spot_img
spot_img

ಸಹನೆ. ತಾಳ್ಮೆ ಮತ್ತು ಸಾತ್ವಿಕತೆಯ ಪ್ರತೀಕ ಗುರುಮಾತೆ ಎಂ. ಎಂ. ಸಂಗಮ – ಎ. ಎನ್. ಕಂಬೋಗಿ

Must Read

- Advertisement -

ಸವದತ್ತಿ:ನಮ್ಮ ವೃತ್ತಿ ಬದುಕಿನಲ್ಲಿ ಹಲವಾರು ಸಿಹಿಕಹಿ ಘಟನೆಗಳು ಜರುಗುತ್ತಿರುತ್ತವೆ. ಅವುಗಳನ್ನು ಸಮನಾಗಿ ಸ್ವೀಕರಿಸಿ ಬದುಕುವುದು ಜೀವನ. ಅಂತಹ ಸಹನೆ ತಾಳ್ಮೆ ಮತ್ತು ಸಾತ್ವಿಕತೆ ಹೊಂದಿದ ಗುರುಮಾತೆ ಎಂ. ಎಂ. ಸಂಗಮ ಅವರು. ಓರ್ವ ಪಾಲಕರಿಗೆ ಅವರ ಸಿಟ್ಟಿನ ಸಂದರ್ಭದಲ್ಲಿ ತಮ್ಮ ತಾಳ್ಮೆ ಕಳೆದುಕೊಳ್ಳದೇ ಸಹನೆಯಿಂದ ತಮ್ಮ ಹಿತನುಡಿಗಳನ್ನಾಡುತ್ತಿದ್ದುದನ್ನು ನಾನು ಗಮನಿಸಿದೆ. ಇದು ಶಿಕ್ಷಕರಲ್ಲಿ ಇರಬೇಕಾದ ಗುಣ. ಇವರು ಇಂದು ನಿವೃತ್ತಿ ಹೊಂದಿದರೂ ಕೂಡ ಮತ್ತೆ ಶಿಕ್ಷಣ ಇಲಾಖೆ ಗೆ ಸ್ಪಂದಿಸುವ ಮೂಲಕ ತಮ್ಮ ಬದುಕನ್ನು ಕಳೆಯುವಂತಾಗಲಿ”ಎಂದು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ತಿಳಿಸಿದರು.

ಅವರು ಪಟ್ಟಣ ದ ಬಿ. ಆರ್. ಸಿಯಲ್ಲಿ ಜರುಗಿದ ವಿಕಲಚೇತನ ಸಂಪನ್ಮೂಲ ಶಿಕ್ಷಕಿ ಎಂ. ಎಂ. ಸಂಗಮ ಅವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ
ಮಾತನಾಡಿದರು.

ಬಿ. ಆರ್. ಸಿ ವತಿಯಿಂದ ಗುರುಮಾತೆಯವರ ಕುಟುಂಬ ಸಹಿತವಾಗಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

- Advertisement -

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ. ಬಿ. ಬಳಿಗಾರ್ “ಗುರುಮಾತೆ ನಮಗಿಂತ ಹಿರಿಯರಾಗಿ ಎಲ್ಲಾ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವ ಮೂಲಕ ನಮಗೆ ಮಾದರಿಯಾಗಿದ್ದರು. ಅವರ ಕಾರ್ಯದಕ್ಷತೆ ಮರೆಯಲಾಗದು.” ಎಂದು ಇಲಾಖೆಯ ಅವರ ಸೇವೆಯನ್ನು ಸ್ಮರಿಸಿದರು.

