- Advertisement -
ಬೀದರ – ಬೀದರ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಅಮರ ಖಂಡ್ರೆ ಬಣವು ಹಣಬಲ, ಅಧಿಕಾರ ಬಲದಿಂದ ಗೆದ್ದಿರುವುದು ಸ್ಪಷ್ಟ ಎಂದು ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಆರೋಪಿಸಿದರು.
ಕಳೆದ ೩೮ ವರ್ಷಗಳಿಂದ ಅವಿರೋಧ ಆಡಳಿತ ಮಂಡಳಿಯನ್ನು ಕಂಡಿದ್ದ ಬೀದರ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಗಮಾರಪಳ್ಳಿ ಕುಟುಂಬದ ಆಡಳಿತಕ್ಕೆ ಬ್ರೇಕ್ ಬಿದ್ದಂತಾಗಿದೆ.
ಬುಧವಾರ ನಡೆದ ಬೀದರ್ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಚಿವ ಈಶ್ವರ ಖಂಡ್ರೆ ಸಹೋದರ ಅಮರ ಖಂಡ್ರೆ ಪ್ಯಾನಲ್ ಗೆ ಭರ್ಜರಿ ಗೆಲುವು ಸಿಕ್ಕಿದೆ
- Advertisement -
ಅಮರ ಖಂಡ್ರೆ ಬಣವು ೧೨ ಪ್ಯಾನಲ್ ಗಳಲ್ಲಿ ೮ ಸ್ಥಾನ ಗೆದ್ದು ಬೀಗಿದ್ದು, ಉಮಾಕಾಂತ ನಾಗಮಾರಪಳ್ಳಿ ಪ್ಯಾನೆಲ್ ಗೆ ಭಾರಿ ಮುಖಭಂಗವಾಗಿದೆ. ಇದರಿಂದ ಬೀದರ ಡಿಸಿಸಿ ಬ್ಯಾಂಕ್ ನಲ್ಲಿ ೩೮ ವರ್ಷಗಳ ನಂತರ ನಾಗಮಾರಪಳ್ಳಿ ಆಡಳಿತಕ್ಕೆ ಕೊನೆ ಸಿಕ್ಕಂತಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