spot_img
spot_img

ಗಾದೆ ಮಾತುಗಳ ಹೊಂದಿಸಿ ಕವನ ರಚನೆ

Must Read

- Advertisement -

ಗಾದೆ ವೇದಕ್ಕೆ ಸಮಾನ

ಆಳಾಗಿ ದುಡಿಯುವವ ಅರಸನಾಗಬಲ್ಲ
ನುಡಿದಂತೆ ನಡೆಯುವವ ಜಗ ಆಳಬಲ್ಲ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲವಲ್ಲ
ಎಂದರಿತು ಬಾಳಿದವನಿಗೆ ಸೋಲಿಲ್ಲ//

ಕುಂತುಂಡರೆ ಕುಡಿಕೆ ಹೊನ್ನು ಸಾಲದಲ್ಲ
ಮಾಡಿದ್ದು ಉಣ್ಣದೆ ಯಾರಿಗೂ ಗತಿಇಲ್ಲ
ಉಪ್ಪು ತಿಂದವ ನೀರು ಕುಡಿಯಬೇಕಲ್ಲ
ಇದನ್ನೆಲ್ಲಾ ಅರಿತವ ಜಗದಿ ಬದುಕಬಲ್ಲ//

ಮನಸ್ಸಿದ್ದರೆ ಮಾರ್ಗ ಉಂಟು ತಿಳಿಯಬೇಕಲ್ಲ
ಹುಟ್ಟಿದವನು ಸಾಯಲೇಬೇಕೆಂಬುದು ಸುಳ್ಳಲ್ಲ
ಕುಡುಗೋಲುನುಂಗಿರೋನೊಟ್ಟೆ ಹರಿಯಬೇಕಲ್ಲ
ಇದನ್ನರಿತು ಬಾಳಿದರೆ ಸುಂದರ ಬದುಕೆಲ್ಲ//

- Advertisement -

ಮಾತು ಬೆಳ್ಳಿ ಮೌನ ಬಂಗಾರ ನಿಜವಹುದಲ್ಲ
ಉಪ್ಪಿಗಿಂತ ಬೇರೆನು ರುಚಿ ಜಗದಿ ಇಲ್ಲವಲ್ಲ
ತಾಯಿಗಿಂತ ದೊಡ್ಡ ಬಂಧು ಸಿಗುವುದಿಲ್ಲ
ಅರಿತು ನಡೆದೊಡೆ ದೇವರು ಬಳಿ ಇಹನಲ್ಲ//

ದುಡಿಮೆಯೇ ದುಡ್ಡಿನ ತಾಯಿ ಬಲ್ಲವಗೆಲ್ಲ
ಮಾತು ಬಲ್ಲವನಿಗೆಂದೂ ಜಗಳವಿಲ್ಲವಲ್ಲ
ಊಟಬಲ್ಲವನಿಗೆ ರೋಗ ಸುಳಿಯದಲ್ಲ
ಗಾದೆಗಳು ವೇದಗಳಿಗೆ ಸಮನಾಗಿವೆಯಲ್ಲ//

ಅನ್ನಪೂರ್ಣ ಹಿರೇಮಠ ಶಿಕ್ಷಕಿ,ಬೆಳಗಾವಿ

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group