ಶ್ರೀ ವಿಶ್ವೇಶತೀರ್ಥ ಉವಾಚಿತ ಕಥೆಗಳ ಸಂಗ್ರಹಗಳು

Must Read

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!

ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.

- Advertisement -

ಎಂಟುದಶಕಗಳ ಸಂನ್ಯಾಸಜೀವನ ನಡೆಸಿದ್ದ ಪೇಜಾವರಮಠದ ಪೂಜ್ಯ ವಿಶ್ವೇಶತೀರ್ಥ ಸ್ವಾಮಿಜೀ, ತಮ್ಮ ಸಾವಿರಾರು ಆಶೀರ್ವಚನ- ಪ್ರವಚನಗಳಲ್ಲಿ ಹೇಳಿದ ಕಥೆಗಳು ಸಾವಿರಾರು. ಅವೆಲ್ಲವೂ ಕೂಡ ಭಾರತೀಯ ಸಂಸ್ಕೃತಿ, ಪರಂಪರೆ, ಜನಜೀವನ, ಜೀವನಮೌಲ್ಯಗಳು, ಸದಾಚಾರಗಳನ್ನು ಸುಲಭವಾಗಿ ಸರಳವಾಗಿ ಪರಿಚಯಿಸುವ ಕಥೆಗಳು, ದೃಷ್ಟಾಂತಕಥೆಗಳು.

ಪೂಜ್ಯರು ಹೇಳಿದ ಕಥೆಗಳಲ್ಲೇ ತಮಗೆ ದೊರೆತಷ್ಟನ್ನು ಸಂಪಾದಿಸಿ, ಪುಸ್ತಕರೂಪದಲ್ಲಿ ತಂದಿದ್ದಾರೆ, ರಾಮಕುಂಜದ ಟಿ. ನಾರಾಯಣಭಟ್ಟರು. ‘ವಿಶ್ವಸಂದೇಶ: ಪೂರ್ವಾರ್ಧ, ಉತ್ತರಾರ್ಧ’, ವಿಶ್ವಕಥಾಕುಂಜ’ ಹೆಸರಿನ ಈ ಮೂರು ಪುಸ್ತಕಗಳಲ್ಲಿ ಆರುನೂರಕ್ಕೂ ಹೆಚ್ಚಿನ ಕಥೆಗಳಿವೆ. ಪುಟ, ಅರ್ಧಪುಟದಷ್ಟಿರುವ ಒಂದೊಂದು ಕಥೆಯೂ ಗಾತ್ರದಲ್ಲಿ ಚಿಕ್ಕದು; ಅದು ನಿರ್ವಹಿಸುವ ಪಾತ್ರದಲ್ಲಿ ಬಹಳ ದೊಡ್ಡದು.

ಅಜ್ಜ-ಅಜ್ಜಿಯರಿಗೆ, ತಾಯಿ-ತಂದೆಯರಿಗೆ, ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರಿಗೆ, ವ್ಯಕ್ತಿತ್ವವಿಕಸನ ತರಬೇತುದಾರರಿಗೆ, ಭಾಷಣಕಾರರಿಗೆ ಮಾಹಿತಿಕಣಜವಾಗಿ_ ಕಥಾಕಣಜವಾಗಿ ಒದಗಿಬರುವ ಈ ಕೃತಿಗಳು ಸಾಮಾನ್ಯ ಓದಿಗೂ ಹೇಳಿಮಾಡಿಸಿದಂತಿವೆ! ಪುಟ್ಟಮಕ್ಕಳೂ ಕುತೂಹಲದಿಂದ ಓದುವಂತಿವೆ. ಮೂರನ್ನೂ ಓದಿ ಮುಗಿಸುವಾಗ ಪೂಜ್ಯ ಸ್ವಾಮಿಜೀಯವರ ಕಥಾಸಂಗ್ರಹವನ್ನು ಕುರಿತು ಬೆರಗು, ಅಚ್ಚರಿ ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ.

ಆಸಕ್ತರು ಈ ಮೂರೂ ಪುಸ್ತಕಗಳನ್ನು ಖರೀದಿಸಲು WhatsApp ಮಾಡಿ : 7483681708

- Advertisement -
- Advertisement -

Latest News

ಆಹಾರ ಧಾನ್ಯದ ಕಿಟ್ ವಿತರಣೆ

ಸವದತ್ತಿ - ಕೋರೋನಾ ರೋಗ ಹರಡದಂತೆ ನೋಡಿಕೊಳ್ಳಲು ಸರಕಾರ ಲಾಕ್ ಡೌನ ಮಾಡಿದ್ದರಿಂದ ನಮ್ಮ ಬ್ರಾಹ್ಮಣ ಸಮಾಜದ ಕುಟುಂಬದವರಿಗೆ ಜೀವನ ಸಾಗಿಸಲು ತುಂಬಾ ಕಷ್ಟವಾಗಿದ್ದು ಆದ್ದರಿಂದ...
- Advertisement -

More Articles Like This

- Advertisement -
close
error: Content is protected !!