ಬೀದರ – ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ನಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಬೆಂಬಲಿಗರಿಗೆ ಹಣದ ಹೊಳೆ ಹರಿಸಿದ್ದು ಕಂಡು ಬಂದಿತು.
ಮೊದಲಿಂದ ಶರಣು ಸಲಗಾರ ಹೊರ ಜಿಲ್ಲೆಯ ಅಭ್ಯರ್ಥಿ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ಇಂದು ಬಸವಕಲ್ಯಾಣದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು .ಆದರೆ ಇಂದು ಟೈಮ್ಸ್ ಆಫ್ ಕರ್ನಾಟಕ ನಡೆಸಿದ ಒಂದು ರಿಯಾಲಿಟಿ ಚೆಕ್ ನಲ್ಲಿ ಗ್ರಾಮೀಣ ಪ್ರದೇಶದ ವೃದ್ಧನೊಬ್ಬ ತನಗೆ ಶರಣು ಅವರು ಐನೂರು ರೂಪಾಯಿ ಕೊಟ್ಟಿರುವ ಬಗ್ಗೆ ಹೇಳಿಕೊಂಡಿದ್ದು ಅಚ್ಚರಿ ಮೂಡಿಸಿದೆ.
ನಾಮ ಪತ್ರ ಸಲಿಸಲು ಬಂದ ಬಿಜೆಪಿ ಕಾರ್ಯಕರ್ತರು ನಿಮ್ಮ ಯಾವ ಕ್ಷೇತ್ರ ಎಂದು ಪ್ರಶ್ನೆ ಮಾಡಿ ಕೇಳಿದಾಗ, ನಮ್ಮ ಕ್ಷೇತ್ರ ಕಲಬುರಗಿ ಜಿಲ್ಲೆ ಆಳಂದ ಎಂದು ಉತ್ತರ ನೀಡಿದ್ದಲ್ಲದೆ ನಮಗೆ ಐದು ನೂರು ರೂಪಾಯಿ ನೀಡಿ ನಮಗೆ ಕರೆದುಕೊಂಡು ಬಂದಿದ್ದಾಗಿ ಉತ್ತರ ನೀಡಿದರು.
ಬಿಜೆಪಿ ಪಕ್ಷ ತನ್ನ ತವರು ಕ್ಷೇತ್ರದ ಟಿಕೆಟ್ ಆಕಾಂಕ್ಷೆ ಗಳಿಗೆ ಟಿಕೆಟ್ ನೀಡದಿದ್ದರೂ ಪರವಾಗಿಲ್ಲ ಆದರೆ ನಿಜವಾದ ಸ್ಥಳೀಯ ಕಾರ್ಯಕರ್ತರ ಜೊತೆ ಸುಳ್ಳು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ನಿಷ್ಠಾವಂತ ಕಾರ್ಯಕರ್ತರು ಕೇಳುವಂತಾಗಿದೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