spot_img
spot_img

ಅಮುಗೆ ರಾಯಮ್ಮ ಮತ್ತು ಗಂಗಾoಬಿಕೆ

Must Read

spot_img
- Advertisement -

ರಾಯಮ್ಮ ಎನ್ನುವ ಇಬ್ಬರು ಶರಣೆಯರಿದ್ದಾರೆ. ರಾಯಸದ ಮಂಚಣ್ಣನವರ ಪತ್ನಿಯಾಗಿದ್ದ ರಾಯಮ್ಮ ಒಂದು ವಚನ ರಚಿಸಿದರೆ, ಅಮುಗೆ ದೇವಯ್ಯನವರ ಪತ್ನಿ ರಾಯಮ್ಮನವರು 116 ವಚನಗಳನ್ನು ರಚಿಸಿದ್ದಾರೆ ಎಂದು ಶರಣೆ ಸರಸ್ವತಿ ಬಿರಾದಾರ ಹೇಳಿದರು.

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ ಮತ್ತು ತಾಯಿಯವರಾದ ಲಿಂ. ಶರಣೆ ಅಕ್ಕಮಹಾದೇವಿ ಪಾಟೀಲ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 23 ನೆಯ ದಿವಸ ಮಾತನಾಡಿದರು.

ಅಮುಗೆ ರಾಯಮ್ಮನವರ ಮೊದಲ ಹೆಸರು ವರದಾನಿ ಎಂದು ಇತ್ತು. ಇವರದು ನೇಯ್ಗೆಯ ಕಾಯಕವಾಗಿತ್ತು.ಒಂದು ಪ್ರಸಂಗದಲ್ಲಿ ದಂಪತಿಗಳು ಸೊನ್ನಲಿಗೆಯನ್ನು ಬಿಟ್ಟು ಬಸವಕ್ರಾಂತಿಯ ಕೇಂದ್ರವಾಗಿದ್ದ ಕಲ್ಯಾಣಕ್ಕೆ ಹೋದರು, ಕಲ್ಯಾಣದ ಅನುಭವಗೋಷ್ಠಿಯಲ್ಲಿ ಪಾಲ್ಗೊಂಡು, ವಚನಗಳನ್ನು ರಚಿಸಲು ಶುರು ಮಾಡಿದರು.

- Advertisement -

ಕಲ್ಯಾಣಕ್ರಾಂತಿಯ ನಂತರ ಪುಳಜೆ ಗ್ರಾಮಕ್ಕೆ ಬಂದು, ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ ಎಂದು ಹೇಳುತ್ತಾ, ಮಧ್ಯೆ ಮಧ್ಯೆ ಅವರು ಬರೆದ ವಚನಗಳ ವಿಶ್ಲೇಷಣೆಯನ್ನು ಅರ್ಥವತ್ತಾಗಿ ಮಾಡುತ್ತಾ ಹೊರಟರು.

ಅಮುಗೆ ರಾಯಮ್ಮನವರ ವಚನನಾoಕಿತ ” ಅಮುಗೇಶ್ವರ ಲಿಂಗ” ವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿರುವ ವಚನಕಾರ್ತಿಯರಲ್ಲಿ ಅಮುಗೆ ರಾಯಮ್ಮ ಕೂಡ ಒಬ್ಬರಾಗಿದ್ದಾರೆ. ಈ ದಂಪತಿಗಳಲ್ಲಿದ್ದ ಲಿಂಗನಿಷ್ಠೆ ಭಕ್ತಿಯನ್ನು ನಾವೆಲ್ಲರೂ ಗಮನಿಸಬಹುದಾಗಿದೆ. ಯಾವುದೇ ಆಸೆ -ಆಮಿಷಗಳಿಗೆ ಒಳಗಾಗದೆ ಶರಣ ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಿದರು ಎಂದು ಸ್ಮರಿಸಿ ತಮ್ಮ ಉಪನ್ಯಾಸ ಮುಗಿಸಿದರು

ಶರಣೆ ಜಯಶ್ರೀ ಆಲೂರ ಅವರು ಗಂಗಾoಬಿಕೆಯವರ ವಚನದೊಂದಿಗೆ ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.