ಶಶಿಕಲಾ ಮಿರ್ಜಿ ಗುರುಮಾತೆ ಮಾತನಾಡಿ “ಅವರೊಂದಿಗೆ ತಮ್ಮ ಸೇವೆಯನ್ನು ನೆನೆದು ಮಾತೃತ್ವ ಸ್ಥಾನವನ್ನು ನನಗೆ ಗುರುಮಾತೆ ನೀಡಿದ್ದರು. ಅವರ ಪತಿಯನ್ನು ನನ್ನ ಕಣ್ಮುಂದೆ ಇರುವ ಕಲಿಯುಗದ ಗುರು ರಾಘವೇಂದ್ರ ಎಂದರೆ ಅತಿಶಯೋಕ್ತಿ ಆಗದು. ಸಂಸ್ಕೃತ ಶ್ಲೋಕಗಳನ್ನು ನಾನು ಅವರಿಂದ ಕಲಿತಿರುವೆನು” ಎಂದು ಹೇಳಿ ದರೆ. ಸವದತ್ತಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್. ಆರ್. ಪೆಟ್ಲೂರ್ ಮಾತನಾಡಿ “ಗುರುಮಾತೆಯವರ ಕುಟುಂಬ ನಮ್ಮ ಕುಟುಂಬದ ಅನ್ಯೋನ್ಯತೆಯು ನನ್ನ ಸಂಸ್ಕಾರ ದಲ್ಲಿ ಅವರ ಪಾತ್ರ ಪದಗಳಲ್ಲಿ ಬಣ್ಣಿಸಲಾಗದು”ಎಂದರು.

ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಫ್. ಜಿ. ನವಲಗುಂದ ಮಾತನಾಡಿ” ಪೆಟ್ಲೂರ್ ಅವರ ಮೂಲಕ ಗುರುಮಾತೆಯವರ ಪರಿಚಯವಾಯಿತು. ವಿಕಲಚೇತನ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸಲು ಅವರ ಅವಿರತ ಪರಿಶ್ರಮ ಕಣ್ಣಾರೆ ಕಂಡಿರುವೆ. ದೇವರು ಅವರ ಕುಟುಂಬ ಕ್ಕೆ ಆಯುರಾರೋಗ್ಯ ನೀಡಲಿ”ಎಂದು ಶುಭ ಕೋರಿದರು.

- Advertisement -

ವಿಕಲಚೇತನ ಸಂಪನ್ಮೂಲ ಶಿಕ್ಷಕ ವೈ. ಬಿ. ಕಡಕೋಳ ಮಾತನಾಡಿ “ತಮ್ಮ ಕುಟುಂಬದ ಒಡನಾಟ ವನ್ನು ಸ್ಮರಿಸಿ ತಮ್ಮ ಮಾತೃ ಸ್ವರೂಪದ ಗುರುಮಾತೆಯವರ ನಿವೃತ್ತಿ ನಮಗೆ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತದೆ. ನಾನು ಕಂಪ್ಯೂಟರ್ ನಲ್ಲಿ ಮಾಹಿತಿಯನ್ನು ಮಾಡುತ್ತಿದ್ದರೆ. ಅವರು ಡೈರಿ ಯಲ್ಲಿ ಮಾಹಿತಿಯನ್ನು ಬರೆದಿಡುತ್ತಿದ್ದ ರೀತಿ ಮರೆಯಲಾಗದು. ನಮ್ಮ ಕಂಪ್ಯೂಟರ್ ಪ್ರೋಗ್ರಾಮ್ ರ ಮಲ್ಲಿಕಾರ್ಜುನ ಹೂಲಿ ಮಾಹಿತಿಯನ್ನು ಮಾಡುತ್ತಾ ಏನಾದರೂ ಕೊರತೆಯನ್ನು ಕಂಡರೆ ಟೀಚರ್ ನೀವು ಬರೆದಿಟ್ಟಿರುವ ಭಗವದ್ಗೀತೆ ತನ್ನಿರಿ ಅದರಲ್ಲಿ ಏನಾದರೂ ಮಾಹಿತಿ ಸಿಗಬಹುದು ಎಂದು ಹಾಸ್ಯ ಮಾಡುತ್ತಿದ್ದ.” ಎಂದು ಅವರ ಕಾರ್ಯದಕ್ಷತೆ ನೆನೆದರು.

