spot_img
spot_img

SDPI, PFI ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

Must Read

- Advertisement -

ಸಿಂದಗಿ: ಹಿಂದೂ ಸಮಾಜದಲ್ಲಿ ಸಾಮರಸ್ಯ ಕೆಡಿಸುತ್ತಾ, ದೇಶದ್ರೋಹ,ಭಯೋತ್ಪಾದನೆ ಕೆಲಸ ಮಾಡುತ್ತಿರುವ SDPI ಮತ್ತು PFI ಸಂಘಟನೆಗಳನ್ನು ನಿಷೇಧಿಸಬೇಕು ಎಂದು ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಿಂದಗಿ ಹಾಗೂ ಹಿಂದೂಪರ ಸಂಘಟನೆಗಳ ಒಕ್ಕೂಟದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗದ ಕೋಟೆ ಪ್ರಖಂಡ ಬಜರಂಗದಳದ ಸಹಸಂಯೋಜಕ ಹರ್ಷ ಅವರನ್ನು ಮತಾಂಧ,ದೇಶದ್ರೋಹಿ SDPI ಮತ್ತು PFI ದುಷ್ಕರ್ಮಿಗಳು ನಿನ್ನೆ ರಾತ್ರಿ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ ಸಂಗತಿ.ಕಳೆದ ಹಲವಾರು ವರ್ಷಗಳಿಂದ ವ್ಯವಸ್ಥಿತವಾಗಿ ಹಿಂದೂಗಳ ಮಾರಣ ಹೋಮ ಮಾಡುತ್ತಿದ್ದಾರೆ. ಎರಡು ತಿಂಗಳ ಹಿಂದೆ ತುಮಕೂರು ಜಿಲ್ಲಾ ಬಜರಂಗದಳ ಸಂಯೋಜಕ ಮಂಜು ಭಾರ್ಗವ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು, ಶಿವಮೊಗ್ಗದ ನಾಗೇಶ್ ಎನ್ನುವವರ ಮೇಲೆ ಹಲ್ಲೆ ಮಾಡಿದ್ದರು,ಪ್ರಶಾಂತ್ ಪೂಜಾರಿ, ಮಡಿಕೇರಿಯ ವಿಹಿಂಪ ಮುಖಂಡರಾದ ಕುಟ್ಟಪ್ಪ,ಬೆಂಗಳೂರಿನ ರುದ್ರೇಶ್ ಹೀಗೆ ಹಲವಾರು ಮುಗ್ದ ಹಿಂದೂಗಳ ಹತ್ಯೆ ಮಾಡಿದ್ದಾರೆ.ಕೇರಳದಿಂದ ಬಂದು ಇಲ್ಲಿ ಹತ್ಯೆ ಮಾಡುತ್ತಿದ್ದಾರೆ.

ಹರ್ಷ ಕೊಲೆಯ ಕೇಸನ್ನು ಸರ್ಕಾರ NIA ತನಿಖೆಗೆ ಒಪ್ಪಿಸಬೇಕು. ಆದಷ್ಟು ಬೇಗ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಿ ತಹಸೀಲ್ದಾರ್ ಮುಖಾಂತರ ರಾಜ್ಯದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

- Advertisement -

ಈ ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕ ಕಾರ್ಯದರ್ಶಿ ಶೇಖರಗೌಡ ಹರನಾಳ, ಅಧ್ಯಕ್ಷ ಡಾ. ಶರಣಗೌಡ ಬಿರಾದಾರ, ಬಜರಂಗದಳ ತಾಲೂಕ ಸಂಯೋಜಕ ಯಮನಪ್ಪ ಚೌಧರಿ, ಆಜಾದ್ ಯುವ ವೇದಿಕೆಯ ಅಧ್ಯಕ್ಷ ಅಶೋಕ ನೇಗಿನಾಳ, ಶ್ರೀರಾಮ್ ಸೇನಾ ಜಿಲ್ಲಾಧ್ಯಕ್ಷ ರಾಕೇಶ್ ಮಠ, ವಿನೋದ ಬಡಿಗೇರ, ರಮೇಶ ಬ್ಯಾಕೋಡ, ನಿಂಗರಾಜ್ ಬಗಲಿ, ಪ್ರಶಾಂತ ಬಗಲಿ, ಬಸವರಾಜ ಬಿರಾದಾರ, ಲಕ್ಷ್ಮಣ ಹೂಗಾರ, ಅನೀಲ ಗುಡ್ಡ್ಯಾಳ, ನೀಲಕಂಠ ರಬಿಶೆಟ್ಟಿ, ಅಮೋಗಿ ಹರವಾಳ, ಸತೀಶ ಕವಲಗಿ, ಸಿದ್ದನಗೌಡ ಅಂಬಳನೂರ, ಸಿದ್ದು ಮಾಲಗಾರ, ದೇವರೆಡ್ಡಿ ಚಿಂಚೋಳಿ ಹಾಗೂ ಹಲವಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.

- Advertisement -
- Advertisement -

Latest News

ಮತ ಯಾರಿಗಾದರೂ ಹಾಕಿ ಆದರೆ NOTA ಕ್ಕೆ ಹಾಕಬೇಡಿ !

ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ನೀವು ಯಾವುದೋ ಒಂದು ಗೊಂದಲದಲ್ಲಿ ಇರುತ್ತೀರಿ. ವಿವಿಧ ಪಕ್ಷಗಳು ತಮ್ಮ ಪ್ರಚಾರದ ವೈಖರಿಯಿಂದ ನಿಮ್ಮನ್ನು ಹಿಡಿದಿಟ್ಟುಕೊಂಡಿವೆ. ಒಂದು ಪಕ್ಷದ ಪ್ರಚಾರ ಸಭೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group