ಹಳ್ಳೂರ- ಸಮೀಪದ ಸಮೀರವಾಡಿಯ ಗೋದಾವರಿ ಬಯೋರಿಪೈನರೀಸ್ ಮಜದೂರ ಯೂನಿಯನ್ ಎರಡು ವರ್ಷಗಳ ಅವಧಿಗೆ ಪದಾಧಿಕಾರಿಗಳ ಚುನಾವಣೆಯು ಶುಕ್ರವಾರದಂದು ಕಾರ್ಖಾನೆಯ ಭದ್ರತಾ ಕಚೇರಿಯಲ್ಲಿ ಶಾಂತ ರೀತಿಯಲ್ಲಿ ನಡೆಯಿತು.
ತಡ ರಾತ್ರಿಯಲ್ಲಿ ಚುಣಾವಣೆ ಫಲಿತಾಂಶ ಘೋಷಿಸಲಾಯಿತು. ಮಜದೂರ ಯೂನಿಯನ್ ಅಧ್ಯಕ್ಷರಾಗಿ ರವೀಂದ್ರ ಕುರಬರ, ಕಾರ್ಯಾಧ್ಯಕ್ಷರಾಗಿ ಬಸು ಮೇಲಪ್ಪಗೊಳ, ಉಪಾಧ್ಯಕ್ಷ ಎರಡು ಸ್ಥಾನಕ್ಕೆ ಪಾಂಡು ಹಂಚಿನಾಳ, ರಾಜು ಹಳಿಂಗಳಿ, ಪ್ರಧಾನ ಕಾರ್ಯದರ್ಶಿ ಸಂಗನಗೌಡ ಬಿರಾದಾರ ಪಾಟಿಲ, ಕಾರ್ಯದರ್ಶಿ ಚನ್ನಬಸಪ್ಪ ಅಥಣಿ, ಸಹ ಕಾರ್ಯದರ್ಶಿ ನಿರೂಪಾದಯ್ಯ ಕತ್ತಿ, ಕೋಶಾಧಿಕಾರಿ ಸಲೀಮಸಾಬ ಮುಧೋಳ ಆಯ್ಕೆಯಾಗಿದ್ದಾರೆ.
ಎರಡು ಪೇನಲ್ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಚುನಾವಣೆ ನಡೆದು ಹಳೇ ಪೇನಲ್ 8 ಜನರು ಆಯ್ಕೆಯಾಗಿದ್ದಕ್ಕೆ ಬೆಂಬಲಿಗರು ಫಲಿತಾಂಶ ಹೊರ ಬರುತ್ತಿದ್ದಂತೆ ಕುಣಿದು ಕುಪ್ಪಳಿಸಿ ಗುಲಾಲ ಎರಚಿ ಸಂಭ್ರಮಿಸಿದರು.