ಬಿ. ಆರ್. ಪಿ ವೀರಯ್ಯ ಹಿರೇಮಠ ಮಾತನಾಡಿ “ಸಮಯ ಪ್ರಜ್ಞೆ ಮತ್ತು ಸಾತ್ವಿಕತ್ವ ಹೊಂದಿದ ಗುರುಮಾತೆ ನಮಗೆ ಊಟದ ವಿಚಾರದಲ್ಲಿ ತೋರಿಸಿ ದ ಕಾಳಜಿ ಅನನ್ಯ.” ಎಂದರು.

ಮುಖ್ಯೋಪಾಧ್ಯಾಯ ಎಸ್. ಎ. ಸಾಗರ ಮಾತನಾಡಿ ತಮ್ಮ ನಲಿಕಲಿ ಶಿಕ್ಷಕ ವೃತ್ತಿ ದಿನದಲ್ಲಿ ಗುರುಮಾತೆಯವರ ಪರಿಚಯ ನೆನೆದು ನಂತರ ಬಿ. ಐ. ಇ. ಆರ್. ಟಿಯಾಗಿ ಮತ್ತೆ ಜೊತೆಗೆ ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಗೆ ತಂದು ಅವರ ಕಾರ್ಯ ದಕ್ಷತೆ ಕುರಿತು ತಿಳಿಸಿದರು.

ಜೀವನದಲ್ಲಿ ಸೇವಾವಧಿ ಮುಕ್ತಾಯ ಸಹಜ. ಈ ನಡುವೆ ನಮ್ಮ ಲ್ಲಿ ಜರುಗಿದ ಸಿಹಿಕಹಿ ದಿನದಲ್ಲಿ ಕಹಿಯನ್ನು ಮರೆತು ಸಿಹಿ ಯೊಂದಿಗೆ ಮುಂದಿನ ದಿನಗಳು ಸಾಗಲಿ ಎಂದು ಚಿದಾನಂದ ಬಾರ್ಕಿ ಶುಭ ಕೋರಿದರು.

ವೃತ್ತಿಯಲ್ಲಿ ಹಿರಿಯರಾದರೂ ನಮ್ಮಂತಹ ಚಿಕ್ಕ ವರೊಂದಿಗೆ ಬೆರೆಯುವ ರೀತಿ ನೆನೆಯುತ್ತಾ ಗುರುಮಾತೆ ರತ್ನಾ ಸೇತ್ಸನದಿ ಗೆಳತಿಯರ ಅಗಲಿಕೆಯ ಭಾವನಾತ್ಮಕ ಗೀತೆ ಹಾಡಿದ್ದು ಇಡೀ ಕಾರ್ಯಕ್ರಮಕ್ಕೆ ಸ್ಥಬ್ದತೆಯ ಮೌನ ಭಾವನಾತ್ಮಕ ವಿದಾಯದ ಸೂಚಕವಾದಂತೆ ಮೂಡಿ ಬಂದಿತು.

ಶಾಸಕರ ಮಾದರಿ ಶಾಲೆಯ ಪ್ರಧಾನ ಗುರುಗಳಾದ ಎಂ. ಬಿ. ಕಮ್ಮಾರ ಮಾತನಾಡುತ್ತಾ “ತಾವೂ ಅವರೊಂದಿಗೆ ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಗೆ ತಂದುಕೊಂಡು ವಾರ್ಷಿಕ ಕ್ರಿಯಾ ಯೋಜನೆ ರೂಪಿಸುವಲ್ಲಿ ತಮ್ಮ ಪತಿಯವರಿಂದ ಕನ್ನಡ ಮಾಹಿತಿಯನ್ನು ಆಂಗ್ಲ ಭಾಷೆಯಲ್ಲಿ ಅನುವಾದ ಮಾಡಿಸಿಕೊಂಡು ಬಂದು ಮನೆಯವರೆಲ್ಲರೂ ಇಲಾಖೆಯ ಒಂದು ಅವಿಭಾಜ್ಯ ಅಂಗ ವಾಗಿ ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಗೆ ತಂದುಕೊಂಡು ಅವರ ಕುಟುಂಬ ಸದಾ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಆಶಿಸಿದರು.

