- Advertisement -
ಬೀದರ: ಹಿಂದುಳಿದ ಪ್ರದೇಶ ಎಂದು ಕರೆಯಿಸಿಕೊಳ್ಳಲಾಗುವ ಬೀದರ ಜಿಲ್ಲೆಯ ಮಕ್ಕಳನ್ನೂ ಕೂಡ ವಿದ್ಯಾಭ್ಯಾಸದಲ್ಲಿ ಹಿಂದುಳಿದಿರುವವರು ಎಂದು ಹಣೆಪಟ್ಟಿ ದೃಷ್ಟಿಯಿಂದ ನೋಡಲಾಗುತ್ತದೆ, ಆದರೆ ಗಡಿ ಜಿಲ್ಲೆ ಬೀದರ ಹುಡುಗನೊಬ್ಬ ಲಂಡನ್ ನಲ್ಲಿ ಕರ್ನಾಟಕ ಧ್ವಜ ಹಾರಿಸಿ ತಾವೇನೂ ಕಮ್ಮಿಯಿಲ್ಲ ಎಂದು ಸಾರಿದರು.
ನಗರದ ವಾಲಿ ಕುಟುಂಬದ ಆಧೀಶ ರಜನೀಶ ವಾಲಿ ಲಂಡನ್ ನಲ್ಲಿ ವಿಧ್ಯಾಭ್ಯಾಸ ಮಾಡಿ ಪದವಿ ಸ್ವೀಕಾರದ ಸಮಾರಂಭದಲ್ಲಿ ಕರ್ನಾಟಕ ಧ್ವಜ ಹಿಡಿದು ವೇದಿಕೆ ಪ್ರವೇಶಿಸಿ ಎಲ್ಲರ ಕರತಾಡನಕ್ಕೆ ಪಾತ್ರರಾದರು. ಲಂಡನ್ ಸಿಟಿ ಯುನಿವರ್ಸಿಟಿ ಎಲ್ಲಾ ಸದಸ್ಯರು ಆದೀಶ ರಜನೀಶ ವಾಲಿ ಅವರಿಗೆ ಚಪ್ಪಾಳೆ ತಟ್ಟಿದರು.
ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ (ಎಂಎಸ್)ಪದವಿ ಪಡೆದ ಆದೀಶ ಬ್ರಿಟನ್ ನ ಲಂಡನ್ ನಲ್ಲಿ ಪದವಿ ಸಮಾರಂಭದಲ್ಲಿ ಕರ್ನಾಟಕ ಧ್ವಜ ಪ್ರದರ್ಶಿಸಿ ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದರು.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