ನಂಬಿ ಕೆಟ್ಟವರಿಲ್ಲ ಎನ್ನುವುದರಲ್ಲಿ ಸತ್ಯವಿದೆ.
ಯಾರು ನಿನ್ನ ನೀ ತಿಳಿದು ನಡೆ ಎನ್ನುವರೋ ಅವರು ನಿಮ್ಮನ್ನು ಸ್ವತಂತ್ರವಾದ ಜೀವನ ತೋರಿಸುತ್ತಾರೆ, ನನ್ನ ನಂಬಿ ನಡೆ ಎನ್ನುವವರು ನಿಮ್ಮನ್ನು ಜೀವನ ಎಂದರೆ ಇಷ್ಟೆ ಎನ್ನುವ ಸತ್ಯ ತೋರಿಸಿ ಕೈ ಬಿಡುತ್ತಾರೆ. ಕೊನೆಯವರೆಗೂ ಯಾರೂ ಇರೋದಿಲ್ಲ.ಹೀಗಾಗಿ ನಿನ್ನ ಒಳಗಿನ ಸತ್ಯವನ್ನು ನಂಬಿ ನಡೆದರೆ ನೀನು ನೀನಾಗಿರಬಹುದಷ್ಟೆ. ಸತ್ಯವೆ ದೇವರು....
ಕಾರ್ತಿಕ ಮಾಸ ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವೆ. ದೀಪಾವಳಿಯ ನಂತರ ಕಾರ್ತಿಕ ಮಾಸವು ಶುರುವಾಗುತ್ತದೆ. ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ.
ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು...
ಕನ್ನಡ ನಾಡು ಹೆಮ್ಮೆಯ ಬೀಡು.ಸುದೀಘ೯ ಇತಿಹಾಸವನ್ನು ಹೊಂದಿದ ಸಮೃದ್ದ ಸಿರಿವಂತ ನಾಡು.ತನ್ನದೇಯಾದ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ವಿಶಾಲ ಭೂಪ್ರದೇಶವುಳ್ಳ ಬೀಡು.ಇದರಲ್ಲಿ ಉತ್ತರ ಕರ್ನಾಟಕ ಕನ್ನಡದ ಪ್ರಭಾವಿ ನೆಲ.
ಇಲ್ಲಿ ಸಾವಿರಾರು ಶರಣರೂ ಕವಿಗಳೂ ಆಗಿ ಹೋಗಿದ್ದಾರೆ. ಗಡಿನಾಡು ಬೆಳಗಾವಿ ಜಿಲ್ಲೆ ಕನ್ನಡ ನಾಡಿನ ಅವಿಭಾಜ್ಯ ಅಂಗ. ಇದು ಕನ್ನಡದ ಭದ್ರ ನೆಲೆ.ಇಂತಹ ಗಡಿನಾಡಿನಲ್ಲಿ ಕನ್ನಡ ಬೆಳೆಸಿದವರಲ್ಲಿ...
ದೀಪಾವಳಿ
ದೀಪದಿಂದ ದೀಪ ಹಚ್ಚಿ
ಬೆಳಕು ಪರಿಹರಿಸುವಂತೆ
ಮನುಷ್ಯರ ಮನದಿಂದ ಮನಕ್ಕೆ
ಪ್ರೀತಿ,ಸೌಹಾರ್ದತೆ,ಅನುಕಂಪ ಹಚ್ಚಿ
ನಾನು ನನ್ನದೆಂದು ತೊರೆದು
ಹೊಸ ಬೆಳಕು ಮೂಡಲಿ
ಸಹೋದರತೆ ಸಹಬಾಳ್ವೆ ಹೊಮ್ಮಲಿ
ಬಾಳು ಸೌಹಾರ್ದತೆಯ ಪ್ರತೀಕವಾಗಲಿ
ಅಂಧಕಾರವನ್ನು ತೊಡೆದು ಹಾಕಿ
ಜ್ಞಾನ ದೀವಿಗೆ ಹೊತ್ತಿಸಿ
ಅಂತರಂಗದ ಕಣ್ಣು ತೆರೆದು
ನಾವು ನಮ್ಮವರೆಂಬ ಭಾವ ಅರಳಿಸಿ
ಬೇದ ಭಾವ ಕಿತ್ತೆಸೆದು
ನಿಸ್ವಾರ್ಥದ ಬದುಕು ಸಾಗಿಸಿ
ಬಾಳು ನಂದನವನದಂತೆ
ದೀಪಗಳಾಗಿ ಜಗಮಗಿಸಿ ಬೆಳಕು ಚೆಲ್ಲಲಿ
ಚಿದಂಬರ ಬಡಿಗೇರ ಶಿಕ್ಷಕರು
ಹಣವಾಳ.
