ಕವಿತೆಗೊಂದು ಕರೆಯೋಲೆ
ಬರೆಯಲೆಂದು ಕುಳಿತ ನನಗೆ
ಪದಗಳೇ ಸಿಗುತಿಲ್ಲ…
ನುಡಿಗಳೆಲ್ಲ ಮುನಿಸಿಕೊಂಡು
ದೂರ ಓಡುತಿವೆಯಲ್ಲ…!
ಬೆರಳುಗಳಿಗೂ ಲೇಖನಿಗೂ
ಒಳಗೊಳಗೆ ನಡೆಯಿತಾ? ಒಳಜಗಳ!!
ಮನಃಪಟದಲೋ ಸಾವಿರಾರು ಅಕ್ಷರ ಬಳಗ…
ಕವಿತೆ ಕಟ್ಟಲದೇಕೋ ಆಗದೆ ಸಾಗಿದೆ ಕಾಳಗ…
ಪ್ರೀತಿಯಿಂದ ಕವಿತೆಗೊಂದು
ಓಲೆ ಬರೆದು ಬಿಡಲೇ?…
ಕರೆಯೋಲೆ ನೀಡಿ ನಾನು
ಅವಳ ಇಲ್ಲಿ ಕರೆಯಲೇ?…
ನನ್ನೆದೆಯಾಳದ ಪರಮಾಪ್ತ ಸಖಿಯೇ! ಸರಿಸು ಕೋಪ ತುಸು ಆಚೆಗೆ, ನೆನಪಿನಂಗಳಕೆ ಹೊತ್ತು ಬಾ ಕಾಣಿಕೆ, ಬಂದು ಸೇರು ಭಾವಗಳ ಸಂಗಮಕೆ!
ಹೃದಯದ ಗೂಡು ಬಿಟ್ಟು ಬರದಿರೆ ಮನಕಾಗುವುದು ದುಗುಡದ ಬರೆ,                                                       ನೀನೇ ನನ್ನಂತರಾಳದ ಸ್ನೇಹಿತೆ
ಸೇರಿಬಿಡು ಅಂತರಂಗದಿ ಕವಿತೆ….
ಮುನಿಸು ತೋರಿಸದಿರು ಗೆಳತಿ
ನನ್ನುಸಿರು ನಿಂತು ಬಿಡುವುದು!
ನಸು ನಗುತ ಹರಸು ನನ್ನನೊಮ್ಮೆ ನೀನು,
ಹಸಿರಾಗಿ ಮತ್ತೇ ನಲಿಯುವುದು ಕವಿತೆ ಹೆಸರು.
✍️ಸರೋಜಾ ಶ್ರೀಕಾಂತ್ ಅಮಾತಿ, ಕಲ್ಯಾಣ್



