spot_img
spot_img

ಬ್ಯಾಂಕು ಹಾಗೂ ಪೈನಾನ್ಸ, ಬೈಕ್ ಕಳ್ಳರ ಬಂಧನ

Must Read

- Advertisement -

ಸಿಂದಗಿ: ಪಟ್ಟಣದ  ಠಾಣಾ ವ್ಯಾಪ್ತಿಯಲ್ಲಿ ಘಟಿಸುತ್ತಿದ್ದ ಬ್ಯಾಂಕು ಮತ್ತು ಫೈನಾನ್ಸ್ ಗಳ ಕಳ್ಳತನ ಮತ್ತು ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸಿಂದಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣವನ್ನು ಭೇದಿಸಿ ಎರಡು ಪ್ರಕರಣದಲ್ಲಿ ಭಾಗಿಯಾದ 7 ಜನ ಆರೋಪಿಗಳನ್ನು ಬಂಧಿಸಿ ನಗದು ರೂ 2.20 ಲಕ್ಷ ರು ಹಾಗೂ 37 ಬೈಕ್ ವಶಪಡಿಸಿಕೊಂಡು ಇಲಾಖೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ  ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣಿ ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ 2 ಪ್ರಕರಣದಲ್ಲಿ ವಶ ಪಡಿಸಿಕೊಳ್ಳಲಾದ ಬೈಕ್ ಮತ್ತು ಹಣವನ್ನು ಸಾರ್ವಜನಿಕವಗಿ ಪ್ರದರ್ಶಿಸಿ ಮಾತನಾಡಿ, ನನ್ನ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಅಪರಾಧ ವಿಭಾಗ)  ರಾಮನಗೌಡ  ಹಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಕಾ. ಸು) ಶಂಕರ.ಮಾರಿಹಾಳ, ಇಂಡಿ  ಉಪವಿಭಾಗ ಪೊಲೀಸ್ ಉಪಾಧೀಕ್ಷಕ ಜಗದೀಶ ಹೆಚ್ ರವರ ಮಾರ್ಗದರ್ಶನದಲ್ಲಿ  ಸಿ.ಪಿ.ಐ. ನಾನಾಗೌಡ ಪೊಲೀಸ್ ಪಾಟೀಲ,  ಪಿ.ಎಸ್.ಆಯ್.[ಕಾಸು] ಭೀಮಪ್ಪ ರಬಕವಿ ರವರ ನೇತೃತ್ವದಲ್ಲಿ ಸಿಬ್ಬಂದಿಯನ್ನೊಳಗೊಂಡ ಒಂದು ತನಿಖಾ ತಂಡವನ್ನು ರಚಿಸಿ ಆರೋಪಿತಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಸದರಿ ತನಿಖಾ ತಂಡವು ಆರೋಪಿತರ ತಪಾಸಣೆಯಲ್ಲಿ ಇದ್ದಾಗ ಫೇ 08 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಸಿಂದಗಿ ಪಟ್ಟಣದ ಯಂಕಂಚಿ ಬೈ ಪಾಸ್ ದಲ್ಲಿ ಸಂಶಯಾಸ್ಪದವಾಗಿ ಎರಡು ಮೊಟಾರು ಸೈಕಲ್ ಗಳನ್ನು ಆರೋಪಿತರು ಚಲಾಯಿಸಿಕೊಂಡು ಬರುತ್ತಿರುವಾಗ ಆರೋಪಿತರಾದ ಬಸವರಾಜ ತಂದೆ ಭೀಮಣ್ಣ ಹುಣಸಿಗಿಡದ, ವಯಾ-31, ಹುಲುಗಪ್ಪ ತಂದೆ ಮರೆಪ್ಪ ಕೂಕಲೋರ, ವಯಾ-22, ಕೊಂಡಯ್ಯ ತಂದೆ ಭೀಮರಾಯ ಪಾರ್ವತಿದೊಡ್ಡಿ ವಯಾ-22, ರವಿಕುಮಾರ ತಂದೆ ದೇವೇಂದ್ರಪ್ಪ ಪಾರ್ವತಿದೊಡ್ಡಿ ವಯಾ-21 ವರ್ಷ. ಸಾ: ಎಲ್ಲರೂ ಶಹಾಪೂರ, ಸುರಪೂರ, ಸದರಿಯವರು ನಂಬರ ಪ್ಲೇಟ ಇಲ್ಲದ ಹೊಂಡಾ ಶೈನ್ ಕಂಪನಿಯ ಮೋಟಾರ ಸೈಕಲ್ ಮತ್ತು ಹಿರೋ ಸ್ಟೇಂಡರ ಪ್ಲಸ್ ಕಂಪನಿಯ ಮೋಟಾರ ಸೈಕಲ್‍ಗಳನ್ನು ಚಲಾಯಿಸಿಕೊಂಡು ಸಂಶಯಾಸ್ಪದವಾಗಿ ಹೊರಟಾಗ ನಿಲ್ಲಿಸಿ ವಿಚಾರಿಸಿ ವಶಕ್ಕೆ ಪಡೆದು ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಿದ್ದಾಗ  ಆರೋಪಿತರೆಲ್ಲರೂ ಕೂಡಿಕೊಂಡು ರಾಜನಕೊಳ್ಳೂರ, ಸಿಂದಗಿ, ಯಡ್ರಾಮಿ, ಸೇಡಂ, ಭೀಮರಾಯನಗುಡಿ, ಆರೂರ, ಚಾಮನಾಳ, ಬೂದೂನೂರ, ಹದನೂರ, ನೆಲೋಗಿ, ಜೇವರ್ಗಿ, ಮೂದಬಾಳ, ಮಲ್ಲಾ(ಬಿ), ಮಳ್ಳ, ಅರಕೇರಾ, ಸಲದಾಪೂರ, ಜಾಲಹಳ್ಳ, ಕೊಡೇಕಲ್, ಶಿರಾಳ, ನೆಲ್ಲೋಗಿ, ತಾಳಕೋಟಿ. ಇನ್ನೂ ಇತರೆ ಪಟ್ಟಣಗಳಿಗೆ ಮತ್ತು ಗ್ರಾಮಗಳಿಗೆ ಹೋಗಿ ಅಲ್ಲಿರುವ ಜಮೀನಗಳ ದಂಡೆಯಲ್ಲಿ ಮತ್ತು ಇತರೆ ಜಾಗೆಗಳಲ್ಲಿ ನಿಲ್ಲಿಸಿದ ಮೋಟಾರ ಸೈಕಲಗಳ ಹಾಂಡ್ ಲಾಕ್ ಮುರಿದು ಡೈರೆಕ್ಟ್ ಮಾಡಿ ಅವುಗಳನ್ನು ಕಳವು ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿತರ ಬಂಧನದಿಂದ ಸಿಂಧಗಿ, ಕೋಡೆಕಲ್, ಯಡ್ರಾಮಿ, ಕೆಂಬಾವಿ, ನೆಲೋಗಿ, ಗೋಗಿ, ಜೇವರ್ಗಿ, ತಾಳಿಕೋಟಿ ಠಾಣೆಯ ಸರಹದ್ದಿನ ಪ್ರಕರಣಗಳು ಪತ್ತೆಯಾಗಿದ್ದು, ಹೀಗೆ 16,65,000=00 ರೂ. ಕಿಮ್ಮತ್ತಿನ ಒಟ್ಟು 37 ಮೋಟಾರು ಸೈಕಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಫೇ. 10 ರಂದು ಮಧ್ಯಾಹ್ನ 4.00 ಗಂಟೆ ಸುಮಾರಿಗೆ ಸಿಂದಗಿ ಆಲಮೇಲ ರೋಡ ಢಾಲಫೀನ್ ದಾಬಾ ಹತ್ತಿರ ವಾಹನಗಳ ತಪಾಸಣೆಯಲ್ಲಿ ತೊಡಗಿದಾಗ ಆರೋಪಿತರಾದ ಪ್ರಭು ತಂದೆ ಶಿವಪ್ಪ ಹಲಗಿ ವಯಾ-32, ಕಾರ ಚಾಲಕ ಅನೀಲ ತಂದೆ ಸುರೇಶ ನಾಯ್ಕೋಡಿ ವಯಾ-32. ಬಸವರಾಜ ತಂದೆ ಲಕ್ಷ್ಮಣ ಮಾದರ, ವಯಾ-28 ಎಲ್ಲರೂ ಸಾ: ಗೋಲಿಬಾರ ಮಡ್ಡಿ ಓಣಿ ಸಿಂದಗಿ 03 ಜನರು ಕೂಡಿ ಸಿಂದಗಿ ಪಟ್ಟಣದಲ್ಲಿರುವ ಅನ್ನಪೂರ್ಣ ಫೈನಾನ್ಸ್ ಕಳ್ಳತನ ಪ್ರಕರಣ, ಇಂಡಿ ಪಟ್ಟಣದ ಪಿ.ಕೆ.ಪಿ.ಎಸ್ ಬ್ಯಾಂಕು ಕಳ್ಳತನ ಅಲ್ಲದೆ ಸಿಂದಗಿ ಪಟ್ಟಣದ ಎಲ್ & ಟಿ ಫೈನಾನ್ಸ್‍ನ್ನು ಕಳ್ಳತನ ಮಾಡಲು ಯತ್ನಿಸಿದ ಪ್ರಕರಣ ಹೀಗೆ ಒಟ್ಟು 03 ಪ್ರಕರಣಗಳಲ್ಲಿ ಒಟ್ಟು ನಗದು ಹಣ 2,20,000/-ರೂಗಳನ್ನು ಜಪ್ತ ಮಾಡಿಕೊಂಡಿದ್ದು ಹಾಗೂ ಕಳ್ಳತನ ಮಾಡಲು ಬಳಸಿದ ಕಾರನ್ನು ಸಹ ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವುದು. ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group