ಮೂಡಲಗಿ: ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕ ಹಾಯ್ ಬೆಂಗಳೂರ ವಾರ ಪತ್ರಿಕೆಯ ರವಿ ಬೆಳಗೆರೆ ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತೀವ್ರ ಶೋಕ ವ್ಯಕ್ತಪಡಿಸಿದರು.
ಶುಕ್ರವಾರ ನ. 13 ಕಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ನಾಡಿನ ಅನೇಕ ಪತ್ರಿಕೆಯಲ್ಲಿ ಕೆಲಸ ಮಾಡಿರುವ ಅವರು ಅಪಾರ ಓದುಗರನ್ನು, ಅಭಿಮಾನಿಗಳನ್ನು ಸಂಪಾದಿಸಿದ...
ಗೋಕಾಕ : ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ನಿಧನಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಬೆಳಗೆರೆ ಅವರ ನಿಧನದಿಂದ ನಾಡಿಗೆ ಅಪಾರ ನಷ್ಟವಾಗಿದೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ದುಡಿದು...
ನೌಕಾಪಡೆಗೆ ಹೊಸ ಸುಧಾರಿತ ಜಲಾಂತರ್ಗಾಮಿ ನೌಕೆ
ಶಬ್ದಸಂವೇದಿಯಾಗಿರುವ ಸುಧಾರಿತ ಜಲಾಂತರ್ಗಾಮಿ ನೌಕೆ "ವಾಗೀರ್" ಅನ್ನು ಇಂದು ಲೋಕಾರ್ಪಣೆಗೊಳಿಸುವ ಮೂಲಕ ನೌಕಾಪಡೆಯ ಸೇವೆಗೆ ನೀಡಲಾಯಿತು.
ಮುಂಬೈನ ಮಜಗಾಂವ್ ಬಂದರಿನಲ್ಲಿ ಗುರುವಾರದಂದು ವಾಗೀರ್ ಅನ್ನು ಸೇವೆಗೆ ಅಣಿಗೊಳಿಸಲಾಯಿತು.
ರಾಜ್ಯ ರಕ್ಷಣಾ ಸಚಿವ ಶ್ರೀಪಾದ ನಾಯಕ ಅವರ ಪತ್ನಿ ವಿಜಯಾ ಅವರು ಈ ಜಲಾಂತರ್ಗಾಮಿ ಯನ್ನು ಲೋಕಾರ್ಪಣೆಗೊಳಿಸಿದರು. ಶ್ರೀಪಾದ ನಾಯಕ ಅವರು ವಿಡಿಯೋ...
ವಿಳಾಸವದನು ಬಸವಣ್ಣ
ಆಯಿತ್ತು ಬಸವಾ ನಿನ್ನಿಂದ
ಗುರುಸ್ವಾಯತವೆನಗೆ,
ಆಯಿತ್ತು ಬಸವಾ ನಿನ್ನಿಂದ
ಲಿಂಗಸ್ವಾಯತವೆನಗೆ,
ಆಯಿತ್ತು ಬಸವಾ ನಿನ್ನಿಂದ
ಜಂಗಮಸ್ವಾಯತವೆನಗೆ,
ಆಯಿತ್ತು ಬಸವಾ ನಿನ್ನಿಂದ
ಪ್ರಸಾದಸ್ವಾಯತವೆನಗೆ,
ಇಂತೀ ಚತುರ್ವಿಧ ಸ್ವಾಯತವನು
ನೀನೆ ಮಾಡಿದೆಯಾಗಿ
ನಮ್ಮ ಗುಹೇಶ್ವರಲಿಂಗಕ್ಕೆ
ವಿಳಾಸವಾದೆಯಲ್ಲಾ ಸಂಗನಬಸವಣ್ಣಾ.
ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-908 ಪುಟ-271.
ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ,
ಭಾರತೀಯ ಮತ್ತು ಜಗತ್ತಿನ ಎಲ್ಲಾ ಧಾರ್ಮಿಕ ಆಧ್ಯಾತ್ಮಿಕ ಆಚರಣೆ ತತ್ವ ಸಿದ್ಧಾಂತಗಳಲ್ಲಿ ಗುರು ಎಂಬುದು ಪರಕೀಯ ಶಕ್ತಿ ವ್ಯಕ್ತಿ . ಗುರು...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...