ಖ್ಯಾತ ಕಲಾವಿದರು ಸಾಹಿತಿಗಳಾದ ಜಯಂತಿ ರೇವಡಿ ಗುರುಮಾತೆ ಕುರಿತು ರಚಸಿದ ಕವನ ವಾಚನ ಮಾಡಿದರು.

ಬಿಐಇಆರ್ ಟಿ ಎಸ್. ಬಿ. ಬೆಟ್ಟದ ಮಾತನಾಡಿ “ಇಂದು ನಾವು ಅವರ ನಿವೃತ್ತಿ ಹೊಂದಿದ ದಿನ ಕಾರ್ಯ ಕಾರ್ಯಕ್ರಮ ಮಾಡದೇ ಬದುಕಿನ ಮತ್ತೊಂದು ಹೊಸ ಇನಿಂಗ್ಸ್ ಆರಂಭವಾಯಿತು ಎಂಬಂತೆ ಷಷಬ್ಧಿ ಸಮಾರಂಭದ ರೀತಿಯಲ್ಲಿ ದಂಪತಿಗಳನ್ನು ಗೌರವಿಸುತ್ತಿರುವೆವು”ಎಂದು ಅವರ ಕುಟುಂಬಕ್ಕೆ ಶುಭ ಕೋರಿದರು.

ಡಾ. ಬಿ. ಐ. ಚಿನಗುಡಿ ಈ ಕಾರ್ಯ ಕ್ರಮಕ್ಕೆ ಸಾಕ್ಷಿ ಯಾದವರ ಎಲ್ಲರನ್ನೂ ನೆನೆದರು.

ತಾಲೂಕಿನ ಎಲ್ಲಾ ಸಿ. ಆರ್. ಪಿಗಳು ಉಪಸ್ಥಿತಿಯಲ್ಲಿ ಬಿ. ಆರ್. ಸಿ ವತಿಯಿಂದ.ಹಾಗೂ ಶಾಸಕರ ಮಾದರಿ ಶಾಲೆಯ ವತಿಯಿಂದ. ಪೆಟ್ಲೂರ ದಂಪತಿಗಳು ಹಾಗೂ ಎಸ್. ಎ. ಸಾಗರ ಮತ್ತು ತಿಮ್ಮಯ್ಯ ಮತ್ತು ಸಂಗಮ ಗುರುಮಾತೆ ಯವರ ಸಹೋದರ ಕುಟುಂಬದ ವತಿಯಿಂದ ಸನ್ಮಾನ ಗೌರವಗಳು ಜರುಗಿದವು.

ಗುರುಮಾತೆ ಯವರ ತಾಯಿ ತಮ್ಮ ಇಳಿ ವಯಸ್ಸಿನಲ್ಲೂ ಲವಲವಿಕೆಯಿಂದ ಬಂದು ಮಗಳ ಮುಡಿಗೆ ಹೂ ಮೂಡಿಸಿದ್ದು ಹೃದಯಸ್ಪರ್ಶಿ ಯಾದ ಕ್ಷಣ.

