ವಿಶ್ವೇಶ್ವರ ಭಟ್ ಅವರೇ , ನೀವು ನಿಮ್ಮ ವಿಶ್ವ ವಾಣಿ ಪತ್ರಿಕೆಯಲ್ಲಿ ಸಾಣೇಹಳ್ಳಿ ಶ್ರೀಗಳ ಬಗ್ಗೆ ಬರೆದ ಉದ್ದನೆಯ ಸುದೀರ್ಘ ಲೇಖನವನ್ನು ಓದಿದೆ.
ನೀವು ಹಿಂದೆ ಗೌರಿ ಲಂಕೇಶ ಅವರ ಹತ್ಯೆಯ ಬಗ್ಗೆ ಬರೆದ ನಿಮ್ಮ ಲೇಖನವು ನಿಮ್ಮ ವಿಕೃತ ಮನಸ್ಸಿನ ಕನ್ನಡಿ ಎಂದು ಅಂದು ಬಹುತೇಕರು ನಿಮ್ಮ ನಿಲುವನ್ನು ಟೀಕಿಸಿದರು.
ಹತ್ತು ತಿಂಗಳ ಹಿಂದೆ ಸಾಣೇಹಳ್ಳಿ ಡಾ ಪಂಡಿತಾರಾಧ್ಯ ಶ್ರೀಗಳು ಗಣಪತಿ ಪೂಜೆ ಲಿಂಗಾಯತ ಧರ್ಮೀಯರಿಗಲ್ಲ ಎಂದು ಪ್ರವಚನದಲ್ಲಿ ಹೇಳಿದಾಗ ನೀವು ಮತ್ತೆ ನಿಮ್ಮ ಕೊಂಕು ಮಾತಿನಿಂದ ಅವರನ್ನು ಕುಟುಕಲು ಯತ್ನಿಸಿದ್ದು ಯಾರೂ ಮರೆತಿಲ್ಲ. ಇತ್ತೀಚೆಗೆ ಚಿತ್ರದುರ್ಗದ ಹೊಳಲ್ಕೆರೆ ಕಾರ್ಯಕ್ರಮದಲ್ಲಿ ಶ್ರೀ ಗಳು ಲಿಂಗಾಯತ ಅವೈದಿಕ ಹಿಂದುಯೇತರ ಧರ್ಮ ಎಂದು ಹೇಳಿದ್ದು ಬಸವ ತತ್ವ ಆಧಾರಿತ ವಚನಗಳ ಸಾಕ್ಷಿ ಮತ್ತು ಸಾವಿರಾರು ಪುರಾವೆಗಳಿಂದ ಹೇಳಿದ್ದೇ ಹೊರತು ನಿಮ್ಮ ಹಾಗೆ ಎಲ್ಲದ್ದಕ್ಕೂ ಮೂಗು ತೂರಿಸುವ ನಿಮ್ಮ ಕೆಟ್ಟ ಅಭಿಪ್ರಾಯಗಳ ಹಾಗಲ್ಲ.
ಗೌರಿ ಲಂಕೇಶ ಅವರ ಸಾವನ್ನು ಸಂಭ್ರಮಿಸುವ ನೀವು ನಿಮ್ಮ ಯೋಗ್ಯತೆ ಇಡೀ ಕರ್ನಾಟಕಕ್ಕೆ ಗೊತ್ತಿದೆ.
ವಿಶ್ವೇಶ್ವರ ಭಟ್ಟರಿಗೆ ಕೆಲ ಪ್ರಶ್ನೆಗಳು
1 ತಮ್ಮ ಪ್ರಕಾರ ಸಾಣೇಹಳ್ಳಿ ಶ್ರೀಗಳು ಲಿಂಗಾಯತರು ಹಿಂದೂಗಳಲ್ಲ ಎಂಬ ಮಾತನ್ನು ಅದೇ ವೇದಿಕೆಯ ಇನ್ನೊಬ್ಬ ವಚನಾನಂದ ಶ್ರೀಗಳು ಒಪ್ಪುತ್ತಿಲ್ಲ ಎನ್ನುವ ನೀವು, ವೈದಿಕ ಸನಾತನ ವ್ಯವಸ್ಥೆಯನ್ನು ಸಂಪೂರ್ಣ ಧಿಕ್ಕರಿಸಿ ತಾನೊಬ್ಬ ಅವೈದಿಕ ಸನಾತನ ವಿರೋಧಿ ಎಂದು 850 ವರ್ಷಗಳ ಹಿಂದೆಯೇ ಹೇಳಿದ ಬಸವಣ್ಣನವರ ನಿಲುವನ್ನು ನೀವು ಒಪ್ಪುತ್ತೀರಲ್ಲವೇ ?
