿಲಿಪಿಲಿ ಕಲರವ ಇದುವೇ ಕಪ್ಪತ್ತ ಗಿರಿಗಳ ಸಿರಿ

ಬೆಟ್ಟದ ತುದಿಯಲ್ಲಿ ಪವನ ಶಕ್ತಿ ಕೇಂದ್ರ
ಅಲ್ಲಲ್ಲಿ ಗಾಳಿ ಯಂತ್ರಗಳು ಹಕ್ಕಿಯಂತೆ ಹಾರುತ್ತಿರುವ ರೆಕ್ಕೆಗಳು
ನೋಡಲೆಷ್ಟು ಚೆನ್ನ ವನದ ಸಿರಿಯನ್ನ ವರ್ಣಿಸಲು ಅಸಾಧ್ಯ ಇದುವೇ ಕಪ್ಪತ್ತ ಗಿರಿಗಳ ಸಿರಿ….

ಅರಣ್ಯ ಪರ್ವತಗಳಲ್ಲಿ ಸಾಗಲು ನಮ್ಮೆಲ್ಲ ಮನದ ಚಿಂತೆ ದುಗುಡ ದೂರವಾಗಲು ಆನಂದದ ಆ ಕ್ಷಣ ಮರೆಯಲಾರದ ಕ್ಷಣ
ಇದುವೇ ಕಪ್ಪತ್ತ ಗಿರಿಗಳ ಸಿರಿ……

ವನದ ದೇವತೆ ಹಸಿರು ಸೀರೆಯನುಟ್ಟು ವಯ್ಯಾರದಿಂದ ನಡೆದಂತೆ ಬಳುಕುವ ಗಿಡ ಮರಗಳು ಅಲ್ಲಲ್ಲಿ ತಿಳಿ ಹಸಿರು ಹುಲ್ಲು ಹೊದಿಸಲು ಸೃಷ್ಟಿ ಸೊಬಗು ನೋಡಲು ಕಣ್ಣಿಗೆ ಹಬ್ಬ
ಇದುವೇ ಕಪ್ಪತ್ತ ಗಿರಿಗಳ ಸಿರಿ…..

ಪ್ರಕೃತಿ ಸೌಂದರ್ಯದ ಗುಟ್ಟು ಸೃಷ್ಟಿಕರ್ತನ ಸೃಷ್ಟಿಯೇ ವಿಸ್ಮಯ ನೋಡುವ ತನು ಮನ ತನ್ಮಯ
ಕವಿಗಳ ಕವಿತೆಯ ಬಣ್ಣನೇ ವಾಗ್ಮಯ
ಇದುವೇ ಕಪ್ಪತ್ತ ಗಿರಿಗಳ ಸಿರಿ….

ವಿಜಯಲಕ್ಷ್ಮಿ ಕೆ.ಹಂಗರಗಿ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group