ಮೌಲ್ಯಯುತ ಶಿಕ್ಷಣ ನೀಡುತ್ತಾ ಶಿಕ್ಷಣ ರಂಗದಲ್ಲಿ ಹಲವಾರು ಚೇತನಗಳಿಗೆ ಸ್ಫೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಗುರುಮಾತೆ ಯವರಿಗೆ ಈ ಬೀಳ್ಕೊಡುಗೆ ತಮ್ಮ ನಿವೃತ್ತಿ ಜೀವನವನ್ನು ಮತ್ತೊಂದು ಇನಿಂಗ್ಸ್ ಆರಂಭಿಸಲು ಇಲಾಖೆಯ ಈ ಕಾರ್ಯ ವಿಶಿಷ್ಟವಾದ ರೀತಿಯಲ್ಲಿ ಜರುಗಿತು. ನಂತರ ಮಾತನಾಡಿದ ಗುರುಮಾತೆ ತಾವೆಲ್ಲರೂ ನೀಡಿದ ಈ ಸನ್ಮಾನ ಮರೆಯಲಾಗದು. ಮಕ್ಕಳ ಶಿಕ್ಷಣ ದಲ್ಲಿ ನನ್ನ ಸೇವೆ ನಾನು ನಿರ್ವಹಿಸಿರುವೆ.ನನ್ನ ತಂದೆಯ ಆದರ್ಶ ನನಗಿದೆ. ಅವರಿಲ್ಲದ ಕೊರಗು ತಾಯಿ ಮರೆಸುವ ಮೂಲಕ ಮಗಳನ್ನು ಈ ವೇದಿಕೆಯಲ್ಲಿ ಬಂದು ಹರಿಸುವಂತೆ ಮಾಡಿದಿರಿ. ಇದಕ್ಕಿಂತ ದೊಡ್ಡ ಸೌಭಾಗ್ಯ ಮತ್ತೊಂದು ನನಗಿಲ್ಲ ಉತ್ತಮ ಪತಿ ದೇವರು ಒಳ್ಳೆಯ ಮಕ್ಕಳು ನನ್ನ ಸೌಭಾಗ್ಯ. ಮತ್ತೊಂದು ಜನ್ಮ ಇದೆಯೆಂದಾದರೆ ಮುನವಳ್ಳಿ ಯವರ ಧರ್ಮಪತ್ನಿ ಯಾಗುವ ಅವಕಾಶ ನನಗೆ ದೇವರು ಕರುಣಿಸಲಿ ಎಂದು ಹೃದಯ ತುಂಬಿ ನುಡಿದ ನುಡಿಗಳು ಗುರುಮಾತೆ ಯವರ ಕಣ್ಣಂಚಿನಲ್ಲಿ ನೀರು ಜಿಣುಗುವಂತೆ ಮಾಡಿದ್ದವು.

ಅವರ ಪತಿ ಮುನವಳ್ಳಿ ಯವರೂ ಕೂಡ ಈ ಕಾರ್ಯ ಕ್ರಮ ಸೊಗಸಾಗಿ ಆಯೋಜಿಸಿ ದಂಪತಿಗಳನ್ನು ಗೌರವಿಸಿ ದ ತಮಗೆ ಕೃತಜ್ಞತೆ ಗಳು ಎಂದು ನುಡಿದರು.

ಮಗ ಸೊಸೆ ಮೊಮ್ಮಗಳು ಸೇರಿದಂತೆ ಕುಟುಂಬದ ಎಲ್ಲರೊಂದಿಗೆ ಭಾವಚಿತ್ರ ತಗೆಸಿಕೊಳ್ಳುವ ಮೂಲಕ ಕಾರ್ಯ ಕ್ರಮ ಕೊನೆಗೊಂಡಿತು.

ಗುರುಮಾತೆ ರತ್ನಾ ಸೇತ್ಸನದಿ ಕಾರ್ಯ ಕ್ರಮ ನಿರೂಪಿಸಿದರು. ರಾಜು ಭಜಂತ್ರಿ ಸ್ವಾಗತಿಸಿದರು. ಜಯಂತಿ ರೇವಡಿ ಪ್ರಾರ್ಥನಾ ಗೀತೆ ಹಾಡಿದರು. ಡಾ. ಬಿ. ಐ. ಚಿನಗುಡಿ ವಂದಿಸಿದರು.


ವೈ. ಬಿ. ಕಡಕೋಳ

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group