2 ವೇದ ಶಾಸ್ತ್ರ ಆಗಮ ಪುರಾಣ ಕರ್ಮ ಸಿದ್ಧಾಂತಗಳನ್ನು ನಿರಾಕರಿಸಿ ತಮ್ಮದೇ ಆದ ಬದುಕಿನ ಮಾರ್ಗವನ್ನು ಕೈಕೊಂಡ ಶರಣರ ನಿಲುವಿಗೂ ನಿಮ್ಮ ಅದೇ ಹಳೆಯ ವೈದಿಕ
ವಿಚಾರಗಳಿಗೂ ವ್ಯತ್ಯಾಸವಿಲ್ಲವೇ ?
3 ಲಿಂಗಾಯತ ಧರ್ಮದ ಆಂತರಿಕ ಚರ್ಚೆಗೆ ನೀವೇಕೆ ಮೂಗು ತೂರಿಸುತ್ತೀರಿ ?
4 ಇವತ್ತಿಗೂ ಕೂಡ ನಿಮ್ಮ ಹಿಂದೂ ಧರ್ಮದ ಯಜ್ಞ ಹವನ ಹೋಮ ಜೊತೆಗೆ ಅನೇಕ ಕಂದಾಚಾರಗಳು ರೂಢಿಯಲ್ಲಿವೆ . ನೀವು ಎಂದಾದರೂ ಅಂತಹ ಕಂದಾಚಾರಗಳ ವಿರುದ್ಧ ಬರೆದಿರುವಿರಾ ಹೇಗೆ ?
5 ಹಿಂದೂ ಆವರಣದಲ್ಲಿರುವ ಲಿಂಗ ತಾರತಮ್ಯ ಜಾತೀಯತೆ ಅಸಮಾನತೆ ಶ್ರೇಣೀಕೃತ ವ್ಯವಸ್ಥೆ ನೀವು ನೀವು ಒಪ್ಪುತ್ತೀರಲ್ಲವೇ ?
6 ಮೊದಲು ನೀವು ನಿಮ್ಮ ಧರ್ಮದಲ್ಲಿನ ಕೊಳಕು ತೊಳೆದು ಕೊಳ್ಳಿರಿ. ಇನ್ನೊಬ್ಬರ ಧಾರ್ಮಿಕ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಮಾತನಾಡದಿರುವುದು ಸೂಕ್ತ.
7 ನೀವೊಬ್ಬ ಹಿರಿಯ ಪತ್ರಕರ್ತರು ಕೇವಲ ಪ್ರಸಿದ್ಧಿಗೆ ಪ್ರಚಾರಕ್ಕೆ ನೀವು ಬರೆಯುತ್ತಿದ್ದರೆ ಇನ್ನು ಮುಂದೆ ನಿಮ್ಮ ಇಂತಹ ಕ್ಷುಲ್ಲಕ ಬರಹಗಳನ್ನು ನಿಲ್ಲಿಸಿ. ನಿಮ್ಮ ಪತ್ರಿಕಾ ಗುಣ ಧರ್ಮದ ಬಗ್ಗೆ ಕಾಳಜಿಪೂರಕ ಎಚ್ಚರದಿಂದ ಕಾರ್ಯ ನಿರ್ವಹಿಸಿರಿ.
ಲಿಂಗಾಯತ ಧರ್ಮದ ವಿಷಯದಲ್ಲಿ ನೀವು ಹೀಗೆ ಮೇಲಿಂದ ಮೇಲೆ ಮೂಗು ತೂರಿಸುವುದನ್ನು ನಿಲ್ಲಿಸಲು ಆಗ್ರಹಿಸುತ್ತೇವೆ.
—————————————————————————–
ಡಾ. ಶಶಿಕಾಂತ ಪಟ್ಟಣ, ರಾಮದುರ್ಗ
( ಇಲ್ಲಿ ವ್ಯಕ್ತವಾದ ಅಭಿಪ್ರಾಯ ಲೇಖಕರ ಸ್ವಂತ ಅಭಿಪ್ರಾಯವಾಗಿದೆ. ಆದಾಗ್ಯೂ ಬಹಿರಂಗ ಚರ್ಚೆಗೆ ಆಸ್ಪದವಿದೆ. ತಮ್ಮ ಅನಿಸಿಕೆಗಳನ್ನು umeshmbelakud@gmail.com ಇಲ್ಲಿಗೆ ಮೇಲ್ ಮಾಡಬಹುದು )