- Advertisement -

ಕಲ್ಯಾಣದಲ್ಲಿ ಚಳವಳಿಯನ್ನು ಪ್ರಾರಂಭ ಮಾಡಿದಾಗ, ಬಸವಣ್ಣನವರ ಜೊತೆಗೆ ಗಂಗಾoಬಿಕೆ ಹೆಗಲುಕೊಟ್ಟು ದುಡಿದರು.ಬಸವಣ್ಣನವರ ಜೀವನದಲ್ಲಿ ಎಲೆಮರೆಯ ಹೂವಿನಂತಿದ್ದವರು.ಕಲ್ಯಾಣದಲ್ಲಿ ಬಸವಣ್ಣನವರು ಅನೇಕ ಪರೀಕ್ಷೆಗಳನ್ನು, ಸವಾಲುಗಳನ್ನೆದುರಿಸುವ ಸಂದರ್ಭಗಳು ಬಂದಾಗ ಗಂಗಾoಬಿಕೆಯವರು ಎದೆಗುಂದದೆ ಧೈರ್ಯ ತುಂಬುತ್ತಿದ್ದರು. ಸಮಸ್ಯೆ ಎಂತಹುದೇ ಇದ್ದರೂ ಅದನ್ನು ಬಗೆಹರಿಸುತ್ತಿದ್ದರು.ಚೆನ್ನಬಸವಣ್ಣನನ್ನೇ ತಮ್ಮ ಮಗನೆಂದು ತಿಳಿದುಕೊಂಡಿದ್ದರು. ಅಲ್ಲಮಪ್ರಭುದೇವನoಥ ಮಹಾಸಾಧಕನ ಮಾರ್ಗದರ್ಶನದಲ್ಲಿ ಪಕ್ವವಾದ ಗಂಗಾoಬಿಕೆಯ ವ್ಯಕ್ತಿತ್ವ ಬಹುದೊಡ್ಡದು ಎಂದು ಸ್ಮರಿಸಿದರು.

ಅವರು ಬರೆದ ವಚನಗಳ ವಿಶ್ಲೇಷಣೆಯನ್ನು ಮಾಡುತ್ತಾ, ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣನವರು ಸಂಗಮಕ್ಕೆ ಹೋದರೆ, ಗಂಗಾoಬಿಕೆ ಶರಣಧರ್ಮದ ರಕ್ಷಣೆಗೆ ಟೊoಕಕಟ್ಟಿ ನಿಲ್ಲುತ್ತಾರೆ. ಮಡಿವಾಳ ಮಾಚಿದೇವ, ಚೆನ್ನಬಸವಣ್ಣನವರ ನೇತೃತ್ವದಲ್ಲಿ ಸಿದ್ಧವಾದ ವೀರಪಡೆಯನ್ನು ಪ್ರೋತ್ಸಾಹಿಸುತ್ತಾರೆ. ಮಡಿವಾಳ ಮಾಚಿದೇವರ ವ್ಯಕ್ತಿತ್ವವನ್ನು, ಅವರ ಶೌರ್ಯವನ್ನು ತನ್ನ ವಚನಗಳಲ್ಲಿ ಹೇಳಿರುವ ಗಂಗಾoಬಿಕೆ, ಅವರು ಕಟ್ಟಿದ್ದ ವೀರಪಡೆಯನ್ನು ಬೆಳೆಸಲು ಮಾತೃರಕ್ಷಣೆ ನೀಡುತ್ತಾರೆ. ವಚನಗಳ ಕಟ್ಟುಗಳನ್ನು ಹೊತ್ತುಕೊಂಡು ಶರಣರು ಮಲಪ್ರಭಾ ನದಿತೀರದ ಕಾದ್ರೊಳ್ಳಿಗೆ ಬರುತ್ತಾರೆ. ಉಳವಿಗೆ ಹೊರಟ ಈ ಶರಣಸಮೂಹ, ಬಿಜ್ಜಳನ ಸೈನ್ಯದೊಂದಿಗೆ ಸೆಣೆಸುತ್ತದೆ. ಈ ಹೋರಾಟದಲ್ಲಿ ವೀರವನಿತೆಯಂತೆ ಭಾಗವಹಿಸಿದ್ದ ಗಂಗಾoಬಿಕೆಯವರು ಅಲ್ಲಿಯೇ ವೀರಮರಣವನ್ನುಪ್ಪುತ್ತಾರೆ. ಅಲ್ಲಿಯೇ ಮಲಪ್ರಭಾ ನದಿಯ ದಂಡೆಯ ಮೇಲೆ ಇರುವ ಸಮಾಧಿ ಇಂದಿಗೂ ಸ್ಮಾರಕವಾಗಿ ಉಳಿದಿದೆ.

ಶರಣ ಅರ್. ವಿ. ಪಾಟೀಲ ಸರ್ ಅವರು ಸಮಾಜ ವಿಮರ್ಶೆ ಮಾಡುವ ಕೆಲಸ, ಛಲ, ನಿಷ್ಠುರತೆ, ಮನಶುದ್ಧಿ, ಅರಿವೇ ಗುರು ಎನ್ನುವ ಅಮುಗೆ ರಾಯಮ್ಮ ಅವರ ಬಗೆಗೆ ಹೇಳುತ್ತಾ, ಶರಣರು ಸೃಷ್ಟಿ -ಸ್ಥಿತಿ -ಲಯದ ಸಾಮರಸ್ಯ, ದೈವತ್ವಕ್ಕೆ ಏರುವ ಪ್ರಕ್ರಿಯೆ, ಅಂತರಂಗದ ಅರಿವಿನ ಜ್ಞಾನ, ಮಾತು ಶುದ್ಧವಾಗಿಟ್ಟುಕೊಳ್ಳುವುದು, ಶೂನ್ಯತ್ವಕ್ಕೆ ಏರುವುದನ್ನು ಕಲಿಸಿಕೊಟ್ಟ 12 ನೆಯ ಶತಮಾನದ ಶರಣರನ್ನು ಸ್ಮರಿಸಿದರು.ಗಂಗಾoಬಿಕೆಯವರು ಮಗುವಿನ ಅಗಲಿಕೆಯ ಬಗೆಗೆ, ಬಸವಣ್ಣನವರ ಕಾರ್ಯವೈಖರಿಯ ಬಗೆಗೆ, ಪತಿನಿಷ್ಠೆ, ಲಿಂಗನಿಷ್ಠೆಯ ಬಗೆಗೆ ಐದು ವಚನಗಳನ್ನು ಬರೆದಿದ್ದಾರೆ ಎನ್ನುವುದನ್ನು ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ತಿಳಿಸಿದರು.

ಡಾ. ಶಶಿಕಾಂತ ಪಟ್ಟಣ  ಅವರು ಅಮುಗೆ ರಾಯಮ್ಮ ಅವರ ಬಂಡಾಯ ಧೋರಣೆ, ವಸ್ತುನಿಷ್ಠೆ, ಸತ್ಯಪ್ರತಿಪಾದನೆಯನ್ನು ಹೇಳುತ್ತಾ, ಗಂಗಾoಬಿಕೆ ಹೇಗೆ ಕ್ರಿಯಾಶೀಲ ಮಡದಿಯಾಗಿದ್ದಳು, ಅಷ್ಟಾವರಣ, ಸಮಷ್ಟಿಪ್ರಜ್ಞೆಯ ಮೂರ್ತಿಯಾಗಿದ್ದಳು ಎಂದು ಹೇಳುತ್ತಾ, ವಚನ ಮೀಮಾoಸೆಯ ಬಗೆಗೂ ಸಹ ನಮ್ಮ ಜೊತೆಗೆ ಹಂಚಿಕೊಂಡರು.

ಡಾ.ತಾರಾ. ಬಿ. ಎನ್. ಅವರಿಂದ ವಚನ ಪ್ರಾರ್ಥನೆ, ಡಾ. ಮೀನಾಕ್ಷಿ ಪಾಟೀಲ್ ಅವರಿಂದ ಸ್ವಾಗತ -ಪ್ರಾಸ್ತಾವಿಕ-ಪರಿಚಯ, ಡಾ. ಆಶಾ ಗುಡಿ ಅವರಿಂದ ಶರಣು ಸಮರ್ಪಣೆ, ಶರಣೆ ರೇಣುಕಾ ಬಾಗಲಕೋಟೆ ಅವರಿಂದ ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಚಿತ್ರ ಕೃಪೆ : ಅಂತರ್ಜಾಲ

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ

- Advertisement -
- Advertisement -

Latest News

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಮಹತ್ತರವಾದುದು – ಸಿದ್ಧಲಿಂಗ ಕಿಣಗಿ

ಸಿಂದಗಿ; ